ಭಾರತದಲ್ಲಿ ಈ ದಿನದಿಂದ 5G ಸೇವೆ ಲಭ್ಯ .! ಎಷ್ಟಿರಲಿದೆ ಗೊತ್ತಾ ಸ್ಪೀಡ್?
5G India Speed and Launch Date : ಭಾರತದಲ್ಲಿ 4G ನಂತರ 5G ಸೇವೆಗಳನ್ನು ಬಿಡುviಗಡೆ ಮಾಡಲಾಗುತ್ತಿದೆ ಎನ್ನುವ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಹಲವು ಸುದ್ದಿಗಳು ಬರುತ್ತಿದ್ದು, 5ಜಿ ಸ್ಪೆಕ್ಟ್ರಂನ ಹರಾಜು ಕೂಡ ನಡೆಯುತ್ತಿದೆ.
5G India Speed and Launch Date : ಭಾರತದಲ್ಲಿ 4G ನಂತರ 5G ಸೇವೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನುವ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಹಲವು ಸುದ್ದಿಗಳು ಬರುತ್ತಿದ್ದು, 5ಜಿ ಸ್ಪೆಕ್ಟ್ರಂನ ಹರಾಜು ಕೂಡ ನಡೆಯುತ್ತಿದೆ. ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಅದಾನಿ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿವೆ. ಇತ್ತೀಚೆಗೆ, ಸ್ವಾತಂತ್ರ್ಯ ದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ 5G ಕುರಿತು ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
ಭಾರತದಲ್ಲಿ ಎಷ್ಟಿರಲಿದೆ 5G ಸ್ಪೀಡ್ ? :
ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಭಾಷಣದಲ್ಲಿ ತಾಂತ್ರಿಕ ಬೆಳವಣಿಗೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಹೇಳಿದ್ದಾರೆ. ಮೂಲಗಳ ಪ್ರಕಾರ, ಪ್ರಧಾನಿ ತಮ್ಮ ಭಾಷಣದಲ್ಲಿ ಭಾರತದಲ್ಲಿ 5G ವೇಗ ಎಷ್ಟಿರಬಹುದು ಎನ್ನುವ ಮಾಹಿಟಿ ನೀಡಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ 4G ವೇಗಕ್ಕಿಂತ 5G ವೇಗವು ಹತ್ತು ಪಟ್ಟು ಹೆಚ್ಚು ಇರಲಿದೆ ಎಂದು ಹೇಳಲಾಗುತ್ತಿದೆ. 5G ಲ್ಯಾಗ್-ಫ್ರೀ ಸಂಪರ್ಕವನ್ನು ನೀಡಲಿದೆ ಎನ್ನಲಾಗಿದೆ.
ಇದನ್ನೂ ಓದಿ : Budget Smartphone: ಕೇವಲ 14 ಸಾವಿರ ರೂ.ಗೆ ಸಿಗುತ್ತಿದೆ ಕ್ರೇಜಿ 5G ಸ್ಮಾರ್ಟ್‌ಫೋನ್..!
ಭಾರತದಲ್ಲಿ 5G ಬಿಡುಗಡೆ ದಿನಾಂಕ :
ಮುಂಬರುವ ತಿಂಗಳಲ್ಲಿ ಭಾರತದಲ್ಲಿ 5G ಸೇವೆಯನ್ನು ಪ್ರಾರಂಭಿಸಬಹುದು. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಪ್ರಕಾರ, 5G ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಏರ್‌ಟೆಲ್ ಇದೆ ತಿಂಗಳು ಅಂದರೆ ಆಗಸ್ಟ್‌ನಲ್ಲಿಯೇ 5Gಯನ್ನು ರೋಲ್ ಔಟ್ ಮಾಡಲು ಆರಂಭಿಸಲಿದೆ. ಇನ್ನು ಜಿಯೋ ಕೂಡಾ ಆಗಸ್ಟ್‌ನಲ್ಲಿ 5G ಅನ್ನು ಬಿಡುಗಡೆ ಮಾಡಬಹುದು ಎನ್ನುವುದು ಜಿಯೋ ಕಂಪನಿಯ ಆಕಾಶ್ ಅಂಬಾನಿಯವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಆದರೆ Vi ನಿಂದ ಇದುವರೆಗೆ ಈ ಬಗ್ಗೆ ಯಾವುದೇ ಮಾಹಿತಿ ಹೊರ ಬಂದಿಲ್ಲ. ಅದಾನಿ 5G ಅನ್ನು ಸದ್ಯಕ್ಕೆ ಖಾಸಗಿ ನೆಟ್‌ವರ್ಕ್ ಆಗಿ ಮಾತ್ರ ಪ್ರಾರಂಭಿಸಲಾಗುವುದು.
ಇದನ್ನೂ ಓದಿ : ಬಹು ಸಾಧನಕ್ಕಾಗಿ ಒಂದೇ ಚಾರ್ಜರ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ