ನವದೆಹಲಿ: Radio Signals from Space - ಇತ್ತೀಚೆಗಷ್ಟೇ ವಿಜ್ಞಾನಿಗಳು ಬಾಹ್ಯಾಕಾಶದಿಂದ  (Space) ಬರುತ್ತಿರುವ ಕೆಲ ರೇಡಿಯೋ ಸಂಕೇತಗಳನ್ನು ಸೆರೆ ಹಿಡಿದಿದ್ದಾರೆ. ಈ ಈ ಸಂಕೇತಗಳು ಭೂಮಿಯನ್ನು (Earth) ಹೊರತುಪಡಿಸಿ ಈ ಬ್ರಹ್ಮಾಂಡದಲ್ಲಿ ಬೇರೆಲ್ಲೋ ಜೀವವಿದೆ ಎಂಬುದರ ಕುರಿತು ಸಂಕೇತಿಸುತ್ತಿವೆ ಎನ್ನಲಾಗಿದೆ. ಶತಮಾನಗಳಿಂದ, ವಿಜ್ಞಾನಿಗಳು ಭೂಮಿಯನ್ನು ಹೊರತುಪಡಿಸಿ ಬ್ರಹ್ಮಾಂಡದಲ್ಲಿ (Universe) ಬೇರೆಡೆ ಜೀವವಿದೆಯೇ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಇದು ಯಾವಾಗಲೂ ರಹಸ್ಯವಾಗಿ ಉಳಿದಿದೆ. ಆದರೆ ಇತ್ತೀಚೆಗೆ ವಿಜ್ಞಾನಿಗಳು ಇಂತಹ ರೇಡಿಯೋ ಸಂದೇಶವನ್ನು ಸೆರೆ ಹಿಡಿದಿದ್ದಾರೆ, ಅವುಗಳ ಆಧಾರದ ಮೇಲೆ ಬ್ರಹ್ಮಾಂಡದಲ್ಲಿ ಬೇರೆ ಎಲ್ಲೋ ಜೀವವನ ಇದೆ ಎಂಬ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ನೆದರ್ಲ್ಯಾಂಡ್ಸ್ ನಲ್ಲಿ ಸ್ಥಾಪಿಸಲಾಗಿರುವ ಅಂಟಿನಾದಿಂದ ಈ ಸಿಗ್ನಲ್ ಗಳನ್ನು ಸೆರೆ ಹಿಡಿಯಲಾಗಿದೆ
ನೇಚರ್ ಅಸ್ಟ್ರಾನೋಮಿ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಾಹ್ಯಾಕಾಶ ವಿಜ್ಞಾನಿಗಳು (Space Scientists) ರೇಡಿಯೋ ಸಂಕೇತಗಳನ್ನು ಕಳುಹಿಸುತ್ತಿರುವ ನಕ್ಷತ್ರಗಳನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದ್ದಾರೆ. ಬಾಹ್ಯಾಕಾಶದಲ್ಲಿ ಕೆಲವು ಗುಪ್ತ ಗ್ರಹಗಳು ಇರುವುದನ್ನು ಈ ರೇಡಿಯೋ ಸಂಕೇತಗಳು ತೋರಿಸುತ್ತವೆ. ವಿಶ್ವದ ಅತ್ಯಂತ ಶಕ್ತಿಶಾಲಿ ರೇಡಿಯೋ ಆಂಟೆನಾ ಮೂಲಕ ವಿಜ್ಞಾನಿಗಳು ಈ ಸಂಕೇತಗಳನ್ನು ಸೆರೆಹಿಡಿದಿದ್ದಾರೆ. ನೆದರ್‌ಲ್ಯಾಂಡ್ಸ್‌ನಲ್ಲಿರುವ ಕಡಿಮೆ ಆವರ್ತನದ ಆಂಟೆನಾದಿಂದ ವಿಜ್ಞಾನಿಗಳು ಈ ರೇಡಿಯೋ ಸಿಗ್ನಲ್ ಅನ್ನು ಸೆರೆಹಿಡಿದಿದ್ದಾರೆ.


ಅವಿತುಕೊಂಡ ಗ್ರಹಗಳ ಕುರಿತು ಸಿಕ್ಕ ಸಾಕ್ಷಾಧಾರಗಳು
ಬಾಹ್ಯಾಕಾಶದಿಂದ ಸೆರೆಹಿಡಿಯಲಾಗಿರುವ ಈ ರೇಡಿಯೋ ಸಿಗ್ನಲ್‌ಗಳು ವಿಜ್ಞಾನಿಗಳನ್ನು ಅಚ್ಚರಿಗೊಳಿಸಿವೆ. ಇದೀಗ ವಿಜ್ಞಾನಿಗಳು ಭೂಮಿಯನ್ನು ಹೊರತುಪಡಿಸಿ, ಬ್ರಹ್ಮಾಂಡದಲ್ಲಿ ಜೀವನ ಇರುವ ಸಾಧ್ಯತೆಯನ್ನು ನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ, ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ಡಾ ಬೆಂಜಮಿನ್ ಕೋ ಮತ್ತು ಅವರ ತಂಡವು ಈ ಹೊಸ ತಂತ್ರಜ್ಞಾನದಿಂದ ಗುಪ್ತ ಗ್ರಹಗಳನ್ನು ಹುಡುಕುವ ಮೂಲಕ, ಬ್ರಹ್ಮಾಂಡದಲ್ಲಿ ಬೇರೆಡೆ ಇರುವ ಜೀವನದ ಅಸ್ತಿತ್ವಕ್ಕೆ ಬಲ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ. ಈ ರೇಡಿಯೋ ಸಿಗ್ನಲ್ ನಿಂದಾಗಿ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Earth Rotation Video: ಭೂಮಿ ತಿರುಗುವಿಕೆಯನ್ನು ನೀವು ನೋಡಿದ್ದಿರಾ? ಇಲ್ಲಿದೆ ರೋಮಾಂಚಕ ವಿಡಿಯೋ


ಈ ತಂತ್ರಜ್ಞಾನದಿಂದ ಅವಿತುಕೊಂಡಿರುವ ಗ್ರಹಗಳನ್ನು ಪತ್ತೆಹಚ್ಚಲಾಗುತ್ತಿದೆ
ಬಾಹ್ಯಾಕಾಶ ವಿಜ್ಞಾನಿಗಳು ಬ್ರಹ್ಮಾಂಡದಲ್ಲಿ ಅವಿತುಕೊಂಡಿರುವ ಇತರ ಗ್ರಹಗಳನ್ನು ಫ್ರಿಕ್ವೆನ್ಸಿ ಎರಾ ತಂತ್ರಜ್ಞಾನದ ಮೂಲಕ ಪತ್ತೆಹಚ್ಚುತ್ತಿದ್ದಾರೆ.  ವರದಿಯ ಪ್ರಕಾರ, ಬಾಹ್ಯಾಕಾಶ ವಿಜ್ಞಾನಿಗಳು 19 ದೂರದ ಕೆಂಪು ಡ್ವಾರ್ಫ್ ಸಿಗ್ನಲ್ ಗಳನ್ನುಸೆರೆಹಿಡಿದಿದ್ದಾರೆ. ಇವುಗಳಲ್ಲಿರುವ ನಾಲ್ಕು ಸಿಗ್ನಲ್ ಗಳಿಂದ ಈ ನಕ್ಷತ್ರಗಳ ಅಕ್ಕ ಪಕ್ಕ ಇತರೆ ಗ್ರಹಗಳಿರುವುದು ಸ್ಪಷ್ಟವಾಗುತ್ತದೆ.


ಇದನ್ನೂ ಓದಿ-Earth Rotation:ಭೂಮಿ ತಿರುಗುವಿಕೆ ವೇಗದಲ್ಲಿ ಹೆಚ್ಚಳ, ದಣಿದ ಗಡಿಯಾರಗಳು, ಆತಂಕಕ್ಕೊಳಗಾದ ವಿಜ್ಞಾನಿಗಳು


ನಕ್ಷತ್ರಗಳಿಂದ ಕಾಂತೀಯ ಅಲೆಗಳು ಬರುವ ಸ್ಪಷ್ಟ ಸಾಕ್ಷ್ಯಾಧಾರ
ಬಾಹ್ಯಾಕಾಶ ವಿಜ್ಞಾನಿಗಳು ಬ್ರಹ್ಮಾಂಡದ ಇತರ ಗ್ರಹಗಳನ್ನು ದೀರ್ಘಕಾಲದಿಂದ  ಹುಡುಕುತ್ತಿದ್ದಾರೆ. ವಿಜ್ಞಾನಿಗಳು ನಮ್ಮ ಸ್ವಂತ ಸೌರವ್ಯೂಹದಲ್ಲಿರುವ ಗ್ರಹಗಳು ಶಕ್ತಿಯುತ ರೇಡಿಯೋ ಅಲೆಗಳನ್ನು ಕಳುಹಿಸುತ್ತವೆ, ಏಕೆಂದರೆ ಅವುಗಳ ಕಾಂತೀಯ ಕ್ಷೇತ್ರವು ಸೌರ ಮಾರುತವನ್ನು ಸಂಧಿಸುತ್ತದೆ ಎಂದು ತಿಳಿದಿರುವುದಾಗಿ ಹೇಳುತ್ತಾರೆ. ಆದರೆ ನಮ್ಮ ಸೌರವ್ಯೂಹದ ಹೊರಗಿನ ಗ್ರಹಗಳಿಂದ ಹೊರಹೊಮ್ಮುವ ರೇಡಿಯೋ ಅಲೆಗಳನ್ನು ಇನ್ನೂ ಹಿಡಿಯಲಾಗಿಲ್ಲ. ಈ ಮೊದಲು, ವಿಜ್ಞಾನಿಗಳು ನಮ್ಮ ಸೌರವ್ಯೂಹದ ಸುತ್ತಲಿರುವ ನಕ್ಷತ್ರಗಳ ಬಗ್ಗೆ ಮಾತ್ರ ಕಂಡುಹಿಡಿಯಲು ಸಾಧ್ಯವಾಗಿದೆ. ಈ ಕಾಂತೀಯ ಅಲೆಗಳು ನಕ್ಷತ್ರಗಳಿಂದ ಬರುತ್ತಿವೆ ಮತ್ತು ಅವುಗಳ ಸುತ್ತ ಗ್ರಹಗಳು ಸುತ್ತುತ್ತಿವೆ ಎಂಬುದಕ್ಕೆ ಬಾಹ್ಯಾಕಾಶ ವಿಜ್ಞಾನಿಗಳು ಬಲವಾದ ಸಾಕ್ಷ್ಯಾಧಾರಗಳನ್ನು ಕಂಡುಕೊಂಡಿದ್ದಾರೆ.


ಇದನ್ನೂ ಓದಿ-NASA's Psyche Mission: ಬಹಿರಂಗಗೊಳ್ಳಲಿದೆಯೇ 'ಬಾಹ್ಯಾಕಾಶದ ಗಣಿ'ಯ ರಹಸ್ಯ? ಭೂಮಿಯಿಂದಲೇ ಟ್ರಿಲಿಯನ್ ಮೊತ್ತದ ಸಂಪತ್ತಿನ ಕಣ್ಗಾವಲು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ