NASA's Psyche Mission: ಬಹಿರಂಗಗೊಳ್ಳಲಿದೆಯೇ 'ಬಾಹ್ಯಾಕಾಶದ ಗಣಿ'ಯ ರಹಸ್ಯ? ಭೂಮಿಯಿಂದಲೇ ಟ್ರಿಲಿಯನ್ ಮೊತ್ತದ ಸಂಪತ್ತಿನ ಕಣ್ಗಾವಲು

Psyche Mission:ಸೌರಮಂಡಲದ ಅತೀಂದ್ರಿಯ ಕ್ಷುದ್ರಗ್ರಹದ ಬಗ್ಗೆ ಬಹಿರಂಗಗೊಂಡ ಮಾಹಿತಿಯ ಪ್ರಕಾರ, ಅದು ಅತ್ಯಮೂಲ್ಯ ಲೋಹಗಳ ಆಗರವಾಗಿದೆ ಎನ್ನಲಾಗುತ್ತಿದೆ. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯಾಗಿರುವ NASA ಬಾಹ್ಯಾಕಾಶ ನೌಕೆಯೊಂದನ್ನು ಸಿದ್ಧಪಡಿಸುತ್ತಿದ್ದು, ಅದನ್ನು Asteroid 16 Psycheಗೆ ಕಳುಹಿಸಲು ನಿರ್ಧರಿಸಿದೆ. 

Written by - Nitin Tabib | Last Updated : Oct 6, 2021, 07:15 PM IST
  • Asteroid 16 Psyche ಮೇಲೆ ಬಾಹ್ಯಾಕಾಶ ನೌಕೆ ಬಿಡಲು NASA ಸಿದ್ಧತೆ
  • ಮುಂದಿನ ವರ್ಷದ ಆಗಸ್ಟ್ ತಿಂಗಳಿನಲ್ಲಿ NASAದ ಈ Psyche Mission ಆರಂಭ.
  • ಸೈಕಿ ಅಸ್ಟ್ರಾಯಿಡ್ ಮೇಲೆ ಬಹುಮೂಲ್ಯ ಧಾತುಗಳಿವೆ ಎಂಬ ಸಂಗತಿ ಈಗಾಗಲೇ ಬಹಿರಂಗಗೊಂಡಿದೆ.
NASA's Psyche Mission: ಬಹಿರಂಗಗೊಳ್ಳಲಿದೆಯೇ 'ಬಾಹ್ಯಾಕಾಶದ ಗಣಿ'ಯ ರಹಸ್ಯ? ಭೂಮಿಯಿಂದಲೇ ಟ್ರಿಲಿಯನ್ ಮೊತ್ತದ ಸಂಪತ್ತಿನ ಕಣ್ಗಾವಲು title=
Psyche Mission (File Photo)

ವಾಶಿಂಗ್ಟನ್: 'Psyche Mission' - ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASA ಬಾಹ್ಯಾಕಾಶ ನೌಕೆಯೊಂದನ್ನು ತಯಾರಿಸುತ್ತಿದ್ದು. ಅದು ಅಸ್ಟ್ರಾಯಿಡ್ (Asteroid) 16 Psycheಗೆ ಪ್ರಯಾಣ ಬೆಳೆಸಲಿದೆ. ಸೌರಮಂಡಲದ ಅತೀಂದ್ರಿಯ ಕ್ಷುದ್ರಗ್ರಹದ ಬಗ್ಗೆ ಬಹಿರಂಗಗೊಂಡ ಮಾಹಿತಿಯ ಪ್ರಕಾರ, ಅದು ಅತ್ಯಮೂಲ್ಯ ಲೋಹಗಳ ಆಗರವಾಗಿದೆ ಎನ್ನಲಾಗುತ್ತಿದೆ.

NASAದ ಈ ಬಾಹ್ಯಾಕಾಶ ನೌಕೆಯ ಪರೀಕ್ಷೆ ಅಂತಿಮ ಘಟ್ಟಕ್ಕೆ ತಲುಪಿದೆ. ಈ ಬಾಹ್ಯಾಕಾಶ ನೌಕೆಯನ್ನು ಮುಂದಿನ ವರ್ಷದ ಅಗಸ್ಟ್ ತಿಂಗಳಿನಲ್ಲಿ ಫ್ಲೋರಿಡಾದ ಕೇಪ್ ಕನೆರ್ವಲ್ ನಿಂದ SpaceX ಹಾಗೂ  Falcon Heavy ರಾಕೆಟ್ ಸಹಾಯದಿಂದ ಉಡಾವಣೆಗೊಳ್ಳಲಿದೆ. ನಾಸಾ ಈ ಮಿಶನ್ ಗೆ 'Psyche Mission' ಎಂಬ ಹೆಸರನ್ನು ಇಟ್ಟಿದೆ.

ಸೈಕಿ ಅಸ್ಟ್ರಾಯಿಡ್ ಮೇಲೆ ಬಹುಮೂಲ್ಯ ಧಾತುಗಳಿವೆ
ಸೈಕಿ ಅಸ್ಟ್ರಾಯಿಡ್ ಮೇಲೆ ಬಹುಮೂಲ್ಯ ಧಾತುಗಳಿವೆ (Mine Of Most Valuable Metals) ಎಂಬ ಸಂಗತಿ ಈಗಾಗಲೇ ಬಹಿರಂಗಗೊಂಡಿದೆ. ಆಪ್ಟಿಕಲ್ ಟೆಲಿಸ್ಕೊಪ್ ಹಾಗೂ ಭೂಮಿಯ ಮೇಲಿರುವ ಶಕ್ತಿಶಾಲಿ ರೇಡಾರ್ ಗಳ ಮೂಲಕ ಇದನ್ನು ಪತ್ತೆಹಚ್ಚಲಾಗಿದೆ. ಇದಕ್ಕೂ ಮೊದಲು NASA ಸೈಕಿ ಅಸ್ಟ್ರಾಯಿಡ್ ಮೇಲೆ ಪತ್ತೆಹಚ್ಚಿರುವ ಒಟ್ಟು ಬಹುಮೂಲ್ಯ ಲೋಹಗಳ ಸಹಾಯದಿಂದ ಭೂಮಿಯ ಮೇಲಿರುವ ಪ್ರತಿಯೊಬ್ಬ ಮನುಷ್ಯ ಬಿಲಿಯನೇರ್ ಆಗಬಹುದು ಎಂದು ವರದಿಯಾಗಿತ್ತು.

ಸೌರಮಂಡಲದ ಉಗಮದ ಜೊತೆಗೆ ಇದು ಸಂಬಂಧ ಹೊಂದಿರಬಹುದು
ಈ ವಿಶಿಷ್ಟ ಕ್ಷುದ್ರಗ್ರಹವನ್ನು 1852 ರಲ್ಲಿ ಪತ್ತೆ ಹಚ್ಚಲಾಗಿದೆ. ಇದು ಮಂಗಳ ಹಾಗೂ ಗುರುಗ್ರಹದ ನಡುವಿನ ಮುಖ್ಯ ಕ್ಷುದ್ರಗ್ರಹ ಪಟ್ಟಿಯಲ್ಲಿದೆ ಎನ್ನಲಾಗಿದೆ. ಗ್ರೀಕ್ ಪುರಾಣದಲ್ಲಿ, 'ಸೈಕ್' ಎನ್ನುವುದು ದೇವತೆಯ ಹೆಸರು. ಸೈಕ್ ಸೌರಮಂಡಲದ ಮೂಲಕ್ಕೆ ಸಂಬಂಧಿಸಿರಬಹುದು ಎಂಬುದು ವಿಜ್ಞಾನಿಗಳ ನಂಬಿಕೆ.

ನಾಸಾದ ಈ ಬಾಹ್ಯಾಕಾಶ ನೌಕೆಯು ಲೋಹದ ಆಗರವಾಗಿರುವ ಆ  ಆಕಾಶಕಾಯವನ್ನು 'ಸೈಕ್ ಮಿಷನ್' ಅಡಿಯಲ್ಲಿ ಸುತ್ತಲಿದೆ. ಅದರ ಸಂರಚನೆಯನ್ನು 'ಸೈಕ್ ಮಿಷನ್' ಅಡಿಯಲ್ಲಿ ತನಿಖೆ ಮಾಡಲಿದೆ. ಬಾಹ್ಯಾಕಾಶ ನೌಕೆ ಕ್ಷುದ್ರಗ್ರಹದ (Asteroid) ನಕ್ಷೆಯನ್ನು ಸಿದ್ಧಪಡಿಸಲಿದ್ದು, ನಂತರ ಅದರ ಕೂಲಂಕುಷ ಅಧ್ಯಯನ ನಡೆಸಲಿದೆ.

ಈ ಕುರಿತು ಹೇಳಿಕೆ ನೀಡಿರುವ ಸೌಥ್ ವೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಸೈಕ್ ಮಿಶನ್ ಗೆ ಸಂಬಂಧಿಸಿದ ವಿಜ್ಞಾನಿ ಬಿಲ್ ಬೋಟೆಕ್, ಈ ಆವಿಷ್ಕಾರದ ಫಲಿತಾಂಶಗಳ ಮೂಲಕ ಸೌರಮಂಡಲ ಹೇಗೆ ನಿರ್ಮಾಣಗೊಂಡಿದೆ ಮತ್ತು ನಂತರ ಅದು ಹೇಗೆ ಅಭಿವೃದ್ಧಿಗೊಂಡಿದೆ ಎಂಬುದನ್ನು ನಾವು ಕಂಡುಹಿಡಿಯಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ-Moon Latest News: ಭೂವಿಯಿಂದ ಮುನಿಸಿಕೊಳ್ಳುತ್ತಿದ್ದಾನೆಯೇ ಚಂದಿರ? ಹೌದು ಎನ್ನುತ್ತೆ ಈ ವರದಿ

ಕ್ಷುದ್ರಗ್ರಹದ ರಹಸ್ಯಗಳನ್ನು ಭೇದಿಸಲಿದೆ ಬಾಹ್ಯಾಕಾಶ ನೌಕೆ
ವಿಜ್ಞಾನಿಗಳ ಪ್ರಕಾರ ಸೈಕ್ ಕ್ಷುದ್ರಗ್ರಹದಲ್ಲಿ ಕಬ್ಬಿಣದ ಆಕ್ಸೈಡ್ ಕೊರತೆ ಇದೆ. ಏರಿಜೋನಾ ಸ್ಟೇಟ್ ಯೂನಿವರ್ಸಿಟಿಯ Lindy Elkins-Tanton ಹೇಳುವ ಪ್ರಕಾರ, ಒಂದು ವೇಳೆ ಸೈಕ್ ನ ಸಂರಚನೆಯ ಕುರಿತು ವಿಜ್ಞಾನಿಗಳ ಅಂದಾಜು ಒಂದು ವೇಳೆ ನಿಜ ಎಂದು ಸಾಬೀತಾದರೆ, ಅದರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಶ್ಚರ್ಯಕ್ಕೀಡು ಮಾಡುವ ಕಥೆ ಬೆಳಕಿಗೆ ಬರಲಿದೆ ಎಂದಿದ್ದಾರೆ. 

ಇದನ್ನೂ ಓದಿ-Harvest Moon : ಆಗಸದಲ್ಲಿಕಾಣಿಸಲಿದೆ ಚಂದ್ರನ ಅದ್ಭುತ ನೋಟ , ಇನ್ನೂ ಎರಡು ದಿನಗಳವರೆಗೆ ಕಾಣಬಹುದು ಈ ಅಮೋಘ ದೃಶ್ಯ

ನಾಸಾದ ಬಾಹ್ಯಾಕಾಶ ನೌಕೆ  Psyche Mission ಬಳಿ ಸೈಕ್ ಕ್ಷುದ್ರಗ್ರಹದ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಬಹಿರಂಗಪಡಿಸಲು ಅಗತ್ಯವಿರುವ ಎಲ್ಲಾ ಸಾಧನಗಳು ಇರಲಿವೆ. ಸೈಕ್ ಮಿಷನ್‌ಗೆ ಸಂಬಂಧಿಸಿದ ಜಿಮ್ ಬೆಲ್ ಹೇಳುವ ಪ್ರಕಾರ, "ನಾವು ಏನನ್ನು ನೋಡಲಿದ್ದೇವೆ ಎಂಬುದು ಯಾರಿಗೂ ತಿಳಿದಿಲ್ಲ, ಆದರೆ ಸೈಕಿಯ ವಾಸ್ತವಿಕತೆ ನಾವು ಊಹಿಸಿದ್ದಕ್ಕಿಂತ ಹೆಚ್ಚು ಆಶ್ಚರ್ಯಕರ ಮತ್ತು ಸುಂದರವಾಗಿರಲಿದೆ ಎಂಬಂತೆ ತೋರುತ್ತಿದೆ " ಎಂದಿದ್ದಾರೆ.

ಇದನ್ನೂ ಓದಿ-Viral Video: ಭೂಮಿಗಪ್ಪಳಿಸಿದ Asteroid, ಬಾಹ್ಯಾಕಾಶ ತಲುಪಿದ ಡೈನೋಸಾರ್ಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News