ನವದೆಹಲಿ : ವಾಟ್ಸಾಪ್ ಇಲ್ಲದೆ ನಮ್ಮ ದಿನ ನಡೆಯುವುದಿಲ್ಲ. ವಾಟ್ಸಾಪ್ (Whatsapp) ಇಲ್ಲದೇ ಹೋದರೆ ಏನೋ ಅಮೂಲ್ಯ ವಸ್ತುವನ್ನು ಕಳೆದುಕೊಂಡ ಭಾವನೆ. ವಾಟ್ಸಾಪಿನಲ್ಲಿ  ನಮ್ಮ ಎಲ್ಲಾ ಸುಖದುಃಖಗಳನ್ನು ಗೆಳೆಯರೊಂದಿಗೆ, ಆತ್ಮೀಯರೊಂದಿಗೆ ಹಂಚಿ ಕೊಳ್ಳುತ್ತೇವೆ.  ಹಾಗಾಗಿ ವಾಟ್ಸಾಪ್ ಜೀವನದ ಅವಿಭಾಜ್ಯಅಂಗವೇ ಆಗಿ ಹೋಗಿದೆ.  


COMMERCIAL BREAK
SCROLL TO CONTINUE READING

ಕೆಲವೊಂದು ಸಲ ವಾಟ್ಸಾಪ್ (Whatsapp) ಮೆಸೆಜುಗಳನ್ನು ಮೂರನೇ ವ್ಯಕ್ತಿ ಓದುವ ಸಾಧ್ಯತೆಗಳಿರುತ್ತವೆ. ವಾಟ್ಸಾಪಿನಲ್ಲಿ ನಮ್ಮ ತೀರಾ ಖಾಸಗೀ ಮೆಸೆಜುಗಳೂ ಇರುತ್ತವೆ. ಮೂರನೇ ವ್ಯಕ್ತಿ ಈ ಮಸೆಜುಗಳನ್ನು ಓದಿ, ನಮ್ಮನ್ನು ಬ್ಲಾಕ್ ಮೇಲ್ ಮಾಡುವ ಅಥವಾ ಬೇರೆ ಇನ್ನೇನೋ ಅಪಾಯ ಉಂಟು ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ವಾಟ್ಸಾಪಿನಲ್ಲಿ ನಮ್ಮ ಖಾಸಗೀ ತನಕ್ಕೆ ಧಕ್ಕೆ ಉಂಟಾಗದಂತೆ ನೋಡಿ ಕೊಳ್ಳುವ ಎಲ್ಲಾ ಅಗತ್ಯಗಳಿರುತ್ತವೆ. ಅಂದರೆ, ನಮ್ಮ ವಾಟ್ಸಾಪ್ ಮೆಸೆಜುಗಳನ್ನು ಮೂರನೇ ವ್ಯಕ್ತಿ ಓದದಂತೆ ನಾವು ಎಚ್ಚರಿಕೆ ವಹಿಸಬೇಕು.   ಈ ನಿಟ್ಟಿನಲ್ಲಿ ಒಂದು ಸಿಂಪಲ್ ಟ್ರಿಕ್ ಇದೆ. ಅದನ್ನು ನಿಮ್ಮ ಮೊಬೈಲಿನಲ್ಲಿ (Mobile) ಮಾಡಿ ನೋಡಿ. ಮೂರನೇ ವ್ಯಕ್ತಿಗೆ ನಿಮ್ಮ ವಾಟ್ಸಾಪ್ ಸಂದೇಶ (Message) ಕದ್ದು ಓದಲು ಸಾಧ್ಯವೇ ಇಲ್ಲ. ಅದರ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ : 399 ರೂಪಾಯಿಗಳಿಗೆ ಬೆಸ್ಟ್ ಪ್ರಿಪೆಯ್ಡ್ ಪ್ಲಾನ್..! ಇಲ್ಲಿದೆ ಡಿಟೆಲ್ಸ್


1.ಮೊಬೈಲ್ ನಲ್ಲಿ ವಾಟ್ಸಾಪ್ ಆಪ್ ಓಪನ್ ಮಾಡಿ
2.ನಂತರ Setting ಮೇಲೆ ಕ್ಲಿಕ್ ಮಾಡಿ
3.ನಂತರ Accounts ಮೇಲೆ ಕ್ಲಿಕ್ ಮಾಡಿ.
4.ಈಗ ನಿಮಗೆ two step verification ಅಪ್ಶನ್ ಬರುತ್ತದೆ. ಅದನ್ನು ಕ್ಲಿಕ್ ಮಾಡಿ, Enable ಮಾಡಿ
5.ಇನ್ನು ನೀವು ಇದರ ಮೂಲಕ ನೀವು 6 ಅಂಕೆಗಳ ಒಂದು PIN ರೂಪಿಸಬೇಕಾಗುತ್ತದೆ.
6. Two step verification ಲಾಭ ಏನೆಂದರೆ ಯಾವುದೇ ಹೊಸ ಮೊಬೈಲಿನಲ್ಲಿ ನಿಮ್ಮ ವಾಟ್ಸಾಪ್ ಓದಬೇಕೆಂದರೆ ಈ 6 ಅಂಕೆಗಳ verification ಕೋಡ್ ಹಾಕಬೇಕಾಗುತ್ತದೆ. 
7.ಇದಾದ ನಂತರ email ಅಡ್ರೆಸ್ಸಿಗೆ link ಮಾಡುವ ಅಪ್ಶನ್ ಬರುತ್ತದೆ.
8.ಇದರ ಲಾಭ ಏನೆಂದರೆ ಒಂದು ವೇಳೆ ನೀವು 6 ಅಂಕಿಯ verification code ಮರೆತು ಹೋದರೆ  ವಾಟ್ಸಾಪ್ email ಗೆ ನಿಮ್ಮ ಕೋಡ್ ರವಾನೆ ಮಾಡುತ್ತದೆ. 


ಇದನ್ನೂ ಓದಿ : ಫೇಸ್ ಬುಕ್ ಬಳಸಿ, ಪಾಕೆಟ್ ತುಂಬಾ ದುಡ್ಡು ಮಾಡಿ..! ತಿಳಿಯಿರಿ ಎಫ್ ಬಿ ಹೊಸ ಫೀಚರ್ಸ್


ವಾಟ್ಸಾಪಿನಲ್ಲಿ ನೀವು ಈ ಸೆಟ್ಟಿಂಗ್ ಮಾಡಿಟ್ಟುಕೊಂಡರೆ ಮೂರನೇ ವ್ಯಕ್ತಿಗೆ ನಿಮ್ಮ ಯಾವುದೇ ಸಂದೇಶ ಓದಲು ಸಾಧ್ಯವೇ ಇಲ್ಲ. ನಿಮ್ಮ ವಾಟ್ಸಾಪ್ ಓದಬೇಕೆಂದರೆ ಆ ವ್ಯಕ್ತಿಗೆ ನಿಮ್ಮ two step verification ಕೋಡ್ ಗೊತ್ತಿರಬೇಕು. ಅಂದರೆ, ನಿಮ್ಮ ಕೋಡ್ ನಿಮಗೆ ಮಾತ್ರ ತಿಳಿದಿರಬೇಕು.


ನಿಮ್ಮ ಚಾಟ್ ಇನ್ನೊಬ್ಬರು ಓದದಂತೆ ಮಾಡಲು ಇನ್ನೊಂದು ವಿಧಾನ ವಿದೆ. ಅದರ ಮಾಹಿತಿ ಸ್ಟೆಪ್ ಬೈ ಸ್ಟೆಪ್ ಇಲ್ಲಿದೆ.
1.ವಾಟ್ಸಾಪ್ ಸೆಟ್ಟಿಂಗ್ ಗೆ ಹೋಗಿ Privacy ಮೇಲೆ ಕ್ಲಿಕ್ ಮಾಡಿ
2.ಅದರಲ್ಲಿ ಎಲ್ಲಿದಕ್ಕಿಂತ ಕೆಳಗೆ Finger Print Lock ಆಪ್ಶನ್ ಸಿಗುತ್ತದೆ.
3.ಅದನ್ನು Enable ಮಾಡಿ. 
4.ಅದನ್ನು Enable ಮಾಡುವಾಗ ಮೊದಲು ಫೋನಿನಲ್ಲಿ ನಿಮ್ಮ Finger Print Lock ಎನೆಬಲ್  ಮಾಡಿ ಎಂಬ ಸಂದೇಶ ಬರುತ್ತದೆ.
5.ನೀವು ಫೋನಿನಲ್ಲಿ Finger Print lock ಹಾಕಲು ಮೊದಲು Setting ಗೆ ಹೋಗಿ
6.Security ಮೇಲೆ ಕ್ಲಿಕ್ ಮಾಡಿ. 
7.ಅಲ್ಲಿ finger print lock ಆಪ್ಶನ್ ಕ್ಲಿಕ್ ಮಾಡಿ ನಿಮ್ಮ finger print ಮೇಲೆ ಲಾಕ್ ಕ್ರಿಯೆಟ್ ಮಾಡಿ.
ಇಷ್ಟು ಮಾಡಿದರೆ ಮೂರನೇ ವ್ಯಕ್ತಿಗೆ ನಿಮ್ಮ ಮೆಸೆಜ್ ಓದಲು ಸಾಧ್ಯವೇ ಆಗುವುದಿಲ್ಲ


ಇದನ್ನೂ ಓದಿ : ಈ ಸ್ಮಾರ್ಟ್ ಪೋನ್ ಮೇಲೆ 10,000 ರೂಪಾಯಿಗಳ ಬೆಲೆ ಕಡಿತ,..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.