399 ರೂಪಾಯಿಗಳಿಗೆ ಬೆಸ್ಟ್ ಪ್ರಿಪೆಯ್ಡ್ ಪ್ಲಾನ್..! ಇಲ್ಲಿದೆ ಡಿಟೆಲ್ಸ್

ಏರ್‌ಟೆಲ್‌ನ ಪ್ರಿಪೇಯ್ಡ್ ಪ್ಲಾನ್ ನಲ್ಲಿ 399 ರೂ.ಗಳಿಗೆ ದಿನಕ್ಕೆ 1.5 ಜಿಬಿ ಹೈಸ್ಪೀಡ್ ಡೇಟಾ ಸಿಗುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಂಎಸ್ (SMS) ಮತ್ತು ಅನ್ ಲಿಮಿಟೆಡ್ ವಾಯ್ಸ್ ಕಾಲ್ ಮಾಡಬಹುದಾಗಿದೆ. 

Written by - Ranjitha R K | Last Updated : Apr 21, 2021, 10:17 AM IST
  • ಮೊಬೈಲ್ ಡೇಟಾ ಇದೀಗ ತುಂಬಾ ಅನಿವಾರ್ಯತೆಯ ವಿಷಯವಾಗಿದೆ.
  • ಕಡಿಮೆ ದರದಲ್ಲಿ ಬೆಸ್ಟ್ ಪ್ಲಾನ್ ಯಾವುದು ಎಂಬುದರ ಮಾಹಿತಿ ಇಲ್ಲಿದೆ
  • ನಿಮಗೆ ಗೊತ್ತಿರಲೇ ಬೇಕಾದ ವಿಷಯ ಇಲ್ಲಿದೆ
399 ರೂಪಾಯಿಗಳಿಗೆ ಬೆಸ್ಟ್ ಪ್ರಿಪೆಯ್ಡ್ ಪ್ಲಾನ್..! ಇಲ್ಲಿದೆ ಡಿಟೆಲ್ಸ್

ನವದೆಹಲಿ : ಮೊಬೈಲ್ ಡೇಟಾ (Mobile data) ಇದೀಗ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಹೇಗೆ ಪಡೆಯುವುದು ಎಂಬ ಯೋಚನೆ ಎಲ್ಲಾ ಬಳಕೆದಾರರಲ್ಲಿದೆ. 399 ರೂಗಳ ಬೆಸ್ಟ್  ಪ್ರಿಪೇಯ್ಡ್  ಪ್ಲಾನ್ ಗಳ  ಬಗ್ಗೆ ಇಲ್ಲಿ ಹೇಳುತ್ತಿದ್ದೇ ವೆ.

ಏರ್ಟೆಲ್ ಪ್ಲಾನ್ :
ಏರ್‌ಟೆಲ್‌ನ (Airtel) ಪ್ರಿಪೇಯ್ಡ್ ಪ್ಲಾನ್ ನಲ್ಲಿ 399 ರೂ.ಗಳಿಗೆ ದಿನಕ್ಕೆ 1.5 ಜಿಬಿ ಹೈಸ್ಪೀಡ್ ಡೇಟಾ ಸಿಗುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಂಎಸ್ (SMS) ಮತ್ತು ಅನ್ ಲಿಮಿಟೆಡ್ ವಾಯ್ಸ್ ಕಾಲ್ ಮಾಡಬಹುದಾಗಿದೆ.  ಈ ಪ್ಲಾನ್ ನಲ್ಲಿ  ಬಳಕೆದಾರರು ಏರ್‌ಟೆಲ್ ಎಕ್ಸ್ ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್ ಮತ್ತು ಅನೇಕ ಅಪ್ಲಿಕೇಶನ್‌ಗಳ subscription ಪಡೆಯಬಹುದಾಗಿದೆ.  ಈ ಯೋಜನೆಯ ವ್ಯಾಲಿಡಿಟಿ  56 ದಿನಗಳು. ಈ ಪ್ಲಾನಿನಲ್ಲಿ  ಒಂದು ತಿಂಗಳ ಅಮೆಜಾನ್ ಪ್ರೈಮ್ (Amazon Prime) ವಿಡಿಯೋ ಮೊಬೈಲ್ ಆವೃತ್ತಿಯ subscription ಸಹ ಒಂದು ತಿಂಗಳವರೆಗೆ ನೀಡಲಾಗುತ್ತದೆ.

ಇದನ್ನೂ ಓದಿ : ಫೇಸ್ ಬುಕ್ ಬಳಸಿ, ಪಾಕೆಟ್ ತುಂಬಾ ದುಡ್ಡು ಮಾಡಿ..! ತಿಳಿಯಿರಿ ಎಫ್ ಬಿ ಹೊಸ ಫೀಚರ್ಸ್

BSNL ಪ್ಲಾನ್ :
1 ಜಿಬಿ ಡೈಲಿ  ಹೈಸ್ಪೀಡ್ ಡೇಟಾವನ್ನು ರೂಪಾಯಿ 399ರ  ಬಿಎಸ್ಎನ್ಎಲ್ (BSNL) ಪ್ರಿಪೇಯ್ಡ್ ಪ್ಲಾನ್ ನಲ್ಲಿ ಪಡೆಯಬಹುದಾಗಿದೆ.  ಡೇಟಾ ಮುಗಿದ ನಂತರ, ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಈ ವೇಗವು 80 ಕೆಬಿಪಿಎಸ್‌ಗೆ ಕುಸಿಯುತ್ತದೆ.  ಈ ಪ್ಲಾನ್ ನಲ್ಲಿ  ಬಳಕೆದಾರರಿಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ (Unlimited Voice calls) ಸಿಗಲಿದೆ.  ದಿನಕ್ಕೆ 100 ಎಸ್‌ಎಂಎಸ್ ಸಿಗಲಿದೆ. ಈ ಪ್ಲಾನ್ ನ ವಾಲಿಡಿಟಿ  80 ದಿನಗಳು.

ರಿಲಯನ್ಸ್ ಜಿಯೋ ಪ್ಲಾನ್ :
399 ರೂಗಳ ಪ್ರಿಪೇಯ್ಡ್ ಪ್ಲಾನ್ ನಲ್ಲಿ  ರಿಲಯನ್ಸ್ ಜಿಯೋ (Jio) ಪ್ರತಿದಿನ 1.5 ಜಿಬಿ ಹೈಸ್ಪೀಡ್ ಡೇಟಾವನ್ನು ನೀಡುತ್ತದೆ. ಇದರ ವಾಲಿಡಿಟಿ  56 ದಿನಗಳು. ಇದರಲ್ಲಿ ಬಳಕೆದಾರರಿಗೆ unlimited ವಾಯ್ಸ್ ಕಾಲ್  ಮತ್ತು 100 ಎಸ್‌ಎಂಎಸ್ ಸಹ ನೀಡಲಾಗುತ್ತದೆ. ಈ ಪ್ಲಾನ್ಯೊಂದಿಗೆ, ಬಳಕೆದಾರರಿಗೆ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತದೆ. ಇದು JioSecurity, JioCloud, JioCinema ಮತ್ತು JioNews ನಂತಹ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.

ಇದನ್ನೂ ಓದಿ : ಈ ಸ್ಮಾರ್ಟ್ ಪೋನ್ ಮೇಲೆ 10,000 ರೂಪಾಯಿಗಳ ಬೆಲೆ ಕಡಿತ,..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News