ನವದೆಹಲಿ : ನಿಮ್ಮ ವಾಟ್ಸಾಪ್ ಖಾತೆಯು ಇದ್ದಕ್ಕಿದ್ದಂತೆ  ಲಾಗ್ ಔಟ್ ಆಗಿದೆಯೇ ? ನಿಮ್ಮ ವಾಟ್ಸಾಪ್ (Whatsapp) ಅನ್ನು ಬಳಸಲು ಸಾಧ್ಯವಾಗುತ್ತಿಲ್ಲವೇ? ಒಂದೊಮ್ಮೆ ಹೀಗಾಗಿದ್ದರೆ ಚಿಂತಿಸಬೇಡಿ. ಇತ್ತೀಚೆಗೆ ಈ ಸಮಸ್ಯೆಯನ್ನು ಅನೇಕ ವಾಟ್ಸಾಪ್ ಬಳಕೆದಾರರು (Whatsapp users) ಈ ಸಮಸ್ಯೆಯನ್ನು ಎದುರಿಸಿದ್ದಾರೆ. ಅನೇಕ ಬಳಕೆದಾರರ ವಾಟ್ಸಾಪ್ ಖಾತೆ  ಲಾಗ್ ಔಟ್ ಆಗಿದೆ.  ಅಲ್ಲದೆ, ಈ ಬಗ್ಗೆ ಸ್ಕ್ರೀನ್ ನಲ್ಲಿ ಮೆಸೇಜ್ ಕೂಡಾ ಕಾಣಿಸಿಕೊಂಡಿದೆ. 


COMMERCIAL BREAK
SCROLL TO CONTINUE READING

ಖಾತೆ ಲಾಗ್ ಔಟ್ ಆಗುತ್ತಿದ್ದರೆ ಮೆಸೇಜ್ ಫ್ಲಾಶ್ : 
ವಾಟ್ಸಾಪ್ ಸಂಬಂಧಿತ ಅಪ್ಡೇಟ್ (Whatsapp update) ನೀಡುವ ವೆಬ್ಸೈಟ್ WABetaInfo ವರದಿಯ ಪ್ರಕಾರ, ಅನೇಕ WhatsApp ಬಳಕೆದಾರರ ಖಾತೆಯು, ಇದ್ದಕ್ಕಿದ್ದಂತೆ ಲಾಗ್ ಔಟ್ ಆಗಿದೆ. ಅಲ್ಲದೆ, ಲಾಗ್ ಔಟ್ ಆಗುತ್ತಿದ್ದಂತೆ, ಸ್ಕ್ರೀನ್ ಮೇಲೆ ಮೆಸೇಜ್  ಫ್ಲಾಶ್ ಆಗಲು ಆರಂಭಿಸಿದೆ. ಇದು ಅನೇಕ ಬಳಕೆದಾರರನ್ನು ಚಿಂತೆಗೆ ಗುರಿ ಮಾಡಿದೆ. ಈ ಸಂದೇಶದಲ್ಲಿ, ಈ ಸಂಖ್ಯೆಯ ವಾಟ್ಸಾಪ್ ಅನ್ನು ನಿಮ್ಮ ಹ್ಯಾಂಡ್‌ಸೆಟ್‌ನಲ್ಲಿ ನೋಂದಾಯಿಸಲಾಗಿಲ್ಲ.  ಬೇರೆ ಫೋನ್ ನಲ್ಲಿ WhatsApp ಖಾತೆಯಲ್ಲಿ ನೋಂದಾಯಿಸಿರಬಹುದು. ಈ ಕಾರಣದಿಂದಾಗಿ, ಖಾತೆಯನ್ನು ಲಾಗ್ ಔಟ್ (Whatsapp logout) ಮಾಡಲಾಗಿದೆ ಎಂಬ  ಮೆಸೇಜ್ ಕಾಣಿಸುತ್ತದೆ. ಒಂದು ವೇಳೆ, ನೀವು ಹೀಗೆ ಮಾಡದೆ ಇದ್ದಲ್ಲಿ, ನಿಮ್ಮ ಸಂಖ್ಯೆಯನ್ನು ಪರಿಶೀಲಿಸಿ ಮತ್ತು ಖಾತೆಗೆ ಮತ್ತೊಮ್ಮೆ ಲಾಗ್ ಇನ್ ಮಾಡಿ ಎಂದು ಮೆಸೇಜ್ ನಲ್ಲಿ ಹೇಳಲಾಗಿದೆ. 


ಇದನ್ನೂ ಓದಿ : New Google Tool: ಅಪ್ರಾಪ್ತರಿಗಾಗಿ ಹೊಸ ಪರಿಕರ ಬಿಡುಗಡೆ ಮಾಡಿದ ಗೂಗಲ್, 18ಕ್ಕಿಂತ ಕಡಿಮೆ ವಯಸ್ಸಿನವರು ಮಾಡಬಹುದು ಈ ಕೆಲಸ


ಚಿಂತಿತರಾದ ಬಳಕೆದಾರರು :
ಈ ರೀತಿಯಾಗಿ ವಾಟ್ಸಾಪ್ ಖಾತೆಯಿಂದ ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುವುದು ನಿಜವಾಗಿಯೂ ಕಳವಳಕಾರಿ ಸಂಗತಿಯಾಗಿದೆ. ಈ ಸಮಸ್ಯೆಯು ಬಳಕೆದಾರರನ್ನು ತೊಂದರೆಗೆ ಸಿಲುಕಿಸಿದೆ. WhatsApp ಖಾತೆ ಹ್ಯಾಕ್ ಆಗಿರಬಹುದು ಎಂಬ ಚಿಂತೆ ಬಳಕೆದಾರರನ್ನು ಕಾಡತೊಡಗಿತ್ತು. 


WhatsApp ನಲ್ಲಿ ಕಂಡು ಬಂದಿರುವ ದೋಷ :
ಆದರೆ, ವಾಟ್ಸಾಪ್‌ನಲ್ಲಿನ ದೋಷದಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ವರದಿಯು ಬಹಿರಂಗಪಡಿಸಿದೆ. ದೋಷ ಕಂಡುಬಂದ ಕೆಲ ಸಮಯಗಳಲ್ಲಿ ಅದನ್ನು ಸರಿಪಡಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ವಾಟ್ಸಾಪ್‌ ಕಡೆಯಿಂದ ನಿಂದ ಬಂದಿಲ್ಲ. 


ಇದನ್ನೂ ಓದಿ : Jio ಕಂಪನಿಯ ಈ ಪ್ಲಾನ್ ನೊಂದಿಗೆ ಉಚಿತವಾಗಿ ಪಡೆಯಿರಿ ಮೊಬೈಲ್ ಫೋನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ