Laptopನಿಂದಲೂ ಮಾಡಬಹುದು Whatsapp Video Call, ಈ ಸರಳ ವಿಧಾನವನ್ನು ತಿಳಿಯಿರಿ

Whatsapp Tips And Tricks: ಈಗ WhatsApp ಡೆಸ್ಕ್‌ಟಾಪ್ ಆಪ್ ಬಳಕೆದಾರರು ತಮ್ಮ ಲ್ಯಾಪ್‌ಟಾಪ್ ಅಥವಾ PC ಮೂಲಕ ವೀಡಿಯೊ ಕರೆಗಳನ್ನು ಮಾಡುವ ಸೌಲಭ್ಯವನ್ನು ಆನಂದಿಸಬಹುದು.

Written by - Ranjitha R K | Last Updated : Aug 6, 2021, 06:48 PM IST
  • Laptopನಿಂದಲೂ ಮಾಡಬಹುದು ವಾಟ್ಸ್ ಆಪ್ ವಿಡಿಯೋ ಕಾಲ್
  • WhatsApp ಡೆಸ್ಕ್‌ಟಾಪ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು
  • ಪಿಸಿಯಲ್ಲಿ ವಾಟ್ಸಾಪ್ ವೀಡಿಯೊ ಕರೆ ಮಾಡುವುದು ಹೇಗೆ ತಿಳಿಯಿರಿ
Laptopನಿಂದಲೂ ಮಾಡಬಹುದು  Whatsapp Video Call, ಈ ಸರಳ ವಿಧಾನವನ್ನು ತಿಳಿಯಿರಿ title=
Laptopನಿಂದಲೂ ಮಾಡಬಹುದು ವಾಟ್ಸ್ ಆಪ್ ವಿಡಿಯೋ ಕಾಲ್ (photo zee news)

ನವದೆಹಲಿ :  Whatsapp Tips And Tricks: ವೀಡಿಯೋ ಕಾಲ್ ಗಾಗಿ whatsapp ಅನ್ನು ಬಹುತೇಕ ಮಂದಿ ಬಳಸುತ್ತಾರೆ.  ವಿಡಿಯೋ ಕಾಲ್ ವಾಟ್ಸಾಪ್‌ನಲ್ಲಿ (Whatsapp video  call) ಇದು ಹೆಚ್ಚು ಬಳಕೆಯಾಗುವ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಕರೋನಾದಿಂದಾಗಿ ಈ ಸೌಲಭ್ಯದ ಜನಪ್ರಿಯತೆಯು ನಿರಂತರವಾಗಿ ಹೆಚ್ಚುತ್ತಿದೆ. ಇದೀಗ ಕಂಪನಿಯು ತನ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ವೀಡಿಯೊ ಕರೆ ಸಾಮರ್ಥ್ಯವನ್ನು ಪರಿಚಯಿಸಿದೆ. ಈಗ WhatsApp ಡೆಸ್ಕ್‌ಟಾಪ್ ಆಪ್ ಬಳಕೆದಾರರು ತಮ್ಮ ಲ್ಯಾಪ್‌ಟಾಪ್ (Laptop) ಅಥವಾ PC ಮೂಲಕ ವೀಡಿಯೊ ಕರೆಗಳನ್ನು ಮಾಡುವ ಸೌಲಭ್ಯವನ್ನು ಆನಂದಿಸಬಹುದು. ಇದಕ್ಕಾಗಿ ನೀವು ಕೆಲ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. 

Laptop ಅಥವಾ ಪಿಸಿಯಲ್ಲಿ ವಾಟ್ಸಾಪ್ ವೀಡಿಯೊ ಕರೆ ಮಾಡುವುದು ಹೇಗೆ? 
1.ಮೊದಲಿಗೆ, ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ವಿಂಡೋಸ್ ಅಥವಾ ಮೈಕ್ ಓಎಸ್ ಚಾಲನೆಯಲ್ಲಿರುವ WhatsApp ಡೆಸ್ಕ್‌ಟಾಪ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. 
2 .ಆಪ್ ಅನ್ನು ಡೌನ್ಲೋಡ್ ಮಾಡಿ ಅದನ್ನು ನಿಮ್ಮ ಲ್ಯಾಪ್ ಟಾಪ್ (Laptop) ಅಥವಾ ಪಿಸಿಯಲ್ಲಿ ಇನ್ಸ್ಟಾಲ್ ಮಾಡಿ. 
3 .ಬಳಕೆದಾರ ಹೆಸರು ಮತ್ತು ಫೋನ್ ನಂಬರ್ ನಂತಹ ಕ್ರೆಡೆನ್ಶಿಯಲ್ ಮೂಲಕ ಲಾಗಿನ್ ಮಾಡಿ. 
4. ವಾಟ್ಸಾಪ್ ಡೆಸ್ಕ್‌ಟಾಪ್ ವಿಂಡೋಸ್ 10 64-ಬಿಟ್ ಆವೃತ್ತಿ 1903 ಅಥವಾ ಹೊಸ ಮತ್ತು ಮೈಕ್ ಓಎಸ್ 10.13 ಅಥವಾ ಹೊಸದರಲ್ಲಿ ಮಾತ್ರ ವೀಡಿಯೊ ಕರೆಗಳನ್ನು ಸಪೋರ್ಟ್ ಮಾಡುತ್ತದೆ.
5. ಈ  ಅಪ್ಲಿಕೇಶನ್‌ನ ಮೊಬೈಲ್ ಆವೃತ್ತಿಯಂತೆ (Mobile version) ಅಲ್ಲ. ಇಲ್ಲಿ ಒನ್ ಟು ಒನ್ ವೀಡಿಯೊ ಕರೆಯನ್ನು ಸಪೋರ್ಟ್ ಮಾಡುತ್ತದೆ.

ಇದನ್ನೂ ಓದಿ : Xiaomiಯ ಈ Smartphone ಟಿವಿ ರಿಮೋಟ್ ಆಗಿಯೂ ಕೆಲಸ ಮಾಡಲಿದೆ..!

ಪಿಸಿಯಲ್ಲಿ ವಾಟ್ಸಾಪ್ ವೀಡಿಯೊ ಕರೆ ಮಾಡುವುದು ಹೇಗೆ?
1. ಮೇಲೆ ಹೇಳಿದಂತೆ ವಿಂಡೋಸ್ ಅಥವಾ ಮ್ಯಾಕ್ ಗಾಗಿ ವಾಟ್ಸಾಪ್ ಡೆಸ್ಕ್ ಟಾಪ್ ಆಪ್ ಇನ್ಸ್ಟಾಲ್ ಮಾಡಿ.
2. ಸೈನ್ ಇನ್ ಮಾಡಲು ನಿಮ್ಮ ಫೋನಿನಿಂದ PC ಯಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
3. ಡೆಸ್ಕ್ ಟಾಪ್ ನಲ್ಲಿ ನಿಮ್ಮ ವಾಟ್ಸಾಪ್ ಖಾತೆ ತೆರೆದ ನಂತರ, ಚಾಟ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ವಿಡಿಯೋ ಕರೆ ಐಕಾನ್ ಮೇಲೆ ಕ್ಲಿಕ್ ಮಾಡಿ.
4. ನೀವು ಸಂಪರ್ಕವನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ PC ಯಲ್ಲಿ WhatsApp ವೀಡಿಯೊ ಕರೆ ಮಾಡಬಹುದು.

ಇದನ್ನೂ ಓದಿ : India's First e-Super Car: ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಭಾರತದ ಮೊಟ್ಟಮೊದಲ e-Super Car, ಫುಲ್ ಚಾರ್ಜ್ ನಲ್ಲಿ 700 ಕಿ.ಮೀ ಮೈಲೇಜ್

PC ಯಲ್ಲಿ WhatsApp ವೀಡಿಯೊ ಕರೆಗಳನ್ನು ಮಾಡಲು ಕೆಲವು ಕನಿಷ್ಠ ಅವಶ್ಯಕತೆಗಳು ಇರಬೇಕು. ಅವುಗಳೆಂದರೆ, ಆಡಿಯೋ ಔಟ್‌ಪುಟ್ ಡಿವೈಸ್ ಮತ್ತು ಮೈಕ್ರೊಫೋನ್, ಇನ್ ಬಿಲ್ಟ್ ವೆಬ್‌ಕ್ಯಾಮ್ ಮತ್ತು ಸಕ್ರಿಯ ಇಂಟರ್ನೆಟ್ ಸಂಪರ್ಕ ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News