Jio ಕಂಪನಿಯ ಈ ಪ್ಲಾನ್ ನೊಂದಿಗೆ ಉಚಿತವಾಗಿ ಪಡೆಯಿರಿ ಮೊಬೈಲ್ ಫೋನ್

ಜಿಯೋ ಜಿಯೋಫೋನ್ ಯೋಜನೆಯನ್ನು ಪರಿಚಯಿಸಿದೆ. ಇದರ ಪ್ಲಾನ್ ನಲ್ಲಿ ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಹಚ್ಚು ಲಾಭ ಸಿಗಲಿದೆ. 

Written by - Ranjitha R K | Last Updated : Aug 11, 2021, 02:43 PM IST
  • ಜಿಯೋ ಪ್ಲಾನ್ ತೆಗೆದುಕೊಂಡರೆ ಸಿಗಲಿದೆ ಉಚಿತ ಫೋನ್
  • 1499 ರೂ.ಗಳ ಪ್ಲಾನ್ ಗೆ ಒಂದು ವರ್ಷಗಳ ವ್ಯಾಲಿಡಿಟಿ ಸಿಗಲಿದೆ
  • 1999 ರ ಯೋಜನೆಯ ಮಾನ್ಯತೆಯು 2 ವರ್ಷಗಳವರೆಗೆ ಇರುತ್ತದೆ
Jio ಕಂಪನಿಯ ಈ ಪ್ಲಾನ್ ನೊಂದಿಗೆ ಉಚಿತವಾಗಿ ಪಡೆಯಿರಿ ಮೊಬೈಲ್ ಫೋನ್  title=
ಜಿಯೋ ಪ್ಲಾನ್ ತೆಗೆದುಕೊಂಡರೆ ಸಿಗಲಿದೆ ಉಚಿತ ಫೋನ್ (photo zee news)

ನವದೆಹಲಿ : ರಿಲಯನ್ಸ್ ಜಿಯೋ (Reliance Jio) ಹಲವು ಭರ್ಜರಿಪ್ಲಾನ್ ಗಳನ್ನು ಹೊರತರುತ್ತಿದೆ.  ಜಿಯೋ ಉತ್ತಮ ಪ್ಲಾನ್ ಗಳಿಂದ (Jio plan) ಇತರ ಟೆಲಿಕಾಂ ಬಳಕೆದಾರರು, ತಮ್ಮ ಸಿಮ್ ಅನ್ನು ಜಿಯೋಗೆ ಪೋರ್ಟ್ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ,  ಜಿಯೋ ಚಂದಾದಾರರು ನಿರಂತರವಾಗಿ ಹೆಚ್ಚುತ್ತಿದ್ದಾರೆ. ಜಿಯೋ ಉತ್ತಮ ಆಫರ್ ಗಳನ್ನು (Jio offers) ನೀಡುತ್ತಿದೆ. ಈ ಆಫರ್ ನಲ್ಲಿ,  ಜಿಯೋ ಫೋನ್ ಅನ್ನು ಉಚಿತವಾಗಿ ಪಡೆಯಬಹುದು. ಪದೇ ಪದೇ ರೀಚಾರ್ಜ್ ಮಾಡಲು ಸಮಸ್ಯೆ ಎದುರಿಸುವವರು, ಈ ಪ್ಲಾನಿನ ಲಾಭವನ್ನು ಪಡೆಯಬಹುದು.

ಜಿಯೋಫೋನ್ ರೂ 1,499 ಪ್ಲಾನ್ ಮತ್ತು ಪ್ರಯೋಜನಗಳು : 
ಜಿಯೋ ಜಿಯೋಫೋನ್ ಯೋಜನೆಯನ್ನು (Jio phone plan) ಪರಿಚಯಿಸಿದೆ. ಇದರ ಪ್ಲಾನ್ ನಲ್ಲಿ ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಸಿಗಲಿದೆ. ನೀವು 1499 ರೂಗಳ ಪ್ಲಾನ್ ತೆಗೆದುಕೊಂಡರೆ, ಅನ್ಲಿಮಿಟೆಡ್ ಕಾಲಿಂಗ್, 24 ಜಿಬಿ ಡೇಟಾ, ಜಿಯೋದ ಎಲ್ಲಾ ಆಪ್‌ಗಳನ್ನು (Jio app) ಪಡೆಯಬಹುದು. ಅಲ್ಲದೆ, ಈ ಯೋಜನೆಯಲ್ಲಿ ಜಿಯೋ ಫೋನ್ ಉಚಿತವಾಗಿ ಸಿಗಲಿದೆ. ಈ ಪ್ಲಾನ್ ನ ವ್ಯಾಲಿಡಿಟಿ 1 ವರ್ಷ.

ಇದನ್ನೂ ಓದಿ : Xiaomi Mi Mix 4: 108 ಎಂಪಿ ಫೋನ್ ಬಿಡುಗಡೆ, ಕೇವಲ 15 ನಿಮಿಷಗಳಲ್ಲಿ ಆಗುತ್ತೆ ಫುಲ್ ಚಾರ್ಜ್, ಬೆಲೆ ತಿಳಿಯಿರಿ

ಜಿಯೋಫೋನ್ ರೂ 1,999 ಪ್ಲಾನ್ ಮತ್ತು ಪ್ರಯೋಜನಗಳು : 
ನೀವು ಜಿಯೋನ (Jio) ರೂ 1999 ಪ್ಲಾನ್ ತೆಗೆದುಕೊಂಡರೆ, ಉಚಿತ ಜಿಯೋ ಫೋನ್ ಅನ್ನು ಪಡೆಯಬಹುದು. ಇದರೊಂದಿಗೆ, ಅನ್ಲಿಮಿಟೆಡ್ ಕಾಲಿಂಗ್ ಮತ್ತು 48 GB ಡೇಟಾ ಎರಡು ವರ್ಷಗಳವರೆಗೆ ಸಿಗುತ್ತದೆ. ಈ ಯೋಜನೆಯ ವ್ಯಾಲಿಡಿಟಿ 2 ವರ್ಷಗಳು. ಈ ಯೋಜನೆಯಲ್ಲಿ ಜಿಯೋ ಆಪ್‌ಗಳ ಚಂದಾದಾರಿಕೆಯೂ ಉಚಿತವಾಗಿ ಸಿಗಲಿದೆ.

ಜಿಯೋಫೋನ್ ವಿಶೇಷತೆಗಳು :
ಜಿಯೋ ಫೋನ್ ಒಂದು ಫೀಚರ್ ಫೋನ್ ಆಗಿದೆ. ಇದು 2.4 ಇಂಚಿನ QVGA ಡಿಸ್‌ಪ್ಲೇ ಹೊಂದಿದೆ. ಈ ಫೋನ್ 1500mAH ಬ್ಯಾಟರಿಯನ್ನು ಹೊಂದಿದೆ. ಇದು 9 ಗಂಟೆಗಳ ಟಾಕ್ ಟೈಮ್ ನೀಡುತ್ತದೆ. 128 GB ವರೆಗಿನ ಮೈಕ್ರೋ SD ಕಾರ್ಡ್ ಸಪೋರ್ಟ್ ನೊಂದಿಗೆ ಫೋನ್‌ನ ಸ್ಟೋರೇಜ್ ಹೆಚ್ಚಿಸಬಹುದು. ಟಾರ್ಚ್‌ಲೈಟ್, ಮೈಕ್ರೊಫೋನ್, ಸ್ಪೀಕರ್‌ಗಳು ಮತ್ತು ಎಫ್‌ಎಂ ರೇಡಿಯೊವನ್ನು ಫೋನ್‌ನಲ್ಲಿ ನೀಡಲಾಗಿದೆ. ಜಿಯೋ 4 ಜಿ ಫೀಚರ್ ಫೋನ್ 18 ಭಾಷೆಗಳನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ : WhatsApp New Feature: ಫೋಟೋಗಳನ್ನು ಸುಂದರಗೊಳಿಸಲು ವಾಟ್ಸ್ ಆಪ್ ನಲ್ಲಿ ಬರಲಿದೆ ಈ ಅದ್ಭುತ ವೈಶಿಷ್ಟ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News