Alert...! WhatsApp Payments ಬಳಸುವ ಮುನ್ನ ಈ ಸುದ್ದಿ ಓದಿ...
ಇಲ್ಲಿ ನಾವು ನಿಮಗೆ ವಾಟ್ಸ್ ಆಪ್ ಪೇ ಬಳಕೆಯ ಕುರಿತು ಒಟ್ಟು ಆರು ವಿಷಯಗಳನ್ನು ಹೇಳುತ್ತಿದ್ದು, WhatsApp ಪೇಮೆಂಟ್ಸ್ ಬಳಕೆದಾರರು ಅಪ್ಪ್ಲಿಕೆಶನ್ ಬಳಕೆಯ ಮುನ್ನ ನೆನಪಿನಲ್ಲಿಡುವುದು ಆವಶ್ಯಕವಾಗಿದೆ.
ನವದೆಹಲಿ: ವಾಟ್ಸಾಪ್ (WhatsApp) ಭಾರತದಲ್ಲಿ ತನ್ನ ಪಾವತಿ ಸೇವೆಯಾದ ವಾಟ್ಸಾಪ್ ಪೇ ಅನ್ನು ಪ್ರಾರಂಭಿಸಿದೆ. ಇದರೊಂದಿಗೆ, ಈಗ ನೀವು ಚಾಟ್ ನಂತೆಯೇ ವಾಟ್ಸಾಪ್ನಲ್ಲಿ ಹಣವನ್ನು ಸಹ ಪಾವತಿ ಮಾಡಬಹುದಾಗಿದೆ. ವಾಟ್ಸಾಪ್ ಪಾವತಿಯಿಂದ ಯುಪಿಐ ಮೂಲಕ ಹಣವನ್ನು ಕಳುಹಿಸಲಾಗುತ್ತದೆ. ಇದು ಇತರ ಯುಪಿಐ ಪಾವತಿ ಅಪ್ಲಿಕೇಶನ್‌ನಂತೆ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ವಾಟ್ಸಾಪ್ ಪಾವತಿಯನ್ನು ಬಳಸುವಾಗ ಕೆಲವು ಪ್ರಮುಖ ವಿಷಯಗಳನ್ನು ನೆನಪಿನಲ್ಲಿಡಬೇಕು, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಿರಬಹುದು. ಅಂತಹ 6 ವಿಷಯಗಳ ಬಗ್ಗೆ ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ, ಅದು ವಾಟ್ಸಾಪ್ ಪಾವತಿಯನ್ನು ಬಳಸುವಾಗ ನೆನಪಿನಲ್ಲಿಡಬೇಕು.
- ವಾಟ್ಸ್ ಆಪ್ ಎಂದಿಗೂ ಕೂಡ ನಿಮಗೆ ವಾಟ್ಸ್ ಆಪ್ ನಂಬರ್ ಮೇಲೆ ಪೇಮೆಂಟ್ ಸೆಟ್ ಮಾಡಲು ಪೇಮೆಂಟ್ ಸಂಬಂಧಿತ ಅಥವಾ ಬ್ಯಾಂಕಿಂಗ್ ಗೆ ಸಂಬಂಧಿಸಿದ ಮಾಹಿತಿ ಕೇಳುವುದಿಲ್ಲ. ಒಂದು ವೇಳೆ ಕಾಲ್ ಮಾಡುವ ಮೂಲಕ ಅಥವಾ ಸಂದೇಶದ ಮೂಲಕ ವಾಟ್ಸ್ ಆಪ್ ಪೇಮೆಂಟ್ ಸೆಟ್ ಮಾಡಲು ನಿಮಗೆ ಸಹಾಯ ಮಾಡುವುದಾಗಿ ಹೇಳಿದರೆ ಎಚ್ಚೆತ್ತುಕೊಳ್ಳಿ. ಈ ಕಾಲ್ ಅಥವಾ ಸಂದೇಶ ನಿಮ್ಮ ಬ್ಯಾಂಕ್ ಖಾಲಿ ಮಾಡಬಹುದು.
ಇದನ್ನು ಓದಿ- ವಾಟ್ಸಾಪ್ ಮೂಲಕ ಚಿನ್ನವನ್ನು ಕಳುಹಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೇಗೆಂದು ತಿಳಿಯಿರಿ
- ವಾಟ್ಸ್ ಆಪ್ ಪೇಮೆಂಟ್ ನ ಯಾವುದೇ ಅಧಿಕೃತ ಕಸ್ಟಮರ್ ಕೆಯರ್ ಸಂಖ್ಯೆ ಇಲ್ಲ. ಹೀಗಾಗಿ ಗೂಗಲ್ ಮೇಲೆ ವಾಟ್ಸ್ ಆಪ್ ಪೇಮೆಂಟ್ ಗೆ ಸಂಬಂಧಿಸಿದ ಯಾವುದೇ ಸಾಮಸ್ಯೆಗಾಗಿ ಕಸ್ಟಮರ್ ಕೇರ್ ಸಂಖ್ಯೆಗೋಸ್ಕರ ಹುಡುಕಾಟ ನಡೆಸಬೇಡಿ. ವಾಟ್ಸ್ ಆಪ್ ಪೇಮೆಂಟ್ ವ್ಯವಹಾರಕ್ಕೆ ನೀವು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ. ಜೊತೆಗೆ ಯಾವುದೇ ಕರೆ ಅಥವಾ ಸಂದೇಶ ವಾಟ್ಸ್ ಆಪ್ ಕಸ್ಟಮರ್ ಕೆಯರ್ ಇರುವ ಕುರಿತು ಹೇಳಿದರೆ ಎಚ್ಚೆತ್ತುಕೊಳ್ಳಿ.
-ಒಮ್ಮೆ ನೀವು pay ಗುಂಡಿಯನ್ನು ಕ್ಲಿಕ್ಕಿಸಿದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವಜಾ ಆಗುತ್ತದೆ. ಒಂದು ವೇಳೆ ನಿಮ್ಮ ವಾಟ್ಸ್ ಆಪ್ ಖಾತೆಗೆ ಯಾವುದೇ ಪೇಮೆಂಟ್ ರಿಕ್ವೆಸ್ಟ್ ಬಂದರೆ, pay ಗುಂಡಿಯನ್ನು ಒತ್ತುವ ಮುನ್ನ ರಿಕ್ವೆಸ್ಟ್ ಕಳುಹಿಸಿದವರಿಗೆ ಪೇಮೆಂಟ್ ಮಾಡಬೇಕೋ ಬೇಡವೋ ಎಂಬುದನ್ನೊಮ್ಮೆ ಪರಿಶೀಲಿಸಿ.
ಇದನ್ನು ಓದಿ- ಶೀಘ್ರದಲ್ಲಿಯೇ WhatsAppನಲ್ಲಿ ಬರಲಿದೆ ಈ ಅದ್ಭುತ ವೈಶಿಷ್ಟ್ಯ, ಫೋನ್ ಬದಲಾಯಿಸಿದರೂ ಕೂಡ ಇದು ಕೆಲಸ ಮಾಡಲಿದೆ
- ವಾಟ್ಸ್ ಆಪ್ ಮೇಲೆ ಪೇಮೆಂಟ್ ಗಾಗಿ ಯಾರೊಂದಿಗೂ ಕೂಡ ನಿಮ್ಮ ಕಾರ್ಡ್ ಡಿಟೇಲ್ಸ್, OTP ಅಥವಾ UPI ಪಿನ್ ಹಂಚಿಕೊಳ್ಳಬೇಡಿ. ಇದರಿಂದ ನಿಮ್ಮ ಜೊತೆಗೆ ಬ್ಯಾಂಕಿಂಗ್ ಫ್ರಾಡ್ ಆಗುವ ಸಾಧ್ಯತೆ ಇದೆ.
- ವಾಟ್ಸ್ ಆಪ್ ಮೇಲೆ ಟೆಕ್ಸ್ಟ್ ಮೆಸೇಜ್ ಜೊತೆಗೆ ಬರುವ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ. ಈ ಲಿಂಕ್ ಬಳಸಿ ನಿಮ್ಮ ಬ್ಯಾಂಕ್ ಖಾತೆಗೆ ಖದೀಮರು ಕನ್ನ ಹಾಕುವ ಸಾಧ್ಯತೆ ಇದೆ.
ಇದನ್ನು ಓದಿ-ಬೇರೊಬ್ಬರ WhatsApp ಸ್ಟೇಟಸ್ ನಿಮಗೆ ಇಷ್ಟವಾಗಿದೆಯೆ? ಈ ರೀತಿ ಡೌನ್ಲೋಡ್ ಮಾಡಿ
-ವಾಟ್ಸ್ ಆಪ್ ಪಾವತಿ ಸೇವೆಯ ಬಗ್ಗೆ ತಿಳಿದಿರುವವರು ಮಾತ್ರ ಜನರ ಪಾವತಿ ವಿನಂತಿಯನ್ನು ಸ್ವೀಕರಿಸಿ. ಅಪರಿಚಿತ ಸಂಖ್ಯೆಯಿಂದ ಯಾರಾದರು ನಿಮಗ ಪಾವತಿ ವಿನಂತಿ ಕಳುಹಿಸಿದರೆ, ಮೊದಲು ಆ ವಿನಂತಿಯನ್ನು ಸರಿಯಾಗಿ ಪರಿಶೀಲಿಸಿ ನಂತರ ಮಾತ್ರವೇ ಹಣ ಪಾವತಿ ಮಾಡಿ.