ಬೇರೊಬ್ಬರ WhatsApp ಸ್ಟೇಟಸ್ ನಿಮಗೆ ಇಷ್ಟವಾಗಿದೆಯೆ? ಈ ರೀತಿ ಡೌನ್ಲೋಡ್ ಮಾಡಿ

WhatsApp ನ ಅತ್ಯಂತ ಜನಪ್ರೀಯ ವೈಶಿಷ್ಟ್ಯಗಳಲ್ಲಿ WhatsApp ಸ್ಟೇಟಸ್ ಕೂಡ ಒಂದು. ಈ ವೈಶಿಷ್ಟ್ಯದ ದೊಡ್ಡ ನೂನ್ಯತೆ ಎಂದರೆ ಬೇರೊಬ್ಬರು ಹಂಚಿಕೊಂಡಿರುವ ಸ್ಟೇಟಸ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ಒಂದು ಟ್ರಿಕ್ ಅನ್ನು ನಾವು ನಿಮಗೆ ಹೇಳಲಿದ್ದು, ಇದರ ಸಹಾಯದಿಂದ ನೀವು ಬೇರೊಬ್ಬರ ಸ್ಟೇಟಸ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

Last Updated : Nov 13, 2020, 04:08 PM IST
  • WhatsApp ನ ಅತ್ಯಂತ ಜನಪ್ರೀಯ ವೈಶಿಷ್ಟ್ಯಗಳಲ್ಲಿ WhatsApp ಸ್ಟೇಟಸ್ ಕೂಡ ಒಂದು.
  • ನಿಮಗೆ ಇಷ್ಟವಾದ ಬೇರೊಬ್ಬರ ಸ್ಟೇಟಸ್ ಅನ್ನು ನೀವು ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
  • ಆದರೆ, ನಾವು ಹೇಳುತ್ತಿರುವ ಟ್ರಿಕ್ ಅನ್ನು ಬಳಸಿ ನೀವು ಬೇರೊಬ್ಬರ ಸ್ಟೇಟಸ್ ಡೌನ್ಲೋಡ್ ಮಾಡಬಹುದು.
ಬೇರೊಬ್ಬರ WhatsApp ಸ್ಟೇಟಸ್ ನಿಮಗೆ ಇಷ್ಟವಾಗಿದೆಯೆ? ಈ ರೀತಿ ಡೌನ್ಲೋಡ್ ಮಾಡಿ title=

ನವದೆಹಲಿ: ಇಂದಿನ ಕಾಲದಲ್ಲಿ ಅದರಲ್ಲೂ ಕೊರೊನಾ ಪ್ರಕೋಪದ ಕಾಲದಲ್ಲಿ ಬಹುತೇಕ ಜನರು ಸಂವಹನಕ್ಕಾಗಿ ವಾಟ್ಸಾಪ್ (WhatsApp) ಎಂಬ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಇದೇ ವೇಳೆ ವಾಟ್ಸಾಪ್ ಕೂಡ  ತನ್ನ ಬಳಕೆದಾರರಿಗೆ ಅನುಕೂಲವಾಗುವಂತೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇವುಗಳಲ್ಲಿ ಅತ್ಯಂತ ವಿಶೇಷ ವೈಶಿಷ್ಟ್ಯ ಎಂದರೆ ವಾಟ್ಸಾಪ್ ಸ್ಟೇಟಸ್ ವೈಶಿಷ್ಟ್ಯ. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ ಸ್ಮರಣೀಯ ಫೋಟೋಗಳನ್ನು  ಅಡಿಬರಹದೊಂದಿಗೆ ಹಂಚಿಕೊಳ್ಳಬಹುದು. ಆದರೆ, ಈ ವೈಶಿಷ್ಟ್ಯದ ದೊಡ್ಡ ನ್ಯೂನತೆಯೆಂದರೆ ಹಂಚಿದ ವಾಟ್ಸಾಪ್ ಸ್ಥಿತಿಯನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಆದರೆ ಇಂದು ನಾವು ಇಲ್ಲಿ ವಿಶೇಷ ಟ್ರಿಕ್ ಬಗ್ಗೆ ಹೇಳಲಿದ್ದೇವೆ, ಈ ಟ್ರಿಕ್ ಬಳಸಿ ನೀವು  ಯಾವುದೇ ಬಳಕೆದಾರರ ವಾಟ್ಸಾಪ್ ಸ್ಟೇಟಸ್ ಅನ್ನುಸುಲಭವಾಗಿ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

ಇದನ್ನು ಓದಿ- Big news: ಈಗ ನೀವು WhatsApp ಮೂಲಕವೂ ಪೇಮೆಂಟ್ ಮಾಡಬಹುದು

ಈ ವಿಧಾನ ಅನುಸರಿಸಿ ಬೇರೊಬ್ಬರ ವಾಟ್ಸ್ ಆಪ್ ಸ್ಟೇಟಸ್ ಡೌನ್ಲೋಡ್ ಮಾಡಿ
- ಬೇರೊಬ್ಬರ ವಾಟ್ಸಾಪ್ ಸ್ಟೇಟಸ್ ಅನ್ನು ಡೌನ್‌ಲೋಡ್ ಮಾಡಲು, ಮೊದಲು ನಿಮ್ಮ ಫೋನ್‌ನಲ್ಲಿ Status Downloader For WhtsApp ಅನ್ನು ಸ್ಥಾಪಿಸಿ.
- ಈ ಅಪ್ಲಿಕೇಶನ್ ತೆರೆದ ತಕ್ಷಣ, ನೀವು ಇಲ್ಲಿ ಎರಡು ಆಯ್ಕೆಗಳನ್ನು ಗಮನಿಸಬಹುದು. ಚಾಟ್ ಮಾಡಲು ಮೊದಲ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಎರಡನೇ ಆಯ್ಕೆಯನ್ನು ಸ್ಟೇಟಸ್ ಡೌನ್ಲೋಡ್ ಮಾಡಿ. ಎರಡನೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಂದರೆ ವಾಟ್ಸ್ ಆಪ್ ಸ್ಟೇಟಸ್ ಡೌನ್ಲೋಡರ್ ಮೇಲೆ .
- ವಾಟ್ಸಾಪ್ನಲ್ಲಿ ಇತ್ತೀಚೆಗೆ ಬಳಕೆದಾರರು ಹಂಚಿಕೊಂಡಿರುವ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಇಲ್ಲಿ ನೀವು ಕಾಣಬಹುದು.
- ಈಗ ನೀವು ಡೌನ್‌ಲೋಡ್ ಮಾಡಲು ಬಯಸುವ ಫೋಟೋ ಅಥವಾ ವೀಡಿಯೊವನ್ನು ಕ್ಲಿಕ್ ಮಾಡಿ. ಫೋಟೋ ಅಥವಾ ವೀಡಿಯೊ ಕ್ಲಿಕ್ ಮಾಡಿದಾಗ, ಫೈಲ್ ಮ್ಯಾನೇಜರ್‌ನಲ್ಲಿನ ಸ್ಟೇಟಸ್ ಡೌನ್ ಲೋಡರ್ ಫೋಲ್ಡರ್ ನಿರ್ಮಾಣಗೊಂಡು ಅದರಲ್ಲಿ ಅದು ಸೇವ್ ಆಗಲಿದೆ.

ಇದನ್ನು ಓದಿ-Facebook Messenger, ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ವೈಶಿಷ್ಟ್ಯ

ಗಮನಿಸಿ: ಈ ಟ್ರಿಕ್ ಕೇವಲ ಅಂಡ್ರಾಯಿಡ್ ಬಳಕೆದಾರರಿಗೆ ಮಾತ್ರವೇ ಸೀಮಿತವಾಗಿದೆ. ಅಷ್ಟೇ ಅಲ್ಲ ಈ ಟ್ರಿಕ್ ಅನ್ನು ನೀವು ನಿಮ್ಮ ರಿಸ್ಕ್ ಮೇಲೆ ಪ್ರಯತ್ನಸಿ. ಏಕೆಂದರೆ, ಸ್ಟೇಟಸ್ ಡೌನ್ ಲೋಡ್ ಮಾಡಲು ನೀವು ಥರ್ಡ್ ಪಾರ್ಟಿ ಆಪ್ ಬಳಸುತ್ತಿರುವಿರಿ ಎಂಬುದನ್ನು ಮರೆಯಬೇಡಿ.

ಇದನ್ನು ಓದಿ- ತನ್ನ Report ವೈಶಿಷ್ಟ್ಯವನ್ನು ಅಪ್ಡೇಟ್ ಮಾಡಲು ಮುಂದಾದ WhatsApp, ಇತ್ತೀಚಿನ ಚ್ಯಾಟ್ ಪುರಾವೆ ನೀಡಬೇಕು

WhatsApp ನ Disappearing Messages ವೈಶಿಷ್ಟ್ಯ
ವಾಟ್ಸಾಪ್ ಕಳೆದ ವಾರ ಬಳಕೆದಾರರಿಗಾಗಿ Disappearing Message ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಇದರ ವಿಶೇಷತೆ ಎಂದರೆ ನಿಮ್ಮ ವಾಟ್ಸಾಪ್‌ನಲ್ಲಿನ ಸಂದೇಶಗಳನ್ನು 7 ದಿನಗಳಲ್ಲಿ ಸ್ವಯಂಚಾಲಿತವಾಗಿ ಇದು ಅಳಿಸಿ ಹಾಕುತ್ತದೆ. ಇದು Gmail, Telegram ಮತ್ತು Snapchat ನಲ್ಲಿರುವ ವೈಶಿಷ್ಟ್ಯಗಳಂತೆ ಕಾರ್ಯನಿರ್ವಹಿಸುತ್ತದೆ  ನೀವು ಈ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಸಿದರೆ, ಸಂದೇಶ ಕಣ್ಮರೆಯಾಗುವ ವೈಶಿಷ್ಟ್ಯವು ಅವುಗಳಲ್ಲಿ ಈಗಾಗಲೇ ಲಭ್ಯವಿದೆ. ಈ ವೈಶಿಷ್ಟ್ಯ ಬಳಸಲು ನೀವು ನಿಮ್ಮ ವಾಟ್ಸ್ ಆಪ್ ಖಾತೆಯ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ವೈಶಿಷ್ಟ್ಯವನ್ನು ಸಕ್ರೀಯಗೋಳಿಸಬೇಕು.

Trending News