ನವದೆಹಲಿ : ಯುಟ್ಯೂಬ್ (Youtube) ಕಂಟೆಂಟ್ ಕ್ರಿಯೇಟರ್ಸ್ ಗೆ ಗುಡ್ ನ್ಯೂಸ್.  ಯುಟ್ಯೂಬ್ ತನ್ನ ಕಂಟೆಂಟ್ ಕ್ರಿಯೇಟರ್ಸ್ ಗೆ 100 ದಶಲಕ್ಷ ಡಾಲರ್ ಮೊತ್ತ ತೆಗೆದಿಡುತ್ತಿರುವುದಾಗಿ ಹೇಳಿಕೊಂಡಿದೆ. ಮುಂದಿನ ತಿಂಗಳಿನಲ್ಲಿ ಈ ನಿಧಿಯ ಅಧಿಕೃತ ಘೋಷಣೆ  ಮಾಡುವುದಾಗಿ ಯುಟ್ಯೂಬ್ ನಿರ್ಮಾತೃ ಕಂಪನಿಯಾದ  ಅಲ್ಫಾಬೇಟ್ ಇಂಕ್ (Alphabet Inc ) ಹೇಳಿದ್ದು, 2022ರಿಂದ ಈ ದುಡ್ಡು ಕಂಟೆಂಟ್ ಕ್ರಿಯೇಟರ್ಸ್ ಗೆ (content creators) ಸಿಗಲಿದೆ.  


COMMERCIAL BREAK
SCROLL TO CONTINUE READING

ಕಂಟೆಂಟ್ ಕ್ರಿಯೆಟರ್ಸ್ ಏನು ಮಾಡಬೇಕು.?
ಯುವ ಕಂಟೆಂಟ್ ಕ್ರಿಯೆಟರ್ಸ್ ರನ್ನು (content creators)  ಆಕರ್ಷಿಸಲು ಯುಟ್ಯೂಬ್ ಈ ನಿಧಿಯನ್ನು ಬಳಸಲಿದೆ. ಯಾರಿಗೆ ಅತಿದೊಡ್ಡ ಫ್ಯಾನ್ ಫಾಲೋಯಿಂಗ್ ಇದೆಯೋ ಅಂತವರನ್ನೇ ಯುಟ್ಯೂಬ್ (Youtube)  ಪಿಕ್ ಮಾಡಲಿದೆ. ಯೂಟ್ಯೂಬ್ ನಲ್ಲಿ ಕಾಮೆಡಿ ಸ್ಕಿಟ್, ಡ್ಯಾನ್ಸ್ (Dance) ಇತ್ಯಾದಿ ಆಕರ್ಷಕ ಚಟುವಟಿಕೆಗಳಲ್ಲಿ ತೊಡಗಿರುವ  ತುಂಬಾ ಫ್ಯಾನ್ ಫಾಲೋಯಿಂಗ್ (Fan following) ಇರುವ ಯುವಕರಿಗೆ ಇದರಿಂದ ಲಾಭ  ಆಗಲಿದೆ. ಅಂಥ ಯುವಕರನ್ನೇ ಹೆಚ್ಚು ಆಕರ್ಷಿಸುವ ಉದ್ದೇಶದಿಂದ ಯುಟ್ಯೂಬ್ 100 ದಶಲಕ್ಷ ಡಾಲರ್ ದುಡ್ಡು ತೆಗೆದಿಟ್ಟಿದೆ.  ಕಂಟೆಂಟ್ ಕ್ರಿಯೆಟರ್ಸ್ ಮಾಡಬೇಕಾದ್ದು ಇಷ್ಟೇ. ಅವರು ಜನ ಮೆಚ್ಚುವಂತಹ ಅಂದರೆ ಹೆಚ್ಚು ವಿವ್ಸ್ ಪಡೆಯಬಲ್ಲ ಸಣ್ಣ ಸಣ್ಣ ವಿಡಿಯೋಗಳನ್ನು (Video) ಮಾಡಬೇಕು. ನಿಮ್ಮ ವಿಡಿಯೋಗಳನ್ನು ತುಂಬಾ ವಿವ್ಸ್, ಲೈಕ್ ಪಡೆದರೆ ನಿಮಗೆ ಯುಟ್ಯೂಬ್ ಒಂದಷ್ಟು ದುಡ್ಡು ಕೊಡಲಿದೆ. ಮಾಸಿಕ ಲೆಕ್ಕಾಚಾರದಲ್ಲಿ ಯುಟ್ಯೂಬ್ ನಿಮಗೆ ಪೇ ಮಾಡಲಿದೆ. 


ಇದನ್ನೂ ಓದಿ : Sanjeevani App ಲಾಂಚ್ ಮಾಡಿದ Snapdeal ; Covid 19 ರೋಗಿಗಳಿಗೆ ಇಲ್ಲಿ ಸುಲಭವಾಗಿ ಸಿಗಲಿದೆ ಪ್ಲಾಸ್ಮಾ


ಯುಟ್ಯೂಬ್ ಲೆಕ್ಕಾಚಾರ ಏನು..?
ಮಾರುಕಟ್ಟೆಯಲ್ಲಿ ಶಾರ್ಟ್ ವಿಡಿಯೋ ಕಂಟೆಂಟ್ (Short video content) ತುಂಬಾ ಚೆನ್ನಾಗಿ ವಿವ್ಸ್ ಪಡೆಯುತ್ತಿರುವ ಕಾರಣ, ಟಿಕ್ ಟಾಕ್ (TikTok ) ಮುಂತಾದ ಶಾರ್ಟ್ ವಿಡಿಯೋ ಆಪ್ ಗಳಿಗೆ ಸ್ಪರ್ಧೆ ನೀಡುವ  ಉದ್ದೇಶದಿಂದ ಯುಟ್ಯೂಬ್ ಈ ಯೋಜನೆಗೆ ಕೈ ಹಾಕಿದೆ. ಶಾರ್ಟ್ ವಿಡಿಯೋ ವ್ಯವಹಾರದಲ್ಲಿ ನಂಬರ್ ಒನ್ ಆಗಲು ಯುಟ್ಯೂಬ್ ಈ  ಯೋಜನೆ ರೂಪಿಸಿದೆ. 


ಜನಪ್ರಿಯ ಶಾರ್ಟ್ ವಿಡಿಯೋ ಆಪ್ ಟಿಕ್ ಟಾಕ್   ಮುಂದಿನ ಮೂರು ವರ್ಷಗಳಲ್ಲಿ ಅಮೆರಿಕದ (America) ತನ್ನ ಕಂಟೆಂಟ್ ಕ್ರಿಯೆಟರ್ಸ್ ಗಾಗಿ ಶತಕೋಟಿ ಡಾಲರ್ ದುಡ್ಡು ತೆಗೆದಿಟ್ಟಿದೆ. ಸ್ನಾಪ್ ಅವಾರ್ಡ್ (Snap award) ಎಂಬ ಸಂಸ್ಥೆ ಕೂಡಾ ದಿನಕ್ಕೆ ಹತ್ತು ಲಕ್ಷ ಡಾಲರ್ ಲೆಕ್ಕದಲ್ಲಿ ದುಡ್ಡು ನೀಡುತ್ತಿದೆ. ಇವುಗಳಿಗೆ ಪೈಪೋಟಿ ನೀಡಲು ಯುಟ್ಯೂಬ್ ಕೂಡಾ ಕಂಟೆಂಟ್ ಕ್ರಿಯೆಟರ್ಸ್ ಗೆ ಆಕರ್ಷಕ ಪ್ರಮಾಣದಲ್ಲಿ ದುಡ್ಡು ನೀಡಲು ಮುಂದಾಗಿದೆ. 


ಇದನ್ನೂ ಓದಿ : ತಕ್ಷಣ ನಿಮ್ಮ WhatsApp setting ಬದಲಾಯಿಸಿಕೊಳ್ಳಿ; ಇಲ್ಲವಾದರೆ Hack ಆಗುವ ಅಪಾಯ ತಪ್ಪಿದ್ದಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.