ಮೂರು ದಿನ ಘೋರ ಅಂಧಕಾರದಲ್ಲಿ ಮುಳುಗಲಿದೆಯಾ ಈ ಭೂಮಿ..?

ಸೋಶಿಯಲ್ ಮೀಡಿಯಾ ಸೈಟ್ ಟಿಕ್ ಟಾಕ್ ನಲ್ಲಿ  @timetraveler2582 ಎಂಬ ಯೂಸರ್ ತಾನು ಟೈಮ್ ಟ್ರಾವೆಲ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಟೈಂ ಟ್ರಾವೆಲ್ ಮೂಲಕ 561 ವರ್ಷ ಮುಂದಕ್ಕೆ ಅಂದರೆ 2582ನೇ ಇಸವಿಗೆ ಹೋಗಿ ಬಂದಿರುವುದಾಗಿ ಹೇಳಿದ್ದಾನೆ. 

Written by - Ranjitha R K | Last Updated : May 5, 2021, 05:14 PM IST
  • ಓರ್ವ ಟಿಕ್ ಟಾಕ್ ಯೂಸರ್ @timetraveler2582 ತಾನು ಟೈಂ ಟ್ರಾವೆಲ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ
  • 2582 ನೇ ಇಸವಿ ತನಕ ಮುಂದೆ ಹೋಗಿ ಬಂದಿರುವುದಾಗಿ ಆತ ಹೇಳಿಕೊಂಡಿದ್ದಾನೆ.
  • ಆತ ಹೇಳಿದಂತೆ 2026ಕ್ಕೆ ಏನಾಗಲಿದೆ ಗೊತ್ತಾ..?
ಮೂರು ದಿನ ಘೋರ ಅಂಧಕಾರದಲ್ಲಿ ಮುಳುಗಲಿದೆಯಾ ಈ ಭೂಮಿ..? title=
2582 ನೇ ಇಸವಿ ತನಕ ಮುಂದೆ ಹೋಗಿ ಬಂದಿರುವ timetraveler (Photo zee news)

ನವದೆಹಲಿ :  ನಿಮಗೆ ತಿಳಿದಿರಬಹುದು.  ಈ ಪ್ರಪಂಚದಲ್ಲಿ ಹಲವಾರು ಮಂದಿ ಟೈಂ ಟ್ರಾವೆಲ್ (Time Travel) ಮಾಡಿದ್ದೇವೆಂದು ಹೇಳಿಕೊಳ್ಳುತ್ತಾರೆ.  ಬಹುಶಃ ಟೈಂ ಟ್ರಾವೆಲರ್ ಏನೆಂಬುದು ಕೆಲವರಿಗೆ ಗೊತ್ತಿರಲಿಕ್ಕಿಲ್ಲ.  ಟೈಂ ಟ್ರಾವೆಲಿಂಗ್ ಅಂದರೆ ವರ್ತಮಾನದಿಂದ ಬಹಳ ವರ್ಷ ಹಿಂದಕ್ಕೆ ಅಥವಾ ಮುಂದಕ್ಕೆ ಹೋಗುವಂತದ್ದು.  ಟೈಂ ಟ್ರಾವೆಲ್ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಮಂದಿ ಭವಿಷ್ಯದಲ್ಲಿ ಆಗುವಂತಹ ಘಟನಾವಳಿಗಳನ್ನು ಮೊದಲೇ ಹೇಳುತ್ತಾರೆ. ಇತ್ತೀಚೆಗೆ ಓರ್ವ ಟಿಕ್ ಟಾಕ್ ಯೂಸರ್ @timetraveler2582 ತಾನು 2582 ನೇ ಇಸವಿ ತನಕ ಮುಂದೆ ಹೋಗಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.

ಟೈಂಟ್ರಾವೆಲರ್ ಹೇಳಿಕೆಯಿಂದ ಎಲ್ಲರಿಗೂ ಅಚ್ಚರಿ :
ಸೋಶಿಯಲ್ ಮೀಡಿಯಾ (Social media) ಸೈಟ್ ಟಿಕ್ ಟಾಕ್ (tiktok)ನಲ್ಲಿ  @timetraveler2582 ಎಂಬ ಯೂಸರ್ ತಾನು ಟೈಮ್ ಟ್ರಾವೆಲ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಟೈಂ ಟ್ರಾವೆಲ್ ಮೂಲಕ 561 ವರ್ಷ ಮುಂದಕ್ಕೆ ಅಂದರೆ 2582ನೇ ಇಸವಿಗೆ ಹೋಗಿ ಬಂದಿರುವುದಾಗಿ ಹೇಳಿದ್ದಾನೆ. ಅವನು ಹೇಳಿದ್ದನ್ನು ನಂಬುವುದಾದರೆ ಜೂನ್ 6, 2026ರಂದು ಈ ಭೂಮಿ ಅಚಾನಕ್ ಆಗಿ ಘೋರ ಅಂಧಕಾರದಲ್ಲಿ ಮುಳುಗಲಿದೆ.  ಆ ಹೊತ್ತಿನಲ್ಲಿ ಯಾವುದೇ ರೀತಿಯ ಬೆಳಕು ಗೋಚರಿಸುವುದಿಲ್ಲ.  ಇಷ್ಟು ಹೇಳಿದ್ದೇ ತಟ್ ಆತನ ಫ್ಯಾನ್ ಫಾಲೋಯಿಂಗ್ ಸಿಕ್ಕಾಪಟ್ಟೆ ಏರಿಕೆಯಾಗಿದೆ. 

ಇದನ್ನೂ ಓದಿ : Google Pay ಬಳಕೆದಾರರಿಗೆ ಸಿಗಲಿದೆ ಈ ಹೊಸ ಸೌಲಭ್ಯ

5 ವರ್ಷದಲ್ಲಿ ಬದಲಾಗಲಿದೆ ಪ್ರಪಂಚ :
ಈ ಟೈಂ ಟ್ರಾವೆಲರ್ ( timetraveler) ತನ್ನ ಹೇಳಿಕೆಗೆ ಪೂರಕವಾಗಿ ಯಾವುದೇ ಸಾಕ್ಷ್ಯ ನೀಡಿಲ್ಲ. ಆದರೆ ಜೂನ್ 6, 2026 ರ ಬಳಿಕ ಮೂರು ದಿನ ಈ ಭೂಮಿಗೆ ಘೋರ ಅಂಧಕಾರ ಆವರಿಸಲಿದೆ ಎಂದು ಆತ ವಿಶ್ವಾಸಪೂರ್ವಕವಾಗಿ ಹೇಳುತ್ತಾನೆ.  ಐದು ವರ್ಷಗಳ ಬರುವ ಈ ಅಂಧಕಾರ ಎಷ್ಟೊಂದು ಘೋರವಾಗಿರಲಿದೆ ಎಂದರೆ ಆಕಾಶದಿಂದ ಬರುವ ಯಾವುದೇ ಬೆಳಕನ್ನು (Light) ನೋಡಲು ಅನುಮತಿ ಇರುವುದಿಲ್ಲ. ಬೆಳಕಿನ ಇತರ ಮೂಲವನ್ನೂ (Light Source) ಬಳಸಲು ಅನುಮತಿ ಇರುವುದಿಲ್ಲ.  ಆ ದಿನಗಳಲ್ಲಿ ಕೇವಲ ಮೇಣದ ಬತ್ತಿಯನ್ನು (Candel) ಮಾತ್ರ ಬಳಸಬಹುದು.

ಟೈಂ ಟ್ರಾವೆಲಿಂಗ್ ಸಾಧ್ಯವೇ..?
ಟೈಂ ಟ್ರಾವೆಲ್ ಸಾಧ್ಯವೋ ಇಲ್ಲವೋ ಎಂಬುದಕ್ಕೆ ವಿಜ್ಞಾನದಲ್ಲಿ (Science)  ಹಲವು ತರ್ಕಗಳಿವೆ. ಕೆಲವರು ಟೈಂ ಟ್ರಾವೆಲ್ ಸಾಧ್ಯವಿದೆ ಎನ್ನುತ್ತಾರೆ. ಇನ್ನು ಕೆಲವರು ಸಾಧ್ಯವಿಲ್ಲ ಅಂತಲೂ ವಾದಿಸುತ್ತಾರೆ.  

ಇದನ್ನೂ ಓದಿ : 5G Spectrum: ಭಾರತದಲ್ಲಿ 5G ಪ್ರಯೋಗಕ್ಕೆ ಗ್ರೀನ್ ಸಿಗ್ನಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News