ಮದುವೆಯ ವೈರಲ್ ವಿಡಿಯೋ: ಮದುವೆ ಎಂಬುದು ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಒಂದು ಪ್ರಮುಖ ಘಟ್ಟ. ಮದುವೆಯ ಬಗ್ಗೆ ಎಲ್ಲರಿಗೂ ತಮ್ಮದೇ ಆದ ಕನಸುಗಳಿರುತ್ತವೆ. ಆದರೆ, ಮದುವೆ ಎಂಬುದು ಕೇವಲ ಗಂಡು-ಹೆಣ್ಣಿನ ಸಂಬಂಧ ಬೆಸೆಯುವ ಸಂಭ್ರಮಾಚರಣೆ ಮಾತ್ರವಲ್ಲ ಎರಡು ಕುಟುಂಬಗಳು ಸೇರುವ ಬಂಧನವೂ ಹೌದು. 


COMMERCIAL BREAK
SCROLL TO CONTINUE READING

ಪ್ರತಿ ಮದುವೆಯಲ್ಲಿ ಮೋಜು-ಮಸ್ತಿ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಿಂದಾಗಿ ಅಂತಹ ಮೋಜು-ಮಸ್ತಿಯ ವಿಡಿಯೋಗಳು ಬಲು ಬೇಗ ವೈರಲ್ ಆಗುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಖತ್ ಸದ್ದು ಮಾಡುತ್ತಿದೆ.


ಇದನ್ನೂ ಓದಿ- Viral Video : ಗೆಳೆಯರ ಈ ಕೆಲಸದಿಂದ ನೆತ್ತಿಗೇರಿತು ವರನ ಕೋಪ .! ಮುಂದೆ ..?


ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ಮದುವೆಯ ವೈರಲ್ ವಿಡಿಯೋದಲ್ಲಿ ಆರತಕ್ಷತೆಯಲ್ಲಿ ಜೊತೆಯಾಗಿ ನಿಂತಿದ್ದ ವಧು-ವರನ ಮಧ್ಯೆ ಅವರ ಸೋದರ ಸಂಬಂಧಿ ಎಂಟ್ರಿ ನೀಡುತ್ತಾನೆ. ಈ ಸಂದರ್ಭದಲ್ಲಿ ಮೊದಲಿಗೆ ವಧುವಿನ ಜೊತೆ ಮಾತಿಗ ನಿಂತ ಈತ ಮುಂದೆ ಮಾಡಿದ್ದೇನು ಗೊತ್ತಾ... ಈ ವಿಡಿಯೋ ನೋಡಿ...



ವಿಡಿಯೋದಲ್ಲಿ ಕಾಣುವಂತೆ ಸೋದರ ಸಂಬಂಧಿಯು ವಧುವನ್ನು ತನ್ನೊಂದಿಗೆ ನೃತ್ಯ ಮಾಡುವಂತೆ ಆಹ್ವಾನಿಸುತ್ತಾನೆ. ಬಳಿಕ ಹಿಂಬದಿಯಿಂದ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಅವರ ಪ್ರಸಿದ್ಧ ಹಾಡು 'ಕಹೋ ನಾ ಪ್ಯಾರ್ ಹೈ' ಹಾಡು ಕೇಳಿಬರುತ್ತದೆ. ವರನನ್ನು ಹಿಂದಕ್ಕಿದ ಈಗ ವಧುವಿನ ಜೊತೆಗೆ ಜಬರ್ದಸ್ತ್ ನೃತ್ಯ ಮಾಡುತ್ತಾನೆ. 


ವೇದಿಕೆಯಲ್ಲಿ ಹಾಡಿನ ಹುಕ್ ಸ್ಟೆಪ್ ನಲ್ಲಿ ಇಬ್ಬರೂ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬೆರಗಾಗಿ ನಿಂತ ವರ ಇವರ ನೃತ್ಯ ನೋಡುತ್ತಾ ಶಿಳ್ಳೆ ಹಾಕುತ್ತಾ ನಿಂತಿರುವುದನ್ನು ಕಾಣಬಹುದು. 


ಇದನ್ನೂ ಓದಿ- Viral Video: ‘ರಸಗುಲ್ಲಾ’ ತಿನ್ನದ ವಧುವಿನ ಕಪಾಳಕ್ಕೆ ಬಾರಿಸಿದ ವರ, ವೇದಿಕೆಯಲ್ಲೇ ಬಿಗ್ ಫೈಟ್..!


'ಕಹೋ ನಾ ಲವ್ ಹೈ' ಎಂಬ ಶೀರ್ಷಿಕೆಯೊಂದಿಗೆ ಮದುವೆಬೆಲ್ಸ್ 2022_ ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಹಲವು ಮಂದಿ ಈ ಮೋಜಿನ ವಿಡಿಯೋವನ್ನು  ತುಂಬಾ ಇಷ್ಟಪಟ್ಟಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.