Viral Video : ಹಾರ ಬದಲಾಯಿಸುತ್ತಿದ್ದ ವೇಳೆ ಮಧ್ಯೆ ಬಂದ ಪ್ರೇಮಿ : ಎಲ್ಲರೆದುರು ತೋರಿಸಿಯೇ ಬಿಟ್ಟ ತನ್ನ ಆಟ

ಕೆಲವರದ್ದು ಪ್ರೇಮ ವಿವಾಹವಾದರೆ, ಕೆಲವರದ್ದು ತಂದೆ ತಾಯಿ ನೋಡಿ ಮಾಡಿದ ಮದುವೆಯಾಗಿರುತ್ತದೆ. ಇನ್ನು ಕೆಲವರ ಜೀವನದಲ್ಲಿ ಪ್ರೇಮ ಏನೋ ಇರಬಹುದು ಆದರೆ ಕಾರಣಾಂತರಗಳಿಂದ ಅದು ಮದುವೆ ತನಕ ಬಾರದೆಯೂ ಹೋಗಬಹುದು. 

Written by - Ranjitha R K | Last Updated : Jul 8, 2022, 01:04 PM IST
  • ಒಂದು ಹೆಣ್ಣಿಗೆ ಇಂದು ಗಂಡು ಎನ್ನುವುದು ಮೊದಲೇ ನಿಶ್ಚಯವಾಗಿರುತ್ತದೆ
  • ಮದುವೆ ಎನ್ನುವುದು ಋಣಾನುಬಂಧ
  • ಯಾರ ಪಾಲಿಗೆ ಯಾರು ಸಿಗಬೇಕು ಎಂದು ಮೊದಲೇ ನಿರ್ಧಾರವಾಗಿರುತ್ತದೆ
Viral Video : ಹಾರ ಬದಲಾಯಿಸುತ್ತಿದ್ದ ವೇಳೆ ಮಧ್ಯೆ ಬಂದ ಪ್ರೇಮಿ : ಎಲ್ಲರೆದುರು ತೋರಿಸಿಯೇ ಬಿಟ್ಟ ತನ್ನ ಆಟ   title=
Brides Boyfriend Came In Marriage (photo instagram)

Brides Boyfriend Came In Marriage : ಒಂದು ಹೆಣ್ಣಿಗೆ ಇಂದು ಗಂಡು ಎನ್ನುವುದು ಮೊದಲೇ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಮದುವೆ ಎನ್ನುವುದು ಋಣಾನುಬಂಧ ಎಂದು ಕೂಡಾ ಹೇಳುವುದನ್ನು ಕೂಡಾ ನಾವು ಕೇಳಿರುತ್ತೇವೆ. ಯಾರ ಪಾಲಿಗೆ ಯಾವುದು ಸಿಗಬೇಕು ಎನ್ನುವುದು ಮೊದಲೇ ನಿರ್ಧಾರವಾಗಿರುತ್ತದೆಯಂತೆ.  ನಾವು ನಮ್ಮ ಹಿರಿಯರು ಎಷ್ಟೋ ಸಾರಿ ಹೇಳುವುದನ್ನು ಕೇಳಿರುತ್ತೇವೆ. ದೇವರು ಹಣೆಯಲ್ಲಿ ಯಾರನ್ನು ಬರೆದಿರುತ್ತಾರೆಯೋ ಅವರೇ ನಮ್ಮ ಜೀವನದಲ್ಲಿ ಸಿಗುತ್ತಾರೆ ಎಂದು. 

ಕೆಲವರದ್ದು ಪ್ರೇಮ ವಿವಾಹವಾದರೆ, ಕೆಲವರದ್ದು ತಂದೆ ತಾಯಿ ನೋಡಿ ಮಾಡಿದ ಮದುವೆಯಾಗಿರುತ್ತದೆ. ಇನ್ನು ಕೆಲವರ ಜೀವನದಲ್ಲಿ ಪ್ರೇಮ ಏನೋ ಇರಬಹುದು ಆದರೆ ಕಾರಣಾಂತರಗಳಿಂದ ಅದು ಮದುವೆ ತನಕ ಬಾರದೆಯೂ ಹೋಗಬಹುದು. ಹೀಗಾದಾಗ ಕೆಲವರು ಮೇಲೆ ಹೇಳಿದಂತೆ ತನ್ನ ಹಣೆಯಲಿಲ್ಲ ಎಂದು ಸುಮ್ಮನಿರುತ್ತಾರೆ. ಇನ್ನು ಕೆಲವರು ಹಣೆ ಬರಹವನ್ನು ಮೀರಿ ನಡೆಯುತ್ತೇನೆ ಎಂದು ಕೆಟ್ಟ ಧೈರ್ಯಕ್ಕೂ ಕೈ ಹಾಕುತ್ತಾರೆ. ಬಿಹಾರದಲ್ಲಿ ನಡೆದದ್ದು ಇಂಥದ್ದೇ ಘಟನೆ .. 

ಇದನ್ನೂ ಓದಿ : ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ ಆನೆ- ಇಲ್ಲಿದೆ ಅದ್ಭುತ ವಿಡಿಯೋ

ಬಿಹಾರದ ನಳಂದಾದಲ್ಲಿ ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಷಯ ಹುಡುಗಿಯ ಮನೆಯವರ ಕಿವಿಗೆ ಬೀಳುತ್ತಿದ್ದಂತೆಯೇ ಸಾಮಾನ್ಯವಾಗಿ ನಡೆಯುವಂತೆ ಪೋಷಕರು ಪ್ರೀತಿಗೆ ಅಡ್ಡಿಯಾಗಿದ್ದಾರೆ. ಬೇರೊಂದು ಕಡೆ ಸಂಬಂಧ ಗೊತ್ತು ಮಾಡಿದ್ದಾರೆ. ಮದುವೆ ಕೂಡಾ ನಿಶ್ಚಯವಾಗುತ್ತದೆ. ಮದುವೆ ದಿನ ಮದುವೆ ಶಾಸ್ತ್ರಗಳು ನಡೆಯುತ್ತವೆ. ಇನ್ನೇನು ವಧು ವರ ಹಾರ ಬದಲಾಯಿಸಬೇಕು ಎನ್ನುವಷ್ಟರಲ್ಲಿ ವೇದಿಕೆಯ ಮೇಲೆ ಹುಡುಗಿಯ ಪ್ರೇಮಿ ಕಾಣಿಸಿಕೊಳ್ಳುತ್ತಾನೆ. ವರನಿಗೆ ಅಡ್ಡಲಾಗಿ ಬಂದು ವಧುವಿನ ಕೊರಳಿಗೆ ಹಾರ ಹಾಕುತ್ತಾನೆ. ಮಾತ್ರವಲ್ಲ ಹಣೆಗೆ ಸಿಂಧೂರ ಕೂಡಾ ಹಚ್ಚುತ್ತಾನೆ.  

 

 
 
 
 

 
 
 
 
 
 
 
 
 
 
 

A post shared by Zee News (@zeenews)

ವರ, ವರನ ಮನೆಯವರು, ವಧುವಿನ ಮನೆಯವರು ಎಲ್ಲಾ ಸೇರಿದ್ದ ಜಾಗಕ್ಕೆ ಬಂದು ಆ ಪ್ರೇಮಿ ಈ ರೀತಿ ಮಾಡಿ ಬಿಟ್ಟಿದ್ದಾನೆ. ಇದನ್ನು ಕೆಟ್ಟ ಧೈರ್ಯ ಅನ್ನಬೇಕೋ, ಹುಚ್ಚು ಪ್ರೀತಿ ಅನ್ನಬೇಕೋ ಗೊತ್ತಿಲ್ಲ. ಆದರೆ ಪ್ರೇಮಿ ಮಾತ್ರ ತನ್ನ ಮನಸ್ಸಿಗೆ ಬಂದಂತೆ ನಡೆದುಕೊಂಡು ಬಿಟ್ಟಿದ್ದಾನೆ.ಇನ್ನೇನು  ಆ ಪ್ರೇಮಿಗೆ ವೇದಿಕೆಯ ಮೇಲೆಯೇ ಕಪಾಳ ಮೋಕ್ಷವಾಗಿದೆ. ನಂತರ ಎರಡೂ ಕಡೆಯವರು ಸೇರಿ  ಪ್ರೇಮಿಗೆ ಬಿಸಿ ಬಿಸಿ ಕಜ್ಜಾಯ ಬಡಿಸಿದ್ದಾರೆ. ತೀವ್ರವಾಗಿ ಗಾಯಗೊಂಡ  ಪ್ರೇಮಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇದನ್ನೂ ಓದಿ : Viral Video : ಒಂಟಿ ಮೊಸಳೆ ಮೇಲೆರಗಿದ ಸಿಂಹಗಳ ಗುಂಪು : ಕಾಳಗದಲ್ಲಿ ಗೆದ್ದದ್ದು ಮಾತ್ರ ...

ಇಷ್ಟಾದ ಮೇಲೆ ಮದುವೆ ಮುಂದುವರಿಸಲು ವರನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ವರ ಮಾತ್ರ ಇದಕ್ಕೆ ಒಪ್ಪಲಿಲ್ಲ. ಒಟ್ಟಿನಲ್ಲಿ ಮದುವೆ ಮುರಿದು ಬಿದ್ದಿದೆ. ಈ ಘಟನೆ ನೋಡಿದ ಬಳಿಕ ಯಾವ ಹೂವು ಯಾರ ಮುಡಿಗೋ.... ಈ ಹಾಡು ನೆನಪಿಗೆ ಬಾರದೇ  ಇರದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News