ಜನರೇಟರ್ ಬಂದ್ ಆಗಿದ್ದೇ ಕಾರಣವಾಯಿತು ವಧು ವರನ ಕಡೆಯವರು ಹೊಡೆದಾಡಿ ಕೊಳ್ಳಲು..!

ಈ  ಗಲಾಟೆಯಲ್ಲಿ ವರನ ಕಡೆಯ ಹಲವರು ಗಾಯಗೊಂಡಿದ್ದಾರೆ.  ಒಬ್ಬ ಯುವಕನ ತಲೆಗೆ ಗಂಭೀರ ಗಾಯವಾಗಿದೆ. ಇಷ್ಟೆಲ್ಲಾ ಘಟನೆ ನಡೆದ ನಂತರ ಹುಡುಗಿ ಮದುವೆಯಾಗಲು ನಿರಾಕರಿಸಿದ್ದಾಳೆ.   

Written by - Ranjitha R K | Last Updated : Jul 11, 2022, 03:59 PM IST
  • ಜನರೇಟರ್ ಆಫ್ ಆಗಿರುವುದೇ ದೊಡ್ಡ ಮಟ್ಟದ ಗಲಾಟೆಗೆ ಕಾರಣ
  • ಮದುವೆ ಮನೆಯಲ್ಲಿಯೇ ಹೊಡೆದಾಡಿಕೊಂಡರು
  • ಮದುವೆಯೇ ಬೇಡ ಎಂದ ವಧು
ಜನರೇಟರ್ ಬಂದ್ ಆಗಿದ್ದೇ ಕಾರಣವಾಯಿತು ವಧು ವರನ ಕಡೆಯವರು ಹೊಡೆದಾಡಿ ಕೊಳ್ಳಲು..!  title=
Wedding Viral News (file photo)

ಉತ್ತರಪ್ರದೇಶ : ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಡೆದ ವಿವಾಹದ ಸಂದರ್ಭದಲ್ಲಿ ಜನರೇಟರ್ ಆಫ್ ಆಗಿರುವುದೇ ದೊಡ್ಡ ಮಟ್ಟದ ಗಲಾಟೆ ನಡೆಯಲು ಕಾರಣವಾಗಿದೆ.   ಈ  ಸಣ್ಣ ವಿಚಾರಕ್ಕೆ ಹೆಣ್ಣು ಮತ್ತು ಗಂಡಿನ ಕಡೆಯವರು ಹೊಡೆದಾಡುವ ಹಂತಕ್ಕೆ ತಲುಪಿದ್ದಾರೆ. ಮದುವೆ ಮನೆಯಲ್ಲಿ ಕರೆಂಟ್ ಹೋಯಿತು ಎನ್ನುವ ಕಾರಣಕ್ಕೆ ಮೊದಲು ವಾಗ್ವಾದ ಆರಂಭವಾಗಿದೆ. ನಂತರ ನೋಡ ನೋಡುತ್ತಿದ್ದಂತೆಯೇ  ಕೈಗೆ ಸಿಕ್ಕಿದ ವಸ್ತುಗಳನ್ನು ಎತ್ತಿಕೊಂಡು ಹೊಡೆದಾಡಿಕೊಂಡಿದ್ದಾರೆ.  

ಈ  ಗಲಾಟೆಯಲ್ಲಿ ವರನ ಕಡೆಯ ಹಲವರು ಗಾಯಗೊಂಡಿದ್ದಾರೆ.  ಒಬ್ಬ ಯುವಕನ ತಲೆಗೆ ಗಂಭೀರ ಗಾಯವಾಗಿದೆ. ಇಷ್ಟೆಲ್ಲಾ ಘಟನೆ ನಡೆದ ನಂತರ ಹುಡುಗಿ ಮದುವೆಯಾಗಲು ನಿರಾಕರಿಸಿದ್ದಾಳೆ. ನಂತರ ಹಸೆಮಣೆ  ಏರಬೇಕಾಗಿದ್ದ ವಧು ವರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ಇದನ್ನೂ ಓದಿ : Viral Video: ಏಕಾಏಕಿ ನಡುರಸ್ತೆಯಲ್ಲಿಯೇ ಇಳಿಯಲು ಆರಂಭಿಸಿದ ವಿಮಾನ, ಗಾಬರಿಗೊಂಡ ಜನ!

ಶಹಜಹಾನ್‌ಪುರ ಜಿಲ್ಲೆಯ ಥಾನಾ ಕಾಂತ್ ಪ್ರದೇಶದ ಜೋರವಾನ್ ಗ್ರಾಮದ ನಿವಾಸಿ ರವೀಂದ್ರ ಪಾಲ್ ಎನ್ನುವವರ ಪುತ್ರನ ವಿವಾಹವು  ಬಿಲ್ಸಂದಾ ಪ್ರದೇಶದ ಮುದಿಯಾ ಬಿಲ್ಹಾರ ಗ್ರಾಮದ ನಿವಾಸಿ ಮೋಹನ್ ಲಾಲ್ ಎಂಬವರ ಪುತ್ರಿ ಸ್ವಾತಿಯೊಂದಿಗೆ ನಿಶ್ಚಯವಾಗಿತ್ತು. ಮದುವೆ  ದಿನ ರಾತ್ರಿ 8 ಗಂಟೆ ಸುಮಾರಿಗೆ ದಿಬ್ಬಣ ಬಂದಿದೆ. ಹಾರ ಬದಲಾಯಿಸುವ ವೇಳೆ ಕರೆಂಟ್ ಹೋಗಿದೆ. ಅಷ್ಟೇ ಅಲ್ಲ ಜನರೇಟರ್ ಕೂಡಾ ಕೈ ಕೊಟ್ಟಿದೆ. ಈ ವಿಚಾರವಾಗಿ ವರನ ಕಡೆಯವರು ಕ್ಯಾತೆ ತೆಗೆದಿದ್ದಾರೆ. ಅದು ಹಾಗೇ ಮುಂದುವರೆದು ವಾಗ್ವಾದ ಆರಂಭವಾಗಿದೆ. 

ಇದು ಹೀಗೆಯೇ ಮುಂದುವರೆದು, ವರನ ಕಡೆಯವರನ್ನು ವಧುವಿನ ಕಡೆಯವರು ಹೊಡೆದಿದ್ದಾರೆ. ಎರಡೂ ಕಡೆಯವರು ಮದುವೆ ಮನೆಯಲ್ಲಿ ಕುಸ್ತಿಗೆ ಇಳಿದಿದ್ದಾರೆ. ಮದುವೆ ಮನೆ ಕೆಲವೇ ಕ್ಷಣಗಳಲ್ಲಿ ಕುಸ್ತಿ ಅಖಾಡವಾಗಿ ಮಾರ್ಪಟ್ಟಿದೆ. ಕೊನೆಗೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು ಆಯಿತು. ವಧು  ಈ ಮದುವೆಯೇ ಬೇಡ ಎಂದು ನಿರಾಕರಿಸಿ ಬಿಟ್ಟಿದ್ದಾಳೆ. 

ಇದನ್ನೂ ಓದಿ :  Interesting Video: ಸಸ್ಯಗಳು ಮಲಗಿ ಏಳುವುದನ್ನು ಎಂದಾದರು ನೋಡಿದ್ದೀರಾ? ಈ ವೈರಲ್ ವಿಡಿಯೋ ಒಮ್ಮೆ ನೋಡಿ ಗೊತ್ತಾಗುತ್ತದೆ

ಮದುವೆಯ ನಂತರ ಒಂದಾಗ ಬೇಕಿದ್ದ ಎರಡು ಕುಟುಂಬ ಮದುವೆ ದಿನವೇ ಶತ್ರುಗಳಾ ಗಬೇಕಾಯಿತು 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News