Women Fight Viral Video: ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಹಿಳೆಯರು ಜಗಳವಾಡುವುದನ್ನು ಕಂಡಿರುತ್ತೀರಿ, ಜುಟ್ಟು ಹಿಡಿದುಕೊಂಡು ಎಳೆದಾಡುವುದನ್ನೂ ನೋಡಿರುತ್ತೀರಿ, ಹೊಡೆದಾಡುವುದನ್ನೂ ನೋಡಿರುತ್ತೀರಿ. ಆದರಿದು ಸ್ವಲ್ಪ ಡಿಫರೆಂಟ್. ಮಹಿಳೆಯರು ದನದ ಸಗಣಿ ಎರಚಾಡಿಕೊಂಡು ಕಚ್ಚಾಡಿದ್ದಾರೆ. ಇಂಥ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಗ್ರಾಮದ ಮಹಿಳೆಯರು ತಮ್ಮ ತಮ್ಮ ನಡುವೆ ಸಗಣಿಯಲ್ಲಿ ಹೊಡೆದಾಡುವ ಈ ವಿಡಿಯೋವನ್ನು ನೋಡಿದರೆ ನಿಮಗೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಇದು ಆಟವೋ ಅಥವೋ ಹೊಡೆದಾಟವೋ ಎನಿಸುತ್ತದೆ. ಸೋಷಿಯಲ್ ಮೀಡಿಯಾ (Social Media) ಜಮಾನದಲ್ಲಿ ಇದನ್ನು ಜನ ಮಜಾ ತೆಗೆದುಕೊಳ್ಳಲು ಬಳಸಿಕೊಳ್ಳಬಹದು. ಆದರೆ ಗ್ರಾಮದ ಮಹಿಳೆಯರು ಈ ರೀತಿ ಸಗಣಿ ಎರಚಾಡಿಕೊಂಡು ಹೊಡೆದಾಡುವುದನ್ನು ನೋಡಿದರೆ ಬೇಸರ ಕೂಡ ಆಗುತ್ತದೆ.


ಮಹಿಳೆಯರ ಫೈಟ್ ವಿಡಿಯೋ (Women Fight Video) : 
ಆ ಮಹಿಳೆಯರು ಯಾವ ಕಾರಣಕ್ಕೆ ಸಗಣಿಯಲ್ಲಿ ಹೊಡೆದಾಡಿಕೊಂಡರೋ ಏನೋ… ಆದರೆ ಇಂಟರ್‌ನೆಟ್‌ ಕಾಲದಲ್ಲಿ ಇದು ನೋಡುಗರಿಗೆ ತಮಾಷೆಯ ಸರಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗ? ಯಾವ ವಿಷಯ ವೈರಲ್ ಆಗುತ್ತದೆ ಎಂದು ಅಂದಾಜು ಮಾಡಲು ಸಾಧ್ಯವಿಲ್ಲ. ಅದೇ ರೀತಿ ಈಗ ಸಗಣಿ ಹೊಡೆದಾಟದ ಸರದಿ.


ಇದನ್ನೂ ಓದಿ- Tigers Attack On Lion: ಒಂಟಿ ಸಿಂಹದ ಐದು ಹುಲಿಗಳಿಂದ ದಾಳಿ, ಮುಂದೇನಾಯ್ತು... ವಾಚ್ ವೈರಲ್ ವಿಡಿಯೋ 


ಮಹಿಳೆಯರ ಈ ‘ಸಗಣಿ ಸರಸ’ದ ಕೆಲವು ದೃಶ್ಯಗಳು ಸಿಕ್ಕಾಪಟ್ಟ ತಮಾಷೆಯಾಗಿವೆ. ಪರಿಣಾಮವಾಗಿ ಇಂಟರ್ನೆಟ್ ಬಳಕೆದಾರರು ಮತ್ತೆ ಮತ್ತೆ ಅದನ್ನೇ ನೋಡುತ್ತಿದ್ದಾರೆ. ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯರು ಎರಡೆರಡು ಗುಂಪಾಗಿ ಒಬ್ಬರಿಗೊಬ್ಬರು ಸಗಣಿ ಎರಚಾಡುತ್ತಿದ್ದಾರೆ. ಹಾಗಾಗಿ ಇದು ‘ಗುಂಪು ಘರ್ಷಣೆ’ ಕೂಡ ಹೌದು. 


ಮಹಿಳೆಯರ ಹಸುವಿನ ಸಗಣಿ ಹೋರಾಟ:
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವೈರಲ್ ಆಗುತ್ತಿರುವ ‘ಸಗಣಿ ಕಾದಾಟ’(Cow Dung Fight) ದ ವಿಡಿಯೋವನ್ನು ನೋಡಿದರೆ ಗ್ರಾಮದಲ್ಲಿ ಮಹಿಳೆಯರ ನಡುವೆ ಬೇರೆ ಏನೋ ವಿಷಯಕ್ಕೆ ಜಗಳ ನಡೆದಿದೆ ಎಂದು ಗೊತ್ತಾಗುತ್ತದೆ. ಹತ್ತಿರದಿಂದ ನೋಡಿದರೆ, ಬಹುಶಃ ಇಬ್ಬರು ನೆರೆಹೊರೆಯವರ ನಡುವೆ ಜಗಳ ನಡೆದಿರಬಹುದು ಎನಿಸುತ್ತದೆ. 


ಓಲಾ ಆಟೋ ಚಾಲಕನ ಹೈಡ್ರಾಮ: ಕಿರಿಕ್ ಮಾಡಿ ತಾಯಿ ಮಗುವನ್ನು ನಡುರಸ್ತೆಯಲ್ಲಿ ಇಳಿಸಿ ಹೋಗಿದ್ದವನಿಗೆ ಶಾಕ್!


ಇಂತಹ ಜಗಳ ಎಲ್ಲಿಯೂ ನೋಡಿರಲಿಕ್ಕೆ ಸಾಧ್ಯವಿಲ್ಲ: 
ಜಗಳ ನೋಡಿ ಮಜಾ ತೆಗೆದುಕೊಳ್ಳುವವರಿಗೆ ನಮ್ಮಲ್ಲಿ ಬರವೇ? ಮಹಿಳೆಯರು ಸಗಣಿ ಹೊಡೆದಾಟ ಆರಂಭಿಸುತ್ತಿದ್ದಂತೆ ಇಡೀ ಹಳ್ಳಿ ಜನ ಬಂದು ತಮಾಷೆ ನೋಡುತ್ತಾರೆ. ಇನ್ನೂ ತಮಾಷೆಯ ವಿಷಯ ಎಂದರೆ ಈ ಮಹಿಳಾ ಮಣಿಗಳ ಸಗಣಿ ಕಾದಾಟವನ್ನು ಬಿಡಿಸಿ ಶಾಂತಿ ಕಾಪಾಡಲು ಯಾವ ಪುಣ್ಯಾತ್ಮರೂ ಮುಂದೆ ಬರಲಿಲ್ಲ. ಈ ವಿಡಿಯೋವನ್ನು @PalsSkit ಹೆಸರಿನ X ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ಸೆಕೆಂಡುಗಳ ಈ ವೀಡಿಯೊವನ್ನು ಈಗಾಗಲೇ ಸಾವಿರಾರು ಜನ ನೋಡಿದ್ದರೆ ಜೊತೆಗೆ ಮಜಾ ತೆಗೆದುಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.