Viral Video: ಪ್ರೀತಿ ಅನ್ನುವುದು ಒಂದು ಅದ್ಭುತ ಭಾವ. ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ವರುಷಗಳು ಉರುಳಿದಂತೆ ಪತಿ-ಪತ್ನಿಯರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ಒಬ್ಬರಿಗೆ ಇನ್ನೊಬ್ಬರ ಅಭ್ಯಾಸವಾಗಿ ಬಿಡುತ್ತದೆ. ಕಣ್ಣ ಮುಂದೆ ಸಂಗಾತಿ ಇಲ್ಲ ಎಂದರೆ ಮನಸ್ಸು ವಿಲವಿಲ ಒದ್ದಾಡಿ ಬಿಡುತ್ತದೆ. ಇದ್ದಕ್ಕೆ ಕಾರಣವೂ ಇಲ್ಲ ಎಂದಲ್ಲ. ದಿನ ಕಳೆದಂತೆ ಒಬ್ಬರನ್ನೊಬ್ಬರು ಹೆಚ್ಚು ಅರ್ಥ ಮಾಡಿಕೊಂಡಿರುತ್ತಾರೆ. ತನ್ನ ಪ್ರತಿ ಬೇಕು ಬೇಡಗಳಿಗೆ ಸಂಗಾತಿಯನ್ನೇ ಅವಲಂಬಿಸಿರುತ್ತಾರೆ. ಒಂದು ಹಂತದಲ್ಲಿ ಮೌನದಿಂದಲೇ ಎಲ್ಲವೂ ಅರ್ಥವಾಗಿ ಬಿಡುತ್ತದೆ. 


COMMERCIAL BREAK
SCROLL TO CONTINUE READING

ಪ್ರೊಪೋಸ್ ಮಾಡಿದ ರೀತಿ : 
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ವಯಸ್ಸಾದ ಒಬ್ಬ ವ್ಯಕ್ತಿ ಮಂಡಿಯೂರಿ ಕುಳಿತು ತಮ್ಮ ಪತ್ನಿಯ ಎದುರು ಪ್ರೇಮ ನಿವೇದನೆ ಮಾಡಿಕೊಳ್ಳುವುದನ್ನು ಕಾಣಬಹುದು. ಆ ವ್ಯಕ್ತಿಯ ವಯಸ್ಸಿನ ಕಾರಣದಿಂದ ಅವರಿಗೆ ಮಂಡಿಯೂರುವುದು ಕೂಡಾ ಕಷ್ಟವಾಗುತ್ತದೆ. ಆದರೆ, 44 ವರ್ಷಗಳ  ಕಾಲ  ತನ್ನ ಹೆಗಲಿಗೆ ಹೆಗಲು ಕೊಟ್ಟು ನಡೆದ ಪತ್ನಿಯ ಸಂತೋಷಕ್ಕಾಗಿ ಮಂಡಿಯೂರಿಯೇ ಬಿಡುತ್ತಾರೆ ತಾತ. 


ಇದನ್ನೂ ಓದಿ : Viral Video: ಮೊಸಳೆಯನ್ನು ಕೊಂದು ಹಾಕಿದ ದೈತ್ಯ ಹಾವು.. ಭಯಾನಕ ಕಾದಾಟ ಕ್ಯಾಮೆರಾ ಕಣ್ಣಲ್ಲಿ ಸೆರೆ


 


 

 

 

 

 



ವೈರಲ್ ಆಯಿತು ವಿಡಿಯೋ  : 
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.  ಈ ವೀಡಿಯೋ ನೋಡಿ ಅನೇಕರು ಖುಷಿಪಟ್ಟಿದ್ದಾರೆ. ಈ ವೀಡಿಯೊವನ್ನು ಹಲವು ಬಾರಿ ನೋಡಲಾಗಿದೆ.  


ಇದನ್ನೂ ಓದಿ : Watch: ಟೀ ಶರ್ಟ್ ಬೆಲೆ 1000 ರೂ. ಅಲ್ಲ, 150 ರೂ.ಎಂದವನಿಗೆ ಕಪಾಳಕ್ಕೆ ಬಾರಿಸಿದ ಮಹಿಳೆ...!


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...