Viral Video: ಆಕಸ್ಮಿಕವಾಗಿ ಟಾಯ್ಲೆಟ್ ನಿಂದ ಹೊರಬಂದು ಹೆಡೆ ಎತ್ತಿದ ನಾಗಪ್ಪ, ವಿಡಿಯೋ ನೋಡಿ

Dangerous KIng Cobra Video - ಅಪಾಯಕಾರಿ ಕಾಳಿಂಗ ಸರ್ಪವನ್ನು ನೀವು ಕಾಡು ಅಥವಾ ಹೊಲಗದ್ದೆಗಳಲ್ಲಿ ನೋಡಿರಬಹುದು. ಆದರೆ ಟಾಯ್ಲೆಟ್ ಸೀಟಿನಿಂದ ಕಿಂಗ್ ಕೋಬ್ರಾ ಹೊರಬರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದರೆ, ಈ ವಿಡಿಯೋ ನಿಮ್ಮನ್ನು ನಿಬ್ಬೇರಗಾಗಿಸಲಿದೆ.  

Written by - Nitin Tabib | Last Updated : Jul 14, 2022, 05:17 PM IST
  • ಅಪಾಯಕಾರಿ ಕಾಳಿಂಗ ಸರ್ಪವನ್ನು ನೀವು ಕಾಡು ಅಥವಾ ಹೊಲಗದ್ದೆಗಳಲ್ಲಿ ನೋಡಿರಬಹುದು.
  • ಆದರೆ ಟಾಯ್ಲೆಟ್ ಸೀಟಿನಿಂದ ಕಿಂಗ್ ಕೋಬ್ರಾ ಹೊರಬರುವುದನ್ನು ನೀವು ಎಂದಾದರೂ ನೋಡಿದ್ದೀರಾ?
  • ಇಲ್ಲ ಎಂದಾದರೆ, ಈ ವಿಡಿಯೋ ನಿಮ್ಮನ್ನು ನಿಬ್ಬೇರಗಾಗಿಸಲಿದೆ.
Viral Video: ಆಕಸ್ಮಿಕವಾಗಿ ಟಾಯ್ಲೆಟ್ ನಿಂದ ಹೊರಬಂದು ಹೆಡೆ ಎತ್ತಿದ ನಾಗಪ್ಪ, ವಿಡಿಯೋ ನೋಡಿ title=
king cobra viral video

King Cobra Video - ಹಾವುಗಳು ಹೆಚ್ಚಾಗಿ ಕಾಡಿನಲ್ಲಿ ಅಥವಾ ಸ್ನೇಕ್ ಹೋಮ್ ಗಳಲ್ಲಿ ನೀವು ನೋಡಿರಬಹುದು. ಗ್ರಾಮೀಣ ಭಾಗದಲ್ಲಿ ಹಾವುಗಳು ಹೆಚ್ಚಾಗಿ ಮನೆಯಿಂದ ಹೊರಬರುತ್ತಿವೆ. ಆದರೆ ಟಾಯ್ಲೆಟ್ ಸೀಟ್‌ನ ಬೌಲ್‌ನಿಂದ ಹಾವು ಕೂಡ ಹೊರಬರಬಹುದು ಎಂಬುದನ್ನು ನೀವು ಎಂದಾದರೂ ಊಹಿಸಿದ್ದೀರಾ? ಹೌದು, ಟಾಯ್ಲೆಟ್ ಸೀಟ್‌ನ ಬೌಲ್‌ನಲ್ಲಿಯೂ ಕೂಡ ಅಪಾಯಕಾರಿ ನಾಗರಹಾವು ಅವಿತುಕೊಂಡಿರಬಹುದು ಎಂಬುದನ್ನು ಕೇವಲ ಊಹಿಸಿದರೆ ಸಾಕು ಮೈಬೆವರುತ್ತದೆ. ನಿಜಕ್ಕೂ ಇಂತಹ ಘಟನೆ ಸಂಭವಿಸಿದರೆ, ಎದೆ ಝಲ್ಲೇನ್ನುತ್ತದೆ

ಟಾಯ್ಲೆಟ್ ಸೀಟಿನಲ್ಲಿ ಅವಿತುಕುಳಿತ ನಾಗರ ಹಾವು
ನಿಜಕ್ಕೂ ಇಂತಹ ವೊಂದು ಘಟನೆ ಸಂಭವಿಸಿದ್ದು, ಘಟನೆಯ ವಿಡಿಯೋವನ್ನು  ಗುಜರಾತ್‌ನ ಗ್ರಾಮಾಂತರ ಪ್ರದೇಶದ ಸರ್ಪಮಿತ್ರ ಆಕಾಶ್ ಜಾಧವ್ ತಮ್ಮ ಯುಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮನೆಯೊಂದರಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಅದರ ಬಳಕೆಗಾಗಿ ವ್ಯಕ್ತಿ ಒಳಗೆ ಪ್ರವೇಶಿಸಿದ ತಕ್ಷಣ, ವ್ಯಕ್ತಿ ಬೆಚ್ಚಿಬಿದ್ದಿದ್ದಾನೆ. ಏಕೆಂದರೆ, ಅತ್ಯಂತ ಅಪಾಯಕಾರಿ ಎನ್ನಲಾಗುವ ಕಿಂಗ್ ಕೋಬ್ರಾ ಟಾಯ್ಲೆಟ್ ಸೀಟ್‌ನ ಬೌಲ್‌ನಲ್ಲಿ ಕುಳಿತು ಆನಂದಿಸುತ್ತಿತ್ತು.

ಇದನ್ನೂ ಓದಿ-Viral Video: JCB ತಂದು ಕ್ಷಣಾರ್ಧದಲ್ಲಿಯೇ ATM ಯಂತ್ರವನ್ನೇ ಬುಡಸಮೇತ ಕಿತ್ತುಕೊಂಡು ಹೋದ ಕಳ್ಳ!

ಮನೆಯ ಮಾಲೀಕರು ಸ್ವಲ್ಪ ಧೈರ್ಯ ತೋರಿ, ಮೊದಲು ಶೌಚಾಲಯದ ಪೈಪ್ ಅನ್ನು ಮುಚ್ಚಿದ್ದಾರೆ ಮತ್ತು ತಕ್ಷಣ ಸ್ನೇಕ್ ರೆಸ್ಕ್ಯೂ ತಂಡಕ್ಕೆ ಮಾಹಿತಿ ನೀಡಿದ್ದಾರೆ.. ಸಾಕಷ್ಟು ಪ್ರಯತ್ನದ ಬಳಿಕ ಹೇಗೋ ಹಾವನ್ನು ರಕ್ಷಿಸಿರುವುದನ್ನು  ನೀವು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ- Viral Video : ವ್ಯಕ್ತಿಯೊಬ್ಬ ಕಿವಿಯಲ್ಲಿ ಅದೇನು ಹೇಳಿದನೋ ಪ್ರಜ್ಞೆ ತಪ್ಪಿ ಬಿದ್ದೇ ಬಿಟ್ಟ ವರ

ಈ ವಿಡಿಯೋ ಸುಮಾರು ಒಂದು ವರ್ಷಗಳಷ್ಟು ಹಳೆಯದಾಗಿದೆ. ಇದುವರೆಗೆ ಅದು 1.7 ಕೋಟಿಗೂ ಅಧಿಕ ಬಾರಿಗೆ ವೀಕ್ಷಣೆಗೆ ಒಳಗಾಗಿದೆ. ನೆಟ್ಟಿಗರು ಕೂಡ ಈ ವಿಡಿಯೋಗೆ ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News