Wedding Viral Video : ಮದುವೆ ಕೇವಲ ಗಂಡು ಹೆಣ್ಣನ್ನು ಬೆಸೆಯುವ ಸಬಂಧವಲ್ಲ. ಎರಡು ಕುಟುಂಬ, ಭಿನ್ನ ವಿಚಾರಧಾರೆ, ಸಂಸ್ಕೃತಿಯನ್ನು ಬೆಸೆಯುವ ಬಂಧ. ಗಂಡೇ ಆಗಲಿ ಹೆಣ್ಣೇ ಆಗಲಿ ಮದುವೆ ಗೊತ್ತಾದ ದಿನದಿಂದ ಮನಸ್ಸಿನಲ್ಲಿ ಸಾವಿರ ಬಣ್ಣದ ಕಾಮನಬಿಲ್ಲು ಮೂಡುತ್ತದೆ. ಮುಂದಿನ ಬದುಕಿನ ಬಗ್ಗೆ ಮೂಡುವ ಕನಸು ಅಷ್ಟಿಷ್ಟಲ್ಲ. ಮದುವೆಯ ನಂತರ ಹೇಗಿರಬೇಕು? ಏನು ಮಾಡಬೇಕು ಎನ್ನುವ ತಯಾರಿ ಕೂಡಾ ಒಂದು ಹಂತದಲ್ಲಿ ನಡೆದು ಬಿಡುತ್ತದೆ. ಹೆಣ್ಣು ಮಕ್ಕಳಿಗಂತೂ ಮನೆಯಲ್ಲಿ ಹಿರಿಯರಿಂದ ನೀತಿ ಪಾಠವೇ ಆರಂಭವಾಗುತ್ತದೆ.
ನಾವಿರುವ ಸ್ಥಳಕ್ಕೆ ಅನುಸಾರವಾಗಿ ಮದುವೆ ಶಾಸ್ತ್ರಗಳು ಎಷ್ಟು ದಿನ ನಡೆಯುತ್ತವೆ ಎನ್ನುವುದು ನಿರ್ಧಾರವಾಗುತ್ತದೆ. ಕೆಲವೆಡೆ ಏಳು ದಿನಗಳವರೆಗೆ ಮದುವೆ ಶಾಸ್ತ್ರಗಳು ನಡೆಯುತ್ತವೆ. ಇನ್ನು ಕೆಲವೆಡೆ ಒಂದೇ ದಿನದಲ್ಲಿ ಮದುವೆ ಮುಗಿಯುವುದೂ ಇದೆ.
ಮದುವೆ ದಿನ ಹೆಣ್ಣು ಗಂಡು ವಿಶೇಷವಾಗಿ ಅಲಂಕಾರಗೊಂಡಿರುತ್ತಾಳೆ. ಅದರಲ್ಲೂ ಹೆಣ್ಣಿನ ಸೌಂದರ್ಯ ಈ ತುಸು ಹೆಚ್ಚೇ ಇರುತ್ತದೆ. ಈ ವಿಡಿಯೋದಲ್ಲಿ ಕಾಣಿಸುವ ವಧುವನ್ನು ಕೂಡಾ ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಸೌಂದರ್ಯ.
ಇದನ್ನೂ ಓದಿ : ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ವಾನರ ನಡುವೆ ಗ್ಯಾಂಗ್ ವಾರ್...!
ಮದುವೆ ಮಂಟಪದಲ್ಲಿ ಹೆಣ್ಣು ಗಂಡು ಕುಳಿತಿದ್ದಾರೆ. ವಿವಾಹ ಶಾಸ್ತ್ರಗಳು ನೆರೆವೇರುತ್ತಿದೆ. ವರ ವಧುವಿನ ಹಣೆಗೆ ಕುಂಕುಮ ಇಡುತ್ತಿದ್ದಂತೆ ಎಲ್ಲರೆದುರೇ ಮುತ್ತಿಕ್ಕಿ ಬಿಡುತ್ತಾನೆ. ವರ ಈ ರೀತಿ ಮಾಡಬಹುದು ಎನ್ನುವುದನ್ನು ವಧು ಊಹಿಸಿಯೂ ಇರಲಿಲ್ಲ ಎನ್ನುವುದು ಆಕೆಯ ಪ್ರತಿಕ್ರಿಯೆಯಿಂದಲೇ ತಿಳಿಯುತ್ತದೆ. ತನ್ನ ಮನದರಸಿಯ ಸೌಂದರ್ಯ ಕಂಡು ವರ ಮಹಾಶಯ ಈ ರೀತಿ ಮಾಡಿದನೋ? ಜೀವನ ಪೂರ್ತಿ ಸಿಹಿಯನ್ನೇ ನಿನ್ನ ಪಾಲಿಗೆ ನೀಡುತ್ತೇನೆ ಎಂಬ ಸಂದೇಶ ನೀಡುವ ಪರಿಯೋ ಗೊತ್ತಿಲ್ಲ. ಆದರೆ ಆ ಕ್ಷಣ ಮಾತ್ರ ನಿಜಕ್ಕೂ ಸುಂದರವಾಗಿತ್ತು.
ಇದನ್ನೂ ಓದಿ : Viral Video: ಆಕಸ್ಮಿಕವಾಗಿ ಟಾಯ್ಲೆಟ್ ನಿಂದ ಹೊರಬಂದು ಹೆಡೆ ಎತ್ತಿದ ನಾಗಪ್ಪ, ವಿಡಿಯೋ ನೋಡಿ
ಮದುವೆಗೆ ಸಂಬಂಧಿಸಿದ ಈ ವಿಡಿಯೋವನ್ನು ವೆಡ್ಡಿಂಗ್ ವರ್ಲ್ಡ್ ಪೇಜ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೊವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಇಷ್ಟ ಪಡುತ್ತಿದ್ದಾರೆ.
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...