Train Travelling Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ರೈಲೊಂದು ಹಳಿಯ ಮೇಲೆ ಓಡುತ್ತಿರುವುದನ್ನು ನೀವು ಕಾಣಬಹುದು. ಆದರೆ, ನಿಮಗೆ ಆ ರೈಲಿನ ಸ್ಟ್ರಕ್ಚರೇ ಸರಿಯಾಗಿ ಕಾಣುವುದಿಲ್ಲ. ರೈಲಿನಲ್ಲಿ ಪ್ರಯಾಣಿಸುತ್ತಿರುವ ಯಾತ್ರಿಗಳ ಸಂಖ್ಯೆಯೇ ಇದಕ್ಕೆ ಕಾರಣ. ಈ ರೈಲಿನಲ್ಲಿ ಲೆಕ್ಕಕ್ಕೆ ಬಾರದಷ್ಟು ಪ್ರಯಾಣಿಕರಿದ್ದಾರೆ. ಈ ವಿಡಿಯೋವನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ದಂಗಾಗಿದ್ದಾರೆ. ಈ ವಿಡಿಯೋ ಬಾಂಗ್ಲಾದೇಶದಿಂದ ಹೊರಹೊಮ್ಮಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ವಿಚಿತ್ರ ಪ್ರಯಾಣ 
ಈ ವಿಡಿಯೋವನ್ನು ನೋಡಿ ನಿಮಗೂ ಒಂದು ಕ್ಷಣ ಇದು ಹಿಂದಿ ಪ್ರಯಾಣವೋ ಅಥವಾ ಇಂಗ್ಲಿಷ್ ಪ್ರಯಾಣವೋ ಎಂದೆನಿಸಬಹುದು. ಏಕೆಂದರೆ, ರೈಲಿನಲ್ಲಿ ಸಂಚರಿಸುತ್ತಿರುವ ಯಾತ್ರಿಗಳ ಸಂಖ್ಯೆ ಕಂಡು ನೀವು ಶಾಕ್ ಆಗುವಿರಿ. ಏಕೆಂದರೆ ರೈಲಿನ ಮೇಲ್ಛಾವಣಿಯಿಂದ ಹಿಡಿದು ಕಿಟಕಿಯವರೆಗೆ ಜನರೇ ಜನರಿದ್ದಾರೆ. ಪ್ರತಿಯೊಂದು ಮೂಲೆಯಲ್ಲಿ ಜನರೇ ಕಾಣುತ್ತಿದ್ದಾರೆ. ಸಾಮಾಜಿಕ ಮಾಧ್ಯಮದ ಮೇಲೆ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಒಮ್ಮೆ ನೀವೂ ನೋಡಿ.


Viral Video: ವಧು ಮಂಟಪಕ್ಕೆ ಬರ್ತಿದ್ದಂತೆ ಕಣ್ಣೀರು ಹಾಕಿದ ವರ: ವಿಡಿಯೋ ನೋಡಿದ್ರೆ ಫಿದಾ ಆಗ್ತೀರ


ವಿಡಿಯೋ ನೋಡಿ ಜನ ದಂಗಾಗಿದ್ದಾರೆ.
ಈ ರೈಲಿನ ಕೊನೆಯ ಬೋಗಿಯಲ್ಲಿ ಕುಳಿತ ಅಂಕಲ್ ವೋಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಈ ಮೊದಲು ಕೂಡ ಬಾಂಗ್ಲಾದೇಶದಲ್ಲಿ ಈ ರೀತಿಯ ರೈಲಿನ ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋ ಅನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಆಗಿರುವ ಟ್ವಿಟ್ಟರ್ ಮೇಲೆ ಹಂಚಿಕೊಳ್ಳಲಾಗಿದೆ. ಬಹುತೇಕ ಜನರು ಈ ವಿಡಿಯೋಗೆ ತಮ್ಮ ಕಾಮೆಂಟ್ ಕೂಡ ನೀಡುತ್ತಿದ್ದಾರೆ. 


ಇದನ್ನೂ ಓದಿ-Selfie With Tiger: ಸೆಲ್ಫಿಗಾಗಿ ಕಾಡಿನಲ್ಲಿ ಹುಲಿ ಬೆನ್ನಟ್ಟಿದ ಯುವಕರು, ಮುಂದಾಗಿದ್ದೇನು?


ಸ್ವಾರಸ್ಯಕರ ರಿಯಾಕ್ಷನ್ ನೀಡಿದ ಜನರು
ಕೇವಲ 59 ಸೆಕೆಂಡ್ ಗಳ ಅವಧಿಯ ಈ ವಿಡಿಯೋ ಪದೇ ಪದೇ ವೀಕ್ಷಣೆಗೆ ಒಳಗಾಗುತ್ತಿದೆ. ಅಷ್ಟೇ ಅಲ್ಲ ಸಾವಿರಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋಗೆ ಲೈಕ್ ಹೇಳುತ್ತಿದ್ದಾರೆ. ಹಲವು ಜನರು ಇದನ್ನು ಬಡತನ ಹಾಗೂ ಜನಸಂಖ್ಯಾ ಸ್ಫೋಟ ಎಂದು ಹೇಳುತ್ತಿದ್ದಾರೆ. ಕೆಲವರು ಟ್ರೈನ್ ನ ಗಟ್ಟಿತನವನ್ನು ಹೊಗಳಿದರೆ, ಉಳಿದವರು ರೈಲು ಚಾಲಕ ರೈಲಿನಲ್ಲಿದ್ದಾನೆಯೇ ಅಥವಾ ಆತನೂ ಕೂಡ ರೈಲಿನ ಮೇಲ್ಚಾವಣಿಯಲ್ಲಿ ಕುಳಿತಿದ್ದಾನೆ? ಎಂದು ತಮಾಷೆಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.