T20 World Cup 2024: ವಿಕೆಟ್‌ ಕೀಪಿಂಗ್‌ನಲ್ಲಿ ಕಿಂಗ್‌ ಎನಿಸಿಕೊಂಡ ರಿಷಬ್‌ ಪಂತ್‌..!

T20 World Cup 2024: ಶುಕ್ರವಾರ, ಜೂನ್‌ 21 ರಂದು ಭಾರತ ಹಾಗೂ ಅಫ್ಘಾನಿಸ್ತಾನ ತಂಡದ ಮುಖಾಮುಖಿ ನಡೆಯಿತು. ಈ ಪಂದ್ಯದ ವೇಳೆ ರಿಷಬ್ ಪಂತ್‌ ತಮ್ಮ ಕೀಪಿಂಗ್‌ ಮೂಲಕ ಬೇಷ್‌ ಎನಿಸಿಕೊಂಡರು. ಅದ್ಭುತ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆಯನ್ನು ಬರೆಯುವಲ್ಲಿ ಯಶಸ್ವಿಯಾದರು.  

Written by - Zee Kannada News Desk | Last Updated : Jun 22, 2024, 07:56 AM IST
  • ಶುಕ್ರವಾರ, ಜೂನ್‌ 21 ರಂದು ಭಾರತ ಹಾಗೂ ಅಫ್ಘಾನಿಸ್ತಾನ ತಂಡದ ಮುಖಾಮುಖಿ ನಡೆಯಿತು.
  • ರಿಷಬ್‌ ಪಂತ್‌ ಮೂರು ಕ್ಯಾಚ್‌ ಹಿಡಿಯುವ ಮೂಲಕ ಬ್ಯಾಟರ್‌ಗಳನ್ನು ಫೀಲ್ಡ್‌ನಿಂದ ಹೊರದಬ್ಬಿದರು.
  • ಈ ದಾಖಲೆ ಮಾಡುವ ಮೂಲಕ ರಿಷಬ್‌ ಪಂತ್‌ ಸ್ಟಾರ್‌ ವಿಕೆಟ್‌ ಕೀಪರ್‌ಗಳನ್ನು ಹಿಂದಿಕ್ಕಿದ್ದಾರೆ.
T20 World Cup 2024: ವಿಕೆಟ್‌ ಕೀಪಿಂಗ್‌ನಲ್ಲಿ ಕಿಂಗ್‌ ಎನಿಸಿಕೊಂಡ ರಿಷಬ್‌ ಪಂತ್‌..! title=

T20 World Cup 2024: ಶುಕ್ರವಾರ, ಜೂನ್‌ 21 ರಂದು ಭಾರತ(India) ಹಾಗೂ ಅಫ್ಘಾನಿಸ್ತಾನ(Afghanisthan) ತಂಡದ ಮುಖಾಮುಖಿ ನಡೆಯಿತು. ಈ ಪಂದ್ಯದ ವೇಳೆ ರಿಷಬ್ ಪಂತ್‌(Rishab Pant) ತಮ್ಮ ಕೀಪಿಂಗ್‌ ಮೂಲಕ ಬೇಷ್‌ ಎನಿಸಿಕೊಂಡರು. ಅದ್ಭುತ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆಯನ್ನು ಬರೆಯುವಲ್ಲಿ ಯಶಸ್ವಿಯಾದರು.

ಟಿ 20 ವಿಶ್ವಕಪ್‌ನ 2024(T20 World Cup 2024) ಅವೃತ್ತಿಯಲ್ಲಿ ಅತೀ ಹೆಚ್ಚು ಕ್ಯಾಚ್‌ ಹಿಡಿದು ಬ್ಯಾಟರ್‌ಗಳನ್ನು, ಔಟ್‌ ಮಾಡಿದ ದಾಖಲೆಯನ್ನು ಪಂತ್‌ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 

ಶುಕ್ರವಾರ,  ಜೂನ್‌ 21ರಂದು ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ರಿಷಬ್‌ ಪಂತ್‌ ಮೂರು ಕ್ಯಾಚ್‌ ಹಿಡಿಯುವ ಮೂಲಕ ಬ್ಯಾಟರ್‌ಗಳನ್ನು ಫೀಲ್ಡ್‌ನಿಂದ ಹೊರದಬ್ಬಿದರು. ಅಫ್ಘಾನಿಸ್ತಾನ ತಂಡದ ಗುಲ್ಬದಿನ್ ನೈಬ್(Gulbadin naib), ರಹಮಾನುಲ್ಲಾ ಗುರ್ಬಾಜ್( Rahmanullah Gurbaz) ಮತ್ತು ನವೀನ್ ಉಲ್ ಹಕ್(Naveen-ul-Haq) ಬ್ಯಾಟ್‌ ಬೀಸುತ್ತಿದ್ದಂತೆ ಕಾದು ಕೂತಿದ್ದ ರಿಷಬ್‌ ತಮ್ಮ ಸಮಯ ಪ್ರಜ್ಞೆಯಿಂದ ಕ್ಯಾಚ್‌ ಹಿಡಿದಿದ್ದರು. ಈ ಮೂಲಕ 2024ರ ಟಿ20 ವಿಶ್ವಕಪ್‌ನಲ್ಲಿ ಮುಮಾರು ಹತ್ತು ಆಟಗಾರರನ್ನು ವಿಕೆಟ್‌ ಹಿಂದೆ ಔಟ್‌ ಮಾಡಿದ ಮೊದಲ ವಿಕೆಟ್‌ ಕೀಪರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಇದನ್ನೂ ಓದಿ:  T20 World Cup 2024: ಭಾರತಕ್ಕೆ ಸೆಡ್ಡು ಹೊಡೆಯುತ್ತಾ ಅಫ್ಘಾನಿಸ್ತಾನ..?

ಈ ದಾಖಲೆ ಮಾಡುವ ಮೂಲಕ ರಿಷಬ್‌ ಪಂತ್‌ ಸ್ಟಾರ್‌ ವಿಕೆಟ್‌ ಕೀಪರ್‌ಗಳನ್ನು ಹಿಂದಿಕ್ಕಿದ್ದಾರೆ.  ಶ್ರೀಲಂಕಾದ ಕುಮಾರ ಸಂಗಕ್ಕಾರ(Kumar Sangakkara), ಸೌತ್‌ ಆಫ್ರಿಕಾದ ಎ ಬಿ ಡಿವಿಲಿಯರ್ಸ್‌(AB de Villiers), ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್(Adam Gilchrist) 9 ವಿಕೆಟ್‌ ಪಡೆದು ಸಾಧನೆ ಮಾಡಿದ್ದರು. ಇದೀಗ 10 ವಿಕೆಟ್‌ ಪಡೆಯುವ ಮೂಲಕ 26 ವರ್ಷದ ಭಾರತ ತಂಡದ ಆಟಗಾರ ರಿಷಬ್‌ ಪಂತ್‌ ಈ ಎಲ್ಲಾ ಸ್ಟಾರ್‌ ವಿಕೆಟ್‌ ಕೀಪರ್‌ಗಳನ್ನು ಹಿಂಡಿಕ್ಕಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News