ಮುಂಬೈ : ಮುಂಬೈನ ಲೋಕಲ್ ರೈಲಿನಲ್ಲಿ ಸೀಟಿನ ವಿಚಾರವಾಗಿ ಕೆಲ ಮಹಿಳೆಯರ ನಡುವೆ ನಡೆದ ಭಾರಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂಬೈ ಲೋಕಲ್ ಥಾಣೆ-ಪನ್ವೇಲ್ ನ ಮಹಿಳಾ ಬೋಗಿಯಲ್ಲಿ ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯರು ರೈಲಿನೊಳಗೆ ಪರಸ್ಪರ ಕೂದಲು ಎಳೆದಾಡಿಕೊಂಡು ಹೊಡೆದಾಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದಾಗಿದೆ. ಮಹಿಳಾ ಪೇದೆಯೊಬ್ಬರು ಪ್ರಯಾಣಿಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಮಹಿಳೆಯರ ಜಗಳ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಎಷ್ಟರಮಟ್ಟಿಗೆ ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ ಎಂದರೆ ಈ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ : Kejriwal Vs Delhi LG: ನನ್ನ ಹೆಂಡತಿ ಕೂಡ ಗವರ್ನರ್ ಅಷ್ಟು ಸಿಟ್ಟು ಮಾಡಿಕೊಂಡಿಲ್ಲವೆಂದ ಕೇಜ್ರಿವಾಲ್
ಈ ಬಗ್ಗೆ ವಾಶಿ ರೈಲ್ವೆ ನಿಲ್ದಾಣದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್ ಕಟಾರೆ ಮಾತನಾಡಿ, ಥಾಣೆಯಿಂದ ಪನ್ವೇಲ್ ಸ್ಥಳೀಯ ರೈಲಿನಿಂದ ವಾಶಿ ರೈಲು ನಿಲ್ದಾಣದಲ್ಲಿ 3 ಮಹಿಳೆಯರ ನಡುವೆ ಮಾರಾಮಾರಿ ನಡೆದಿದೆ. ಸೀಟಿನ ವಿವಾದದಕ್ಕೆ ಕೆಲವು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮಹಿಳಾ ಉದ್ಯೋಗಿಯೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
Fight between two female passengers over a seat in #Local #TRAIN .
The woman police constable who went to the rescue got hurt.
Both women filed a case against each other at Vashi Railway Police Station.@Central_Railway #Mumbai pic.twitter.com/nFOKv7bOWv
— Siraj Noorani (@sirajnoorani) October 6, 2022
ಘಟನೆಯ ಬಗ್ಗೆ ವಿವರ ನೀಡಿದ ಪೊಲೀಸ್ ಅಧಿಕಾರಿ, ಥಾಣೆಯಿಂದ ಲೋಕಲ್ ರೈಲಿನಲ್ಲಿ ಒಬ್ಬ ವೃದ್ಧ ಮಹಿಳೆ ಮತ್ತು ಆಕೆಯ ಮೊಮ್ಮಗಳು ಹತ್ತಿದ್ದಾರೆ. ಕೋಪರ್ಖೈಠಾಣೆಯಲ್ಲಿ ಮಹಿಳೆಯೊಬ್ಬರು ಇಳಿದಿದ್ದರಿಂದ ಸೀಟು ಖಾಲಿಯಾಗಿದೆ. ಆಸನ ಖಾಲಿಯಾಗಿದ್ದಾಕೆ ವೃದ್ಧೆ ಮೊಮ್ಮಗಳನ್ನು ಕುಳಿತುಕೊಳ್ಳುವಂತೆ ಹೇಳಿದ್ದು, ಮತ್ತೊಬ್ಬ ಮಹಿಳೆ ಕೂಡ ಸೀಟು ಹಿಡಿಯಲು ಯತ್ನಿಸಿದ್ದು, ಈ ವೇಳೆ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿದೆ. ಹಲ್ಲೆ ನಡೆಸಿದ ಮಹಿಳೆಯರು ಪರಸ್ಪರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Vashi, Navi Mumbai | Few women started hitting each other following dispute over seat, a female staff was injured: S Katare, Senior Police Inspector, Vashi Railway Station, on scuffle b/w 3 women in a local train running from Thane to Panvel, today
(Pic 1:Screengrab;viral video) pic.twitter.com/A6bPR3phhA
— ANI (@ANI) October 6, 2022
ಲೋಕಲ್ ಟ್ರೈನ್‌ಗಳಲ್ಲಿ ಭಾರೀ ಜನಸಂದಣಿ
ಮುಂಬೈನ ಜೀವನಾಡಿ ಎಂದು ಕರೆಯಲ್ಪಡುವ ಸ್ಥಳೀಯ ರೈಲುಗಳು ತಮ್ಮ ದಟ್ಟಣೆಗೆ ಹೆಸರುವಾಸಿಯಾಗಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಅದರ ವ್ಯಾಪಕ ವ್ಯಾಪ್ತಿಯ ಕಾರಣ ಮತ್ತು ಸ್ಥಳೀಯ ನಗರ ಜನಸಂಖ್ಯೆಯ ಹೆಚ್ಚಿನ ಜನ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ, ಮುಂಬೈ ಲೋಕಲ್ ರೈಲುಗಳು ವಿಶ್ವದ ಕೆಲವು ತೀವ್ರ ದಟ್ಟಣೆಯಿಂದ ಬಳಲುತ್ತಿವೆ.
ಇದನ್ನೂ ಓದಿ : 120 ಕೋಟಿ ಮೌಲ್ಯದ ಡ್ರಗ್ ಸಾಗಾಟ; ಏರ್ ಇಂಡಿಯಾದ ಮಾಜಿ ಪೈಲಟ್ ಸೇರಿ 6 ಮಂದಿ ಬಂಧನ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.