Thalapathy Vijay: ಕಾಲಿವುಡ್‌ನ ಸ್ಟಾರ್ ಹೀರೋ ದಳಪತಿ ವಿಜಯ್ ಇಂದು ತಮ್ಮ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಳಪತಿಗೆ ಇರೋ ಫ್ಯಾನ್ ಬೇಸ್‌ಗೆ ಅವರ ಜನ್ಮದಿನವನ್ನು ತಮಿಳುನಾಡಿನಾದ್ಯಂತ ಹಬ್ಬದ ರೀತಿ ಆಚರಿಸಲಾಗುತ್ತದೆ. ಆದರೆ ಈ ವರ್ಷ ವಿಜಯ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಇದಕ್ಕೆ ಕಾರಣ ಶುಕ್ರವಾರ ರಾತ್ರಿ ಕಲ್ಲುಕುರಿಚಿಯಲ್ಲಿ ನಡೆದ ಘನಘೋರ ಘಟನೆ.
ಕಲ್ಲಕುರಿಚಿಯಲ್ಲಿ ತಯಾರಿಸಿದ ಮೆಥನಾಲ್ ಮಿಶ್ರಿತ ಮದ್ಯವನ್ನು ಸೇವಿಸಿದ ನಂತರ ವಾಂತಿ, ಹೊಟ್ಟೆ ನೋವು ಮತ್ತು ಅತಿಸಾರದಿಂದ ಬಳಲುತ್ತಿರುವ 150 ಕ್ಕೂ ಹೆಚ್ಚು ಜನರು ಬುಧವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಇದನ್ನು ಕುಡಿದು 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ಇನ್ನುಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದ್ದು. ದಳಪತಿ ವಿಜಯ್ ಸಂತ್ರಸ್ತರನ್ನು ಭೇಟಿ ಮಾಡಿ ಅವರ ಕುಂಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಇದರ ಬೆನ್ನಲ್ಲೆ ವಿಜಯ್ ಈ ವರ್ಷ ತಮ್ಮ ಹುಟ್ಟುಹಬ್ಬ ಆಚರಿಸದಂತೆ ತಮ್ಮ ಅಭಿಮಾನಿಗಳಿಗೆ ಹೇಳಿದ್ದರು.
ಇದನ್ನೂ ಓದಿ: Thalapathy Vijay Birthday: ನೂರಾರು ಕೋಟಿ ಸಂಭಾವನೆ ಪಡೆವ ದಳಪತಿ ವಿಜಯ್ ಆಸ್ತಿ ಎಷ್ಟು ಗೊತ್ತಾ?
ಆದರೂ ಕೂಡ ನೀಲಂಗರೈ ಪ್ರದೇಶದಲ್ಲಿ ವಿಜಯ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪಾರ್ಟಿ ಆಯೋಜಿಸಲಾಗಿತ್ತು. ಇಸಿಆರ್ ಸರವಣನ್ ಆಯೋಜಿಸಿದ್ದ ವಿಜಯ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಕುಟುಂಬ ಸಮೇತ ಪಾಲ್ಗೊಂಡಿದ್ದರು.
ಅಭಿಮಾನಿಗಳಿಗೆ ಸಾಹಸ ಪ್ರದರ್ಶನ ಮಾಡುವ ವೇದಿಕೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಕರಾಟೆಯಲ್ಲಿ ತರಬೇತಿ ಪಡೆದ ಬಾಲಕ ಕೈಯಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಟೈಲ್ಸ್ ಒಡೆಯಲು ಯತ್ನಿಸಿದ್ದಾನೆ. ಈ ಸಮಯದಲ್ಲಿ ಹೆಂಚುಗಳನ್ನು ಒಡೆದ ನಂತರವೂ ಬೆಂಕಿ ಉರಿಯುತ್ತಲೇ ಇದ್ದ ಕಾರಣ. ಪಕ್ಕದಲ್ಲಿದ್ದ ವ್ಯಕ್ತಿ ನೀರು ಎಂದು ತಿಳಿದು ಬಾಲಕನ ಕೈಗೆ ಸೀಮೆ ಎಣ್ಣೆಯನ್ನು ಎರಚಿದ್ದಾನೆ. ಇದರ ಕಾರಣ ಅಲ್ಲಿದ್ದ ಇತರರಿಗೂ ಬೆಂಕಿ ವ್ಯಾಪಿಸಿದೆ. ಅಷ್ಟೇ ಅಲ್ಲದೆ ಕರಾಟೆ ಮಾಡಲು ಹೊರಟ ಬಾಲಕನ ಕೈ ಸುಟ್ಟು ಗಾಯವಾಗಿದೆ.
ಸದ್ಯಕ್ಕೆ ಬಾಲಕ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಈ ಘಟನೆಯ ದೃಷ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.