ಭೋಪಾಲ್: ಐಪಿಎಲ್ ಪಂದ್ಯಗಳ ಬೆಟ್ಟಿಂಗ್ ಆಡಲು ಹೋಗಿ ಮಧ್ಯಪ್ರದೇಶದ ಪೋಸ್ಟ್‌ಮಾಸ್ಟರ್ ಒಬ್ಬ ದೊಡ್ಡ ಎಡವಟ್ಟು ಮಾಡಿದ್ದಾನೆ. ಫಿಕ್ಸೆಡ್‌ ಡೆಪಾಸಿಟ್‌ ಇರಿಸಿದ್ದ 24 ಕುಟುಂಬಗಳ ಬರೋಬ್ಬರಿ 1 ಕೋಟಿ ರೂ. ಹಣವನ್ನು ಬೆಟ್ಟಿಂಗ್ ಆಡಿ ಕಳೆದಿದ್ದಾನೆ.


COMMERCIAL BREAK
SCROLL TO CONTINUE READING

ಸಾಗರ್‌ ಜಿಲ್ಲೆಯ ಬಿನಾ ಸಬ್‌ ಪೋಸ್ಟ್ ಆಫೀಸ್‍ ಪೋಸ್ಟ್‌ಮಾಸ್ಟರ್ ವಿಶಾಲ್‌ ಅಶ್ವೀರ್‌ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. 24 ಕುಟುಂಬಗಳ ಹಣವನ್ನು ಸಾಗರ ಜಿಲ್ಲೆಯ ಉಪ ಅಂಚೆ ಕಚೇರಿಯಲ್ಲಿ ಠೇವಣಿ ಇಡಬೇಕಿತ್ತು. ಆದರೆ ವಿಶಾಲ್ ಆ ಹಣವನ್ನು ಕ್ರಿಕೆಟ್ ಬೆಟ್ಟಿಂಗ್ ಆಡಲು ಬಳಸಿ ಕಳೆದುಕೊಂಡಿದ್ದಾನೆ.


ಇದನ್ನೂ ಓದಿ: ಮಹಿಳೆಯನ್ನು ಕೊಂದ ಟಗರಿಗೆ ಮೂರು ವರ್ಷ ಸೆರೆವಾಸ!


ನಕಲಿ ಖಾತೆಗಳನ್ನು ತೆರೆಯಲು ಅಂಚೆ ಕಚೇರಿಯ ಅಸಲಿ ಪಾಸ್‍ಬುಕ್‍ಗಳನ್ನೇ ಪೋಸ್ಟ್ ಮಾಸ್ಟರ್‌ ವಿಶಾಲ್‌ ಅಶ್ವೀರ್‌ ಬಳಸಿದ್ದಾನೆ. ಖಾತೆಯಲ್ಲಿ ಜಮಾ ಮಾಡಲು ನೀಡಿದ್ದ ಎಲ್ಲಾ ಹಣವನ್ನು ಐಪಿಎಲ್‌ ಬೆಟ್ಟಿಂಗ್‍ಗೆ ಬಳಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.


ಈತ ಕಳೆದ 2 ವರ್ಷಗಳಿಂದ ಐಪಿಎಲ್‍ನಲ್ಲಿ ಬೆಟ್ಟಿಂಗ್‍ ಆಡಲು ಸಾರ್ವಜನಿಕರ ಹಣವನ್ನು ಬಳಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಬಿನಾ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ಇದನ್ನೂ ಓದಿ: ಬಲೆಗೆ ಬಿದ್ದ ʼರಿವರ್‌ ಬೀಸ್ಟ್‌ʼ: ಈ ರಾಕ್ಷಸ ಮೀನು ಕಾಣಸಿಗೋದೆ ಅಪರೂಪ!


ಆರೋಪಿ ಪೋಸ್ಟ್ ಮಾಸ್ಟರ್ ಜನರಿಗೆ ದೊಡ್ಡ ಮೊತ್ತದ ಹಣ ವಂಚಿಸಿದ್ದಾನೆ. ಬಂಧಿತ ವಿಶಾಲ್ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಬೀನಾ ಪೊಲೀಸ್ ಠಾಣೆ ಪ್ರಭಾರಿ ಅಜಯ್ ಧುರ್ವೆ ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.