ಬೆಂಗಳೂರು : ಹಾವನ್ನು ಕಂಡರೆ ಮೈ ಎಲ್ಲಾ ನಡುಗುತ್ತದೆ. ನಿಮ್ಮ ಸುತ್ತಲೂ ಅನೇಕ ರೀತಿಯ ಹಾವುಗಳನ್ನು ನೀವು ನೋಡಿರಬೇಕು. ಅಲ್ಲದೆ ಅಂತರ್ಜಾಲದಲ್ಲಿ ಕೂಡಾ ಹಾವುಗಳ ಸಾವಿರಾರು ವೀಡಿಯೋಗಳು ಕಾಣ ಸಿಗುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಕಾಣುವ ಹಾವನ್ನು ನಟನೆಯಲ್ಲಿ ಎಲ್ಲರನ್ನೂ ಮೀರಿಸುವಂತಿದೆ. 


COMMERCIAL BREAK
SCROLL TO CONTINUE READING

 ಸಾಯುವಂತೆ ವರ್ತಿಸುವ ಹಾವು : 
ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಹಾವಿನ ನಟನೆ ಕಂಡು ಎಂಥವರು ಕೂಡಾ ಬೆರಗಾಗಬೇಕು.  ಮನುಷ್ಯ ಹತ್ತಿರ ಬರುತ್ತಿದ್ದಂತೆಯೇ ಈ ಹಾವು ಸಾಯುವಂತೆ  ನಟಿಸುತ್ತದೆ. ಬಯಲು ಪ್ರದೇಶದಲ್ಲಿ ಒಂದು ಹಾವು ಸರಸರನೆ ಹರಿದಾಡಿಕೊಂಡು ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಯಾವಾಗ ತನ್ನ ಎದುರಿಗೆ ಯಾರೋ ಇದ್ದಾರೆ ಎನ್ನುವುದು ಅರಿವಾಗುತ್ತದೆಯೋ, ಹಾವು ತಕ್ಷಣ ಸತ್ತಂತೆ ಉಲ್ಟಾ ಬಿದ್ದುಕೊಳ್ಳುತ್ತದೆ.  


ಇದನ್ನೂ ಓದಿ : Video : ಹುಬ್ಬಳ್ಳಿಯಲ್ಲಿ ‌ಭಾರೀ ಮಳೆ ಗಾಳಿಗೆ ಸ್ಕೂಟಿ ಸಮೇತ ಹಾರಿ ಕೆಳಗುರುಳಿದ ವಿದ್ಯಾರ್ಥಿನಿಯರು


ವ್ಯಕ್ತಿಯು ಸತ್ತಂತೆ ಬಿದ್ದಿರುವ ಹಾವನ್ನು ಕೈಯ್ಯಲ್ಲಿ ಎತ್ತಿಕೊಂಡು ತನ್ನ ಅಂಗೈಯಲ್ಲಿ ಹಾಕಿಕೊಳ್ಳು ತ್ತಾನೆ. ಆಗಲೂ ಹಾವು ಒಂದು ಚೂರೂ ಅಲುಗಾಡುವುದಿಲ್ಲ.  ತಾನು ಸತ್ತಿದ್ದೇನೆ ಎಂದು ನಂಬಿಸುವ ಎಲ್ಲಾ ಪ್ರಯತ್ನವನ್ನು ಈ ಹಾವು ಮಾಡುತ್ತದೆ. 



 


ಹಾವಿನ ನಟನೆಗೆ ಮನಸೋತ ನೆಟ್ಟಿಗರು : 
ಈ ಹಾವಿನ ನಟನೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಇಷ್ಟಪಡುತ್ತಿದ್ದಾರೆ. ಅರ್ಥ್‌ಪಿಕ್ಸ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಬಹುತೇಕ ಬಳಕೆದಾರರು ಹಾವಿನ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ :  Viral Video: ರಸ್ತೆಮಧ್ಯೆ ಕೆಟ್ಟು ನಿಂತ ಪೊಲೀಸ್ ವ್ಯಾನ್..‌ ಸಾರ್ವಜನಿಕರಿಂದ ತಳ್ಳು-ಐಸಾ ತಳ್ಳು-ಐಸಾ!!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.