Video : ನಡುರಸ್ತೆಯಲ್ಲಿ ಪೋರನ ಆಟ ! ಸಾಮಾಜಿಕ ಮಾಧ್ಯಮದಲ್ಲಿ ಈ ಬಾಲಕನದ್ದೇ ಹವಾ
child viral video : ಮಗುವೊಂದು ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವೀಡಿಯೋದಲ್ಲಿರುವ ಮಗುವಿನ ಡ್ಯಾನ್ಸ್ ನೋಡಿ ನೀವು ಹೊಗಳದೇ ಇರಲು ಸಾಧ್ಯವೇ ಇಲ್ಲ.
child viral video : ಕೆಲವೊಮ್ಮೆ ಜನರು ಬೀದಿಗಳಲ್ಲಿ ತುಂಬಾ ನಿರಾತಂಕವಾಗಿ ನೃತ್ಯ ಮಾಡುವುದನ್ನು ನೋಡಿದಾಗ ಎಲ್ಲರೂ ದಂಗಾಗುತ್ತಾರೆ. ಆಗಾಗ, ಅಂಥಹ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಇಂಥ ವಿಡಿಯೋಗಳಲ್ಲಿ ಜನರು ಯಾವುದೇ ಪರಿವಿಲ್ಲದೆ ಬೀದಿ ಅಥವಾ ರಸ್ತೆಯಲ್ಲಿ ನೃತ್ಯ ಮಾಡುವುದನ್ನು ಕಾಣಬಹುದು.
ಅಂತಹ ವಿಡಿಯೋವೊಂದು ಇದೀಗ ಮತ್ತೆ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿ ಮಗುವೊಂದು ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ಮಕ್ಕಳು ತಮ್ಮ ಡ್ಯಾನ್ಸ್ ಸ್ಟೆಪ್ ಗಳಿಂದ ಜನರನ್ನು ಬೆರಗುಗೊಳಿಸುವ ವಿಡಿಯೋ ಅದೆಷ್ಟೋ ಬಾರಿ ಬೆಳಕಿಗೆ ಬಂದಿದೆ. ಅಂಥಹ ಪ್ರತಿ ವಿಡಿಯೋಗಳು ನೋಡಿದಷ್ಟು ನೋಡಬೇಕು ಎನ್ನುವ ಭಾವನೆ ಮೂಡಿಸುತ್ತದೆ. ಈ ವೀಡಿಯೋದಲ್ಲಿರುವ ಮಗುವಿನ ಡ್ಯಾನ್ಸ್ ನೋಡಿ ನೀವು ಹೊಗಳದೇ ಇರಲು ಸಾಧ್ಯವೇ ಇಲ್ಲ.
ಇದನ್ನೂ ಓದಿ : Viral Video: ಗನ್ ಹಿಡಿದು ಜ್ಯುವೆಲರಿ ಶಾಪ್‌ಗೆ ನುಗ್ಗಿದ ದರೋಡೆಕೋರ; ಮುಂದೇನಾಯಿತು ನೀವೇ ನೋಡಿ..!
ಮಗುವಿನ ನೃತ್ಯದ ವೈರಲ್ ವಿಡಿಯೋ :
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಗುವೊಂದು ತನ್ನ ಡ್ಯಾನ್ಸ್ ಸ್ಟೆಪ್ಸ್ ಮೂಲಕ ಜನರ ಮನ ಗೆದ್ದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಗು ಇದ್ದಕ್ಕಿದ್ದಂತೆ ರಸ್ತೆ ಮೇಲೆ ಬೀಳುತ್ತದೆ. ಏನಾಗಿದೆ ಎನ್ನುವಷ್ಟರಲ್ಲಿ ಎದ್ದು ನಿಂತ ಮಗು ಸರಾಗವಾಗಿ ತನ್ನ ಮೈ ಕೈ ಬಳುಕಿಸಲು ಆರಂಭಿಸುತ್ತದೆ.
ಈ ಮಗು ಸಮರ ಕಲೆಯ ಹೆಜ್ಜೆಯಲ್ಲಿ ಎದ್ದು ಕುಣಿದು ನಿಂತಿದ್ದವರನ್ನು ದಂಗುಬಡಿಸುತ್ತದೆ. ಈ ಪುಟ್ಟ ಬಾಲಕ ತನ್ನ ದೇಹವನ್ನು ಚಲಿಸುವ ಬಾಗಿಸುವ ಶೈಲಿಯನ್ನು ನೋಡುತ್ತಿದ್ದರೆ ಮಗುವಿನ ಮೈಯ್ಯಲ್ಲಿ ಮೂಳೆ ಇದೆಯೋ ಇಲ್ಲವೋ ಎನ್ನುವ ಪ್ರಶ್ನೆ ಮೂಡುತ್ತದೆ.
ಇದನ್ನೂ ಓದಿ : Viral Video: ಮೊಸಳೆಯನ್ನೇ ಮದುವೆಯಾದ ಮೆಕ್ಸಿಕೊದ ಮೇಯರ್!
ಈ ಮಗು ಡ್ಯಾನ್ಸ್ ಮಾಡುತ್ತಿದ್ದಂತೆ ಅಲ್ಲಿ ಜನ ಸೇರಲು ಆರಂಭಿಸಿದ್ದಾರೆ. ಈ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಲೈಕ್ ಆಗುತ್ತಿದೆ. ಹುಡುಗನ ಡ್ಯಾನ್ಸ್ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ Instagram ನಲ್ಲಿ zayan.my ಮೂಲಕ ಹಂಚಿಕೊಂಡಿದ್ದಾರೆ. ಇದುವರೆಗೆ 4.5 ಲಕ್ಷಕ್ಕೂ ಹೆಚ್ಚು ಮಂದಿ ಮಗುವಿನ ಈ ನೃತ್ಯವನ್ನು ಇಷ್ಟಪಟ್ಟಿದ್ದಾರೆ. ಈ ವೀಡಿಯೊಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು ' ಈ ಮಗು ಭವಿಷ್ಯದ ಬ್ರೂಸ್ ಲೀ ಭವಿಷ್ಯಕ್ಕಾಗಿ ಅಭ್ಯಾಸ ಮಾಡುತ್ತಿದ್ದಾರೆ' ಎಂದು ಬರೆದರೆ ಅನೇಕ ಮಂದಿ ಮಗುವಿನ ವಯಸ್ಸು ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.