Beggar Viral Video: ಕ್ರಾಸ್ರೋಡ್ಗಳಲ್ಲಿ ಅಥವಾ ರೈಲಿನಲ್ಲಿ ನಾವು ಪ್ರತಿದಿನ ಭಿಕ್ಷುಕರನ್ನು ಕಾಣುತ್ತೇವೆ. ಅಲ್ಲಿ ಅನೇಕ ಬಾರಿ ಭಿಕ್ಷುಕರು ವಿವಿಧ ರೀತಿಯಲ್ಲಿ ಭಿಕ್ಷೆ ಬೇಡುವುದನ್ನು ಕಾಣಬಹುದು. ಸಾಮಾನ್ಯವಾಗಿ ಭಿಕ್ಷುಕರು ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಹಾಡುಗಳನ್ನು ಹೇಳುತ್ತಾ ಭಿಕ್ಷೆ ಬೇಡುವುದನ್ನು ಕಾಣಬಹುದು. ಸಾಮಾನ್ಯವಾಗಿ ಭಿಕ್ಷುಕರು ಕೈಯಲ್ಲೊಂದು ತಟ್ಟೆ ಅಥವಾ ಯಾವುದಾದರೂ ಪಾತ್ರ ಹಿಡಿದು ಭಿಕ್ಷೆ ಬೇಡುತ್ತಾರೆ. ಆದರೆ ಇದು ಡಿಜಿಟಲ್ ಯುಗ. ಕಾಲಕ್ಕೆ ತಕ್ಕಂತೆ ಇಲ್ಲೊಬ್ಬ ಭಿಕ್ಷುಕ್ ಫುಲ್ ಅಪ್ಡೇಟ್ ಆಗಿದ್ದಾನೆ. ಇತ್ತೀಚಿಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಭಿಕ್ಷುಕನೊಬ್ಬ ವಿಭಿನ್ನ ರೀತಿಯಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: Funny Video: ಈ ವಿಡಿಯೋ ನೋಡಿ ನಗು ತಡೆಯಲಾಗಲ್ಲ.. ಪ್ರಾಣಿಗಳೂ ಹೀಗೆಲ್ಲಾ ಮಾಡುತ್ತವೆಯೇ?
ಭಿಕ್ಷುಕನೊಬ್ಬ ಕೈಯಲ್ಲಿ ಕ್ಯೂಆರ್ ಕೋಡ್ ಹಿಡಿದುಕೊಂಡು ಜನರ ಬಳಿ ಹೋಗಿ ಭಿಕ್ಷೆ ಬೇಡುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು. ಆ ರೈಲಿನಲ್ಲಿದ್ದ ವ್ಯಕ್ತಿಯೊಬ್ಬರು ಈತನ ಭಿಕ್ಷೆ ಬೇಡುವ ವಿಧಾನವನ್ನು ರೆಕಾರ್ಡ್ ಮಾಡಿಕೊಂಡಿದ್ಧಾರೆ. ಇದೀಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಾಮಾನ್ಯವಾಗಿ ಒಬ್ಬ ಭಿಕ್ಷುಕನು ಹಣವನ್ನು ಕೇಳಲು ಯಾರ ಬಳಗಾದರು ಹೋದಾಗ, ಚೇಂಜ್ ಇಲ್ಲ ಎಂದೇ ಹೇಳುತ್ತಾರೆ. ಇದು ಡಿಜಿಟಲ್ ಯುಗವಾದ ಕಾರಣ ಕ್ಯಾಶ್ ಇಲ್ಲ ಎನ್ನಬಹುದು. ಆದರೆ ಈ ಭಿಕ್ಷುಕ ತನ್ನ ಮುಂದಾಲೋಚನೆ ಬಳಸಿ, ತನ್ನ ಕೈಯಲ್ಲಿ ಕ್ಯೂಆರ್ ಕೋಡ್ ಹಿಡಿದು ಭಿಕ್ಷೆ ಬೇಡುತ್ತಿದ್ದಾನೆ. ಲೋಕಲ್ ರೈಲಿನ ಭಾರೀ ಜನಸಂದಣಿಯ ನಡುವೆ ವ್ಯಕ್ತಿಯೊಬ್ಬ ಹಾಡು ಹಾಡುತ್ತಾ ಕೈಯಲ್ಲಿ ಕ್ಯೂಆರ್ ಕೋಡ್ ಹಿಡಿದು ಭಿಕ್ಷೆ ಬೇಡುತ್ತಿರುವ ದೃಶ್ಯ ವೈರಲ್ ಆಗುತ್ತಿದೆ. ಅಲ್ಲಿ ನಿಂತಿರುವ ಪ್ರಯಾಣಿಕರು ಭಿಕ್ಷುಕನನ್ನು ನೋಡಿ ನಗುತ್ತಿದ್ದಾರೆ.
#MumbaiLocal #DigitalIndia
That's Mumbai local where you can see the height of using digital payment
A beggar is carrying the online payment sticker with him so you have not to bother about excuses of not having change its purely a cashless facility 🤣🤣🤣🤣🤣🤣🤣🤣🤣🤣🤣 pic.twitter.com/HIxlRJkbmM— 💝🌹💖jaggirmRanbir💖🌹💝 (@jaggirm) June 25, 2023
ಭಿಕ್ಷುಕರು ಕ್ಯೂಆರ್ ಕೋಡ್ಗಳನ್ನು ಹಿಡಿದುಕೊಂಡು ರಸ್ತೆಬದಿಯಲ್ಲಿ ನಿಂತಿರುವ ಇಂತಹ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಮುಂಬೈನಲ್ಲಿ ಚಿತ್ರೀಕರಿಸಿದ್ದು ಎನ್ನಲಾಗುತ್ತಿದೆ. ಅಲ್ಲಿ ಭಿಕ್ಷುಕನೊಬ್ಬ ಹಾಡು ಹಾಡುವ ಮೂಲಕ ಭಿಕ್ಷೆ ಬೇಡುತ್ತಿರುವುದನ್ನು ಕಾಣಬಹುದು. ಆಗಾಗ್ಗೆ ಮುಂಬೈ ಸ್ಥಳೀಯರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ.
ಇದನ್ನೂ ಓದಿ: Panipuri Video: ಬಾಯಿ ಚಪ್ಪರಿಸಿ ಗೋಲಗಪ್ಪಾ ತಿನ್ನೋ ಮುನ್ನ ಈ ವಿಡಿಯೋ ನೋಡಿ.. ಜನ್ಮದಲ್ಲೇ ಪಾನಿಪುರಿ ಹೆಸರೆತ್ತಲ್ಲ!
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK