Viral Video: ಮೊಸಳೆಯನ್ನೇ ಮದುವೆಯಾದ ಮೆಕ್ಸಿಕೊದ ಮೇಯರ್!

Mexican mayor weds crocodile: ಮದುವೆ ನಡೆಯುವ ಸಂದರ್ಭದಲ್ಲಿ ‘ಕೇಮನ್’ ಪ್ರಭೇದಕ್ಕೆ ಸೇರಿದ ಮೊಸಳೆಯ ಬಾಯಿಯನ್ನು ದಾರದಿಂದ ಕಟ್ಟಲಾಗುತ್ತದೆ. ಮೊಸಳೆಗೆ ಹಸಿರು ಉಡುಗೆ ತೊಡಿಸಿ ಮದುವೆ ಹೆಣ್ಣಿನ ಹಾಗೆ ಶೃಂಗರಿಸಲಾಗುತ್ತದೆ.

Written by - Puttaraj K Alur | Last Updated : Jul 3, 2023, 05:39 PM IST
  • ಸಂಪ್ರದಾಯಿಕ ವಿಧಿವಿಧಾನಗಳ ಪ್ರಕಾರ ಹೆಣ್ಣು ಮೊಸಳೆ ಮದುವೆಯಾದ ಮೆಕ್ಸಿಕೊ ಮೇಯರ್
  • ದಕ್ಷಿಣ ಮೆಕ್ಸಿಕೊದ ಸ್ಯಾನ್ ಪೆಡ್ರೊ ಹುವಾಮೆಲುಲಾ ಈ ವಿಶೇಷ ಮದುವೆಗೆ ಸಾಕ್ಷಿಯಾಗಿದೆ
  • ಚೊಂಟಲ್ ಸಮುದಾಯದ ತನ್ನ ಜನರಿಗೆ ಒಳಿತಾಗಲಿ ಎಂದು ಮೊಸಳೆ ಮದುವೆಯಾದ ಮೇಯರ್
Viral Video: ಮೊಸಳೆಯನ್ನೇ ಮದುವೆಯಾದ ಮೆಕ್ಸಿಕೊದ ಮೇಯರ್! title=
ಮೊಸಳೆ ಮದುವೆಯಾದ ಮೆಕ್ಸಿಕೊ ಮೇಯರ್!

ಮೆಕ್ಸಿಕೊ: ಈ ಸುದ್ದಿ ನೋಡಿ ನೀವು ಹೌಹಾರಬಹುದು. ಇದು ವಿಚಿತ್ರವಾದರೂ ನಿಜವಾಗಿಯೂ ನಡೆದಿರುವ ಘಟನೆ. ಮೆಕ್ಸಿಕೊದ ಮೇಯರ್ ಒಬ್ಬರು ಸಂಪ್ರದಾಯಿಕ ವಿಧಿವಿಧಾನಗಳ ಪ್ರಕಾರ ಹೆಣ್ಣು ಮೊಸಳೆಯನ್ನು ಮದುವೆಯಾಗಿದ್ದಾರೆ. ಇದನ್ನು ನೀವು ನಂಬಲೇಬೇಕು. ತನ್ನ ಜನರಿಗೆ ಒಳ್ಳೆಯದಾಗಲಿ ಅನ್ನೋ ಉದ್ದೇಶಕ್ಕೆ ಮೇಯರ್ ಮೊಸಳೆಯನ್ನು ಮದುವೆಯಾಗಿದ್ದಾರೆ.

ದಕ್ಷಿಣ ಮೆಕ್ಸಿಕೊದ ಸ್ಯಾನ್ ಪೆಡ್ರೊ ಹುವಾಮೆಲುಲಾ ಈ ವಿಶೇಷ ಮದುವೆಗೆ ಸಾಕ್ಷಿಯಾಗಿದೆ. ಚೊಂಟಲ್ ಸಮುದಾಯಕ್ಕೆ ಸೇರಿದ ಜನರು ವಾಸಿಸುವ ಈ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅಲ್ಲಿನ ಸಂಪ್ರದಾಯದಂತೆ ‘ಅಲಿಸಿಯಾ ಆಡ್ರಿಯಾನಾ’ ಹೆಸರಿನ ಹೆಣ್ಣು ಮೊಸಳೆ ಜೊತೆಗೆ ಮದುವೆಯಾಗಿದ್ದಾರೆ. ಈ ಮೂಲಕ ತಮ್ಮ ಪೂರ್ವಜರ ಸಾಂಪ್ರದಾಯಿಕ ಆಚರಣೆಯನ್ನು ಪಾಲಿಸಿದ್ದಾರೆ.

ಇದನ್ನೂ ಓದಿ: Cold Drinks ರೂಪದಲ್ಲಿ ಹೊಟ್ಟೆ ಸೇರುತ್ತಿದ್ಯಾ ʻವಿಷʼ ? WHO ಆತಂಕಕಾರಿ ಮಾಹಿತಿ

ಮದುವೆ ನಡೆಯುವ ಸಂದರ್ಭದಲ್ಲಿ ‘ಕೇಮನ್’ ಪ್ರಭೇದಕ್ಕೆ ಸೇರಿದ ಮೊಸಳೆಯ ಬಾಯಿಯನ್ನು ದಾರದಿಂದ ಕಟ್ಟಲಾಗುತ್ತದೆ. ಮೊಸಳೆಗೆ ಹಸಿರು ಉಡುಗೆ ತೊಡಿಸಿ ಮದುವೆ ಹೆಣ್ಣಿನ ಹಾಗೆ ಶೃಂಗರಿಸಲಾಗುತ್ತದೆ. ಮದುವೆಗೂ ಮುನ್ನ ಪ್ರತಿಯೊಂದು ಮನೆಗೂ ಮೊಸಳೆಯನ್ನು ಕರೆದುಕೊಂಡು ಹೋಗಿ ತೋರಿಸಲಾಗುತ್ತದೆ. ಬಳಿಕ ವಧುವಿನ ವೇಷದಲ್ಲಿರುವ ಮೊಸಳೆಯನ್ನು ಕೈಯಲ್ಲಿ ಹಿಡಿದುಕೊಂಡು ನೃತ್ಯ ಮಾಡುವ ಮೂಲಕ ಸಂಭ್ರಮಿಸಲಾಗುತ್ತದೆ. ಬಳಿಕ ವರನಾದ ಮೆಕ್ಸಿಕೊ ಮೇಯರ್ ತನ್ನ ಕೈಯಲ್ಲಿ ಮೊಸಳೆಯನ್ನು ಹಿಡಿದುಕೊಂಡು ನೃತ್ಯ ಮಾಡುತ್ತಾನೆ. ಕೊನೆಗೆ ಅದಕ್ಕೆ ಮುತ್ತು ಕೊಟ್ಟು ಅಧಿಕೃತವಾಗಿ ಮದುವೆಯಾಗುತ್ತಾನೆ.  

ಮೊಸಳೆ ಮದುವೆಯಾಗುವ ಆಚರಣೆ

230 ವರ್ಷಗಳ ಹಿಂದೆ ಎರಡು ಸ್ಥಳೀಯ ಸಮುದಾಯಗಳ ನಡುವೆ ಕಲಹ ಉಂಟಾಗಿತ್ತು. ಈ ವೇಳೆ ಚೊಂಟಲ್ ಸಮುದಾಯದ ರಾಜನು ಹುವಾವ್ ಸಮುದಾಯಕ್ಕೆ ಸೇರಿದ ರಾಣಿಯನ್ನು ಮದುವೆಯಾಗುತ್ತಾನೆ. ಈ ಮೂಲಕ ಈ ಒಂದು ಕಲಹವು ಅಂತ್ಯವಾಗುತ್ತದೆ. ಇದರ ನೆನಪಿಗೆ ಪ್ರತಿವರ್ಷ ಪುರುಷ ಮತ್ತು ರಾಜಕುಮಾರಿ ಪ್ರತಿನಿಧಿಸುವ ಹೆಣ್ಣು ಮೊಸಳೆಗೆ ಮದುವೆ ಮಾಡಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: Road Accident: ಭೀಕರ ರಸ್ತೆ ಅಪಘಾತಕ್ಕೆ 48 ಜನರು ಬಲಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News