ನವದೆಹಲಿ: ಶ್ವಾನಗಳನ್ನು ಮಾನವನ ‘ಬೆಸ್ಟ್ ಫ್ರೆಂಡ್’ ಎಂದು ಹೇಳಲಾಗುತ್ತದೆ. ಮನುಷ್ಯರಿಗೆ ನಾಯಿಗಳು ನಿಷ್ಠೆಯಿಂದ ಇರುವ ಕಥೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಜನರು ತಮ್ಮ ಮನೆಗಳಲ್ಲಿ ವಿವಿಧ ರೀತಿಯ ನಾಯಿಗಳನ್ನು ಸಾಕುವುದನ್ನು ನೀವು ನೋಡಿರಬೇಕು. ಮನುಷ್ಯರು ತಮ್ಮ ಮಕ್ಕಳಂತೆ ನಾಯಿಗಳನ್ನು ಪ್ರೀತಿಸುತ್ತಾರೆ. ಹೀಗಾಗಿ ಸಾಕುನಾಯಿಗಳಿಗೆ ಹೆಚ್ಚಿನ ಪ್ರೀತಿ ಸಿಗುತ್ತದೆ. ಕೆಲವರು ಬೀದಿನಾಯಿಗಳ ಜೊತೆಗೆ ನಂಟು ಹೊಂದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಂಚಲಿ ನೀರು ಜಿನುಗುತ್ತದೆ.   


COMMERCIAL BREAK
SCROLL TO CONTINUE READING

ಶ್ವಾನದ ಜೀವ ಉಳಿಸಿದ ವ್ಯಕ್ತಿ  


ವೈರಲ್ ಆಗಿರುವ ಈ ವೀಡಿಯೋದಲ್ಲಿ ಸಾಯುವ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಬೀದಿನಾಯಿಯನ್ನು ವ್ಯಕ್ತಿಯೊಬ್ಬ ರಕ್ಷಿಸಿರುವುದನ್ನು ಕಾಣಬಹುದು. ಈ ವಿಡಿಯೋ ಖಂಡಿತ ನಿಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ. ಆ ವ್ಯಕ್ತಿ ದೇವರ ರೂಪದಲ್ಲಿ ಬಂದು ಸಿಪಿಆರ್ ಮೂಲಕ ನಾಯಿಗೆ ಹೊಸ ಜೀವ ಕೊಟ್ಟಿದ್ದಾನೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅವರು ‘ದಯೆಯ ಹೃದಯ ಹೊಂದಿರುವ ಒಳ್ಳೆಯ ಜನರು ಯಾವಾಗಲೂ ಅದ್ಭುತಗಳನ್ನು ಮಾಡುತ್ತಾರೆ’ ಎಂಬ ಕ್ಯಾಪ್ಶನ್ ನೀಡಿದ್ದಾರೆ.


Sewage water beer : ಚರಂಡಿ ನೀರಿನಿಂದ ಬಿಯರ್ ತಯಾರಿ..! ಕುಡಿದವರಿಗೂ ಬಂತಂತೆ ಭಾರೀ ಮಜಾ ..!


ರಸ್ತೆ ಬದಿ ಮಲಗಿದ್ದ ನಾಯಿಯೊಂದು ಉಸಿರಾಟದ ಸಮಸ್ಯೆಯಿಂದ ಸಾಯುವ ಸ್ಥಿತಿಗೆ ತಲುಪಿತ್ತು. ಇದನ್ನು ನೋಡಿದ ತಕ್ಷಣ ವ್ಯಕ್ತಿಯೊಬ್ಬರು ಅದರ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಬಳಿಕ ಸಿಪಿಆರ್ ಮೂಲಕ ನಾಯಿಯ ಎದೆಯ ಮೇಲೆ ಒತ್ತಡ ಹೇರಿದ್ದಾರೆ. ಶ್ವಾನಕ್ಕೆ ಉಸಿರಾಟ ಹಿಂತಿರುಗುವವರೆಗೂ ಸಿಪಿಆರ್ ನೀಡುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಪವಾಡವೆಂಬಂತೆ ನಾಯಿ ಮತ್ತೆ ಉಸಿರಾಡಲು ಪ್ರಾರಂಭಿಸುತ್ತದೆ. ಇದರ ನಂತರ ಅದು ಮೈಕೊಡವಿ ಎದ್ದುನಿಂತಿದೆ.   


ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಗಳ ಸುರಿಮಳೆ


ಸಾಯುವ ಸ್ಥಿತಿಯಲ್ಲಿದ್ದ ಶ್ವಾನಕ್ಕೆ ಪುನರ್ಜನ್ಮ ನೀಡಿದ ವ್ಯಕ್ತಿಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಗಳ ಸುರಿಮಳೆಯೇ ಹರಿದುಬಂದಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ವ್ಯಕ್ತಿಯ ಮಹತ್ವದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು.. ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.