ನವದೆಹಲಿ: ಕಳೆದ ವರ್ಷಾಂತ್ಯದಲ್ಲಿ ಮೊದಲ ಬಾರಿಗೆ ಚೀನಾದ ವುಹಾನ್ ಪ್ರದೇಶದಲ್ಲಿ ಕಂಡು ಬಂದ ಮಹಾಮಾರಿ ಕೊರೋನವೈರಸ್ ಚೀನಾದಲ್ಲಿ ಮತ್ತೊಮ್ಮೆ ಸೋಂಕಿನ ಬೆದರಿಕೆ ಒಡ್ಡಿದ್ದು 49 ಹೊಸ ಪ್ರಕರಣಗಳು ಕಂಡು ಬಂದಿವೆ. ಈ ಪ್ರಕರಣಗಳ ಆಗಮನವು ಚೀನಾದಲ್ಲಿ ಎರಡನೇ ತರಂಗ  ಕೊರೊನಾವೈರಸ್ (Coronavirus)  ಸೋಂಕಿನ ಅಪಾಯವನ್ನು ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ಭಾನುವಾರ, ಚೀನಾದಲ್ಲಿ 57 ಹೊಸ  ಕೋವಿಡ್ -19 (Covid-19)  ಸೋಂಕುಗಳು ವರದಿಯಾಗಿವೆ, ಇದು ಏಪ್ರಿಲ್ ನಂತರದ ದೈನಂದಿನ ಪ್ರಕರಣಗಳಲ್ಲಿ ಅತಿ ಹೆಚ್ಚು.


ಚೀನಾ- ಪಾಕ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು! ಆದರೂ ಭಾರತಕ್ಕಿಲ್ಲ ಹೆದರಿಕೆ


ಈ 49 ಹೊಸ ಪ್ರಕರಣಗಳಲ್ಲಿ 39 ರಾಜಧಾನಿ ಬೀಜಿಂಗ್‌ನಲ್ಲಿ ಮತ್ತು ಮೂರು ಪ್ರಕರಣಗಳು ಹೆಬೈ ಪ್ರಾಂತ್ಯದಲ್ಲಿ ಕಂಡುಬಂದಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ತಿಳಿಸಿದೆ.


ಬೀಜಿಂಗ್‌ನ ಈ ಇತ್ತೀಚಿನ ಪ್ರಕರಣಗಳು ವಾಯುವ್ಯ ಹ್ಯಾಡಿಯನ್ ಜಿಲ್ಲೆಯ ಅತಿದೊಡ್ಡ ಸಗಟು ಆಹಾರ ಮಾರುಕಟ್ಟೆಗೆ ಸಂಪರ್ಕ ಹೊಂದಿವೆ. ಈ ಮಾರುಕಟ್ಟೆಯನ್ನು ಶನಿವಾರ ಮುಚ್ಚಲಾಯಿತು. ಅಲ್ಲದೆ ಹತ್ತಿರದ ಮಾರುಕಟ್ಟೆಗಳು ಮತ್ತು ಶಾಲೆಗಳನ್ನು ಸಹ ಮುಚ್ಚಲಾಯಿತು. ಆಹಾರ ಮಾರುಕಟ್ಟೆಯ ಸಮೀಪವಿರುವ ಹನ್ನೊಂದು ವಸತಿ ಪ್ರದೇಶಗಳನ್ನು ಲಾಕ್‌ಡೌನ್‌ನಲ್ಲಿ ಇರಿಸಲಾಗಿದೆ. ಬೀಜಿಂಗ್‌ಗೆ ಪ್ರಯಾಣಿಸುವುದನ್ನು ತಪ್ಪಿಸಲು ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ.


ಭಾರತದ ಬಗ್ಗೆ ನೇಪಾಳದ ವರ್ತನೆ ಬದಲಾವಣೆ ಹಿಂದೆ ಚೀನಾ-ಪಾಕ್ ಪಿತೂರಿ


ಇದಲ್ಲದೆ  ಚೀನಾ (China) ದಲ್ಲಿ ದೊಡ್ಡ ಪ್ರಮಾಣದಲ್ಲಿ ಕರೋನಾ ಟೆಸ್ಟ್ ಪ್ರಾರಂಭಿಸಲಾಗಿದೆ. ಬೀಜಿಂಗ್‌ನಲ್ಲಿ 46,000 ಜನರನ್ನು ಪರೀಕ್ಷಿಸಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ, ಈಗಾಗಲೇ 10,000 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ.


ತೀವ್ರಗೊಂಡ Boycott Chinese products ಕೂಗು, ಜೂನ್ 10ರಿಂದ ದೇಶವ್ಯಾಪಿ CAIT ಅಭಿಯಾನ


ಚೀನಾದ ನಾಗರಿಕರು ಉಳಿದ ದೇಶಗಳಿಂದ ಹಿಂದಿರುಗುತ್ತಿರುವುದರಿಂದ, ಹೊರಗಿನಿಂದ ಬರುವ ಪ್ರಕರಣಗಳು ಹೆಚ್ಚಾಗಿದ್ದು, ಇಂತಹ 10 ಪ್ರಕರಣಗಳು ಸೋಮವಾರ ವರದಿಯಾಗಿವೆ. ಮೇ ಆರಂಭದಿಂದ ಚೀನಾದಲ್ಲಿ 177 ಸಕ್ರಿಯ ಕೊರೊನೊವೈರಸ್ ಪ್ರಕರಣಗಳಿವೆ ಎಂದು ಮಾಹಿತಿ ಲಭ್ಯವಾಗಿದೆ.