COVID-19 Vaccine: Sputnik Light ಸಿಂಗಲ್ ಡೋಸ್ ವ್ಯಾಕ್ಸಿನ್ ಗೆ ಭಾರತದಲ್ಲಿ ಮೂರನೇ ಹಂತದ ಟ್ರಯಲ್ ಗೆ ಅನುಮತಿ ನೀಡಿದ DCGI
COVID-19 Vaccine: ಕೋವಿಡ್ -19 ವಿರುದ್ಧ ಸ್ಪುಟಿಕ್ ಲೈಟ್ ಶೇ. 78.6 ರಿಂದ ಶೇ. 83.7% ಪರಿಣಾಮಕಾರಿ ಎಂದು ಈ ಮೊದಲು ವೈದ್ಯಕೀಯ ಜರ್ನಲ್ `ದಿ ಲ್ಯಾನ್ಸೆಟ್` ಮಾಡಿರುವ ವರದಿಯ ಹಿನ್ನೆಲೆ DCGI ಈ ಅನುಮೋದನೆಯನ್ನು ನೀಡಿದೆ.
COVID-19 Vaccine: ಭಾರತದಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ (DCGI) ಬುಧವಾರ ಭಾರತದಲ್ಲಿ ಸ್ಪುಟ್ನಿಕ್ V ಲೈಟ್ (Sputnik Light) ಲಸಿಕೆಯ 3 ನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡಿದೆ. ಸ್ಪುಟ್ನಿಕ್ ಲೈಟ್ ಸಿಂಗಲ್ ಡೋಸ್ ಕೋವಿಡ್ -19 ಲಸಿಕೆಯನ್ನು ರಷ್ಯಾದಲ್ಲಿ ಉತ್ಪಾದಿಸಲಾಗುತ್ತದೆ. ಕೋವಿಡ್ -19 ವಿರುದ್ಧ ಸ್ಪುಟಿಕ್ ಲೈಟ್ ಶೇ. 78.6 ರಿಂದ ಶೇ. 83.7% ಪರಿಣಾಮಕಾರಿ ಎಂದು ಈ ಮೊದಲು ವೈದ್ಯಕೀಯ ಜರ್ನಲ್ 'ದಿ ಲ್ಯಾನ್ಸೆಟ್' ಮಾಡಿರುವ ವರದಿಯ ಹಿನ್ನೆಲೆ DCGI ಈ ಅನುಮೋದನೆಯನ್ನು ನೀಡಿದೆ. ಈ ವ್ಯಾಕ್ಸಿನ್ ನ ಒಂದು ಪ್ರಮಾಣದ ಪ್ರಭಾವ ಇತರ ವ್ಯಾಕ್ಸಿನ್ ಗಳ ಎರಡು ಪ್ರಮಾಣಗಳಿಗಿಂತ ಹೆಚ್ಚಾಗಿದೆ.
ಇದನ್ನೂ ಓದಿ-Sputnik Light Vaccine: ದೇಶಕ್ಕೆ ಯಾವಾಗ ಸಿಗಲಿದೆ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್? ಅದರ ಬೆಲೆ ಎಷ್ಟು?
ಇದೆ ವರ್ಷದ ಜುಲೈನಲ್ಲಿ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ ವಿಷಯ ತಜ್ಞರ ಸಮಿತಿಯು ಸ್ಪುಟ್ನಿಕ್ ನ ತುರ್ತು ಬಳಕೆಯನ್ನು ಅನುಮೊಡಿಸಲು ನಿರಾಕರಿಸಿತ್ತು. ದೇಶದಲ್ಲಿ ರಷ್ಯಾದ ಲಸಿಕೆಯ ಮೂರನೇ ಹಂತದ ಪ್ರಯೋಗಗಳನ್ನು ನಡೆಸಲು ಅದು ಶಿಫಾರಸ್ಸು ಮಾಡಿತ್ತು. ಸ್ಪುಟ್ನಿಕ್-ವಿ (Sputnik V Vaccine) ಯಲ್ಲಿ ಬಳಸಲಾಗಿರುವ ಘಟಕಗಳನ್ನೇ ಸ್ಪುಟ್ನಿಕ್-ವಿ ಲೈಟ್ ನಲ್ಲಿ ಬಳಕೆಯಾಗಿರುವುದನ್ನು ಸಮಿತಿಯು ಗಮನಿಸಿದೆ ಮತ್ತು ಭಾರತೀಯ ಜನಸಂಖ್ಯೆಯ ಸುರಕ್ಷತೆ ಮತ್ತು ಪ್ರತಿರಕ್ಷಣೆ ದತ್ತಾಂಶವು ವಿಚಾರಣೆಯ ಸಮಯದಲ್ಲಿ ಮುಂಚೂಣಿಗೆ ಬಂದಿತ್ತು.
Corona Vaccine: ವ್ಯಾಕ್ಸಿನ್ ನಕಲಿಯಾಗಿದೆಯೋ ಅಥವಾ ಅಸಲಿ? ಹೇಗೆ ಪತ್ತೆಹಚ್ಚಬೇಕು ಎಂದು ಹೇಳಿದ ಸರ್ಕಾರ
ಈ ಕುರಿತು ಅರ್ಜೆಂಟಿನಾದ ಸುಮಾರು 40 ಸಾವಿರ ಹಿರಿಯರು ಹಾಗೂ ವೃದ್ಧರ ಮೇಲೆ ಒಂದು ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನದ ಪ್ರಕಾರ, ಸ್ಪುಟ್ನಿಕ್ V ಲೈಟ್ ಲಸಿಕೆ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು ಶೇ.82.1 ರಿಂದ ಶೇ.87.6 ರಷ್ಟು ಕಡಿಮೆ ಮಾಡುತದೆ ಎಂದು ಹೇಳಲಾಗಿದೆ. ರಶಿಯನ್ ಡೈರೆಕ್ಟರ ಇನ್ವೆಸ್ಟ್ಮೆಂಟ್ ಫಂಡ್ ಕಾಲದ ವರ್ಷವಷ್ಟೇ ಭಾರತದಲ್ಲಿ ಸ್ಪುಟ್ನಿಕ್ V ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಸಲು ಹೈದರಾಬಾದ್ ಮೂಲದ ಡಾ. ರೆಡ್ಡಿಸ್ ಲ್ಯಾಬ್ (Dr. Reddy's Laboratories) ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಸ್ಪುಟ್ನಿಕ್ V ಲಸಿಕೆಯ ತುರ್ತು ಬಳಕೆಗಾರಿ ಅನುಮತಿ ನೀಡಲಾಗಿದೆ. ಮೇ 14ರಂದು ರೆಡ್ಡಿ ಅವರು ಹೈದ್ರಾಬಾದ್ ನಲ್ಲಿ ಸೀಮಿತ ಪ್ರಮಾಣದ ಜನರಿಗೆ ವ್ಯಾಕ್ಸಿನ್ ನ ಮೊದಲ ಲಸಿಕೆ ನೀಡಿತ್ತು.
ಇದನ್ನೂ ಓದಿ-Good News: ಮಕ್ಕಳಿಗಾಗಿ Nasal Spray Covid-19 Vaccine ಪರೀಕ್ಷೆ ಕೈಗೊಂಡ ರಷ್ಯಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.