How To Identify Fake Corona Vaccine - ಕರೋನ ವಿರುದ್ಧದ ಹೋರಾಟದಲ್ಲಿ ಇದೀಗ ವಿಶ್ವದಾದ್ಯಂತ ಹೆಚ್ಚು ಹೆಚ್ಚು ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ, ಈ ಮಧ್ಯೆ ಅನೇಕ ಸ್ಥಳಗಳಲ್ಲಿ ನಕಲಿ ಲಸಿಕೆಗಳನ್ನು ನೀಡಲಾಗುತ್ತಿದೆ ಎಂಬ ವರದಿಗಳೂ ಕೂಡ ಪ್ರಕಟಗೊಂಡಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಸಹ ನಕಲಿ ಲಸಿಕೆಗಳ ವ್ಯಾಪಾರವನ್ನು ಬಹಿರಂಗಪಡಿಸಲಾಗಿದೆ. ಇತ್ತೀಚೆಗೆ, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದಲ್ಲಿ ನಕಲಿ ಕೋವಿಡ್‌ಶೀಲ್ಡ್‌ಗಳು ಪತ್ತೆಯಾಗಿದ್ದವು. ಅದರ ನಂತರ ವಿಶ್ವ ಆರೋಗ್ಯ ಸಂಸ್ಥೆ ನಕಲಿ ಲಸಿಕೆಗಳ ಬಗ್ಗೆ ಜನರನ್ನು ಎಚ್ಚರಿಸಿದೆ. ಈಗ ಕೇಂದ್ರ ಸರ್ಕಾರವು ಇಂತಹ ಹಲವು ಮಾನದಂಡಗಳನ್ನು ರಾಜ್ಯಗಳಿಗೆ ನೀಡಿದ್ದು, ಅವುಗಳ ಆಧಾರದ ಮೇಲೆ ನಿಮಗೆ ನೀಡಲಾಗುತ್ತಿರುವ ಲಸಿಕೆಯನ್ನು ನೀವು ಅಸಲಿಯಾಗಿದೆಯೋ ಅಥವಾ ನಕಲಿಯಾಗಿದೆಯೋ ಎಂಬುದನ್ನು ಪರಿಶೀಲಿಸಬಹುದಾಗಿದೆ.
ಈ ಸಂಬಂಧ ಕೇಂದ್ರ ಸರ್ಕಾರ ಶನಿವಾರ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದೆ. ಈ ಪತ್ರದಲ್ಲಿ ರಾಜ್ಯಗಳಿಗೆ ಕೋವಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಲಸಿಕೆಗಳಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ನೀಡಲಾಗಿದೆ ಇದರಿಂದ ಈ ಲಸಿಕೆಗಳು ನಕಲಿಯಾಗಿವೆಯೋ ಅಥವಾ ಅಸಲಿಯಾಗಿವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಪ್ರಸ್ತುತ, ಈ ಮೂರು ಲಸಿಕೆಗಳ ಮೂಲಕ ದೇಶದಲ್ಲಿ ಲಸಿಕೆ ಅಭಿಯಾನವನ್ನು ನಡೆಸಲಾಗುತ್ತಿದೆ.
ಅಸಲಿ ವ್ಯಾಕ್ಸಿನ್ ಪತ್ತೆಗಾಗಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಲ್ಲಾ ರೀತಿಯ ಮಾಹಿತಿ ಒದಗಿಸಿದೆ. ಈ ಮಾಹಿತಿಯನ್ನು ತಿಳಿದುಕೊಂಡು ವ್ಯಾಕ್ಸಿನ್ ಅಸಲಿಯಾಗಿದೆಯೋ ಅಥವಾ ನಕಲಿಯಾಗಿದೆಯೋ ಎಂಬುದನ್ನು ಪತ್ತೆಹಚ್ಚಬಹುದು. ಅಸಲಿ ಮತ್ತು ನಕಲಿ ವ್ಯಾಕ್ಸಿನ್ ಗಳಲ್ಲಿನ ಅಂತರ ತಿಳಿದುಕೊಳ್ಳಲು ಕೋವಿಶೀಲ್ಡ್, ಕೊವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ V ಈ ಮೂರು ವ್ಯಾಕ್ಸಿನ್ ಗಳ (Corona Vaccine) ಮೇಲೆ ಲೇಬಲ್, ಅದರ ಕಲರ್, ಬ್ರಾಂಡ್ ಹೆಸರನ್ನು ನೀಡಲಾಗಿದೆ.
ಕೊವಿಶೀಲ್ಡ್ (Covishield)
-SIIನ ಉತ್ಪನ್ನ ಲೇಬಲ್, ಲೇಬಲ್‌ನ ಬಣ್ಣವು ಕಡು ಹಸಿರು ಬಣ್ಣದ್ದಾಗಿರಬೇಕು.
- ಟ್ರೇಡ್ ಮಾರ್ಕ್ ಹೊಂದಿರುವ ಬ್ರಾಂಡ್ ಹೆಸರು (COVISHIELD).
- ಜೆನರಿಕ್ ಹೆಸರು ಪಠ್ಯದ ಫಾಂಟ್ ದಪ್ಪ ಅಕ್ಷರಗಳಲ್ಲಿ ಇರುವುದಿಲ್ಲ.
- ಅದರ ಮೇಲೆ CGS NOT FOR SALE ಓವರ್ ಪ್ರಿಂಟ್ ಇರಲಿದೆ.
ಇದನ್ನೂ ಓದಿ-Covid Vaccination Slot: ಕೋವಿಡ್ ಲಸಿಕೆ ಸ್ಲಾಟ್ ಅನ್ನು Google ನಲ್ಲಿಯೂ ಬುಕ್ ಮಾಡಬಹುದು
ಕೊವ್ಯಾಕ್ಸಿನ್ (Covaxin)
- ಲೇಬಲ್‌ನಲ್ಲಿರುವ ಅದೃಶ್ಯ ಯುವಿ ಹೆಲಿಕ್ಸ್, ಇದನ್ನು ಯುವಿ ಬೆಳಕಿನಲ್ಲಿ ಮಾತ್ರ ನೋಡಬಹುದು.
-ಲೇಬಲ್ ಹಕ್ಕುಗಳ ಪಠ್ಯವನ್ನು ಚುಕ್ಕೆಗಳ ನಡುವೆ ಸಣ್ಣ ಅಕ್ಷರಗಳಲ್ಲಿ ಮರೆಮಾಡಲಾಗಿದೆ, ಅದು COVAXIN ಎಂದು ಹೇಳುತ್ತದೆ.
- ಕೋವಾಕ್ಸಿನ್‌ನಲ್ಲಿ ಎರಡು ಬಣ್ಣಗಳಲ್ಲಿ 'ಎಕ್ಸ್' ಇರುವುದನ್ನು ಗ್ರೀನ್ ಫಾಯಿಲ್ ಎಫೆಕ್ಟ್ ಎಂಬುದನ್ನು ಸೂಚಿಸುತ್ತದೆ.
ಇದನ್ನೂ ಓದಿ-Corona Vaccination: ಕರೋನಾ ಲಸಿಕೆ ಹಾಕುವಲ್ಲಿ ಹೊಸ ದಾಖಲೆ ಬರೆದ ಭಾರತ
ಸ್ಪುಟ್ನಿಕ್ V (Sputnik V)
ಸ್ಪುಟ್ನಿಕ್-ವಿ ಲಸಿಕೆಯನ್ನು ರಷ್ಯಾದ ಎರಡು ವಿಭಿನ್ನ ಪ್ಲಾಂಟ್ ಗಳಿಂದ ಆಮದು ಮಾಡಿಕೊಳ್ಳಲಾಗಿರುವುದರಿಂದ, ಇವೆರಡೂ ಸ್ವಲ್ಪ ವಿಭಿನ್ನ ಲೇಬಲ್‌ಗಳನ್ನು ಹೊಂದಿವೆ. ಆದರೆ, ಎಲ್ಲಾ ವಿವರಗಳು ಮತ್ತು ವಿನ್ಯಾಸವು ಒಂದೇ ಆಗಿರುತ್ತದೆ, ತಯಾರಕರ ಹೆಸರು ಮಾತ್ರ ವಿಭಿನ್ನವಾಗಿದೆ.
- ಇಲ್ಲಿಯವರೆಗೆ ಆಮದು ಮಾಡಲಾದ ಎಲ್ಲಾ ಲಸಿಕೆಗಳಲ್ಲಿ, ಕೇವಲ 5 ಆಂಪೂಲ್ ಪ್ಯಾಕೆಟ್‌ಗಳಲ್ಲಿ ಇಂಗ್ಲಿಷ್‌ನಲ್ಲಿ ಲೇಬಲ್ ಅನ್ನು ಬರೆಯಲಾಗಿದೆ. ಇದರ ಹೊರತಾಗಿ, ಉಳಿದ ಪ್ಯಾಕೆಟ್ ಗಳಲ್ಲಿ ರಷ್ಯನ್ ಭಾಷೆಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ-Corona New Variant: ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿ ಕರೋನಾದ ಹೊಸ ರೂಪಾಂತರಿ, ಲಸಿಕೆಯೂ ವಿಫಲವಾಗಬಹುದಂತೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ