ನವದೆಹಲಿ: ಕಂಡುಕೇಳರಿಯದ ಕೊರೊನಾ ಸೋಂಕು ಇಡೀ ಜಗತ್ತನ್ನೇ ಕಾಡುತ್ತಿದೆ. ವಿಶ್ವದ ದೊಡ್ಡ ದೊಡ್ಡ ದೇಶಗಳೇ ಕೊರೊನಾವೈರಸ್ (Coronavirus)  ಬೀರಿದ ಕಂಗೆಣ್ಣಿನ‌‌ ನೋಟಕ್ಕೆ ನಲುಗಿಹೋಗಿವೆ.  ಪ್ರಪಂಚದಲ್ಲೇ ಅತಿಹೆಚ್ಚು ಕೊರೊನಾ ಸೋಂಕು ಪೀಡಿತರು ಇರುವ ದೇಶಗಳ ವಿವರವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.


COMMERCIAL BREAK
SCROLL TO CONTINUE READING

ಕೊರೊನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಅಮೇರಿಕಾ (America) ಮೊದಲ ಸ್ಥಾನದಲ್ಲಿದೆ. ಅಮೇರಿಕಾದ ಕೊರೊನಾ ಪೀಡಿತರ ಸಂಖ್ಯೆ 15,51,853ಕ್ಕೆ ಏರಿಕೆಯಾಗಿದೆ. ನಂತರದ ಸ್ಥಾನ ರಷ್ಯಾ (Russia) ದೇಶದ್ದು. ರಷ್ಯಾದ ಕೊರೊನಾ ಪೀಡಿತರ ಸಂಖ್ಯೆ 3,08,705ಕ್ಕೆ ಏರಿಕೆಯಾಗಿದೆ.


ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಬ್ರಿಜಿಲ್ 3ನೇ ಸ್ಥಾನದಲ್ಲಿದೆ. ಬ್ರಿಜಿಲ್ (Brazil) ಕೊರೊನಾ ಪೀಡಿತರ ಸಂಖ್ಯೆ 2,91,579ಕ್ಕೆ ಏರಿಕೆಯಾಗಿದೆ. ನಂತರದ ಸ್ಥಾನದಲ್ಲಿರುವುದು ಇಂಗ್ಲೆಂಡ್. ‌ಇಂಗ್ಲೆಂಡ್ (England) ಕೊರೊನಾ ಪೀಡಿತರ ಸಂಖ್ಯೆ 2,49,619ಕ್ಕೆ ಏರಿಕೆಯಾಗಿದೆ.


ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಸ್ಪೇನ್ 5ನೇ ಸ್ಥಾನದಲ್ಲಿದೆ. ಸ್ಪೇನ್ (Spain) ಕೊರೊನಾ ಪೀಡಿತರ ಸಂಖ್ಯೆ 2,32,555ಕ್ಕೆಯಾಗಿದೆ. ನಂತರದ ಸ್ಥಾನದಲ್ಲಿ ಇಟಲಿ ಇದೆ. ಇಟಲಿಯ ಕೊರೊನಾ ಪೀಡಿತರ ಸಂಖ್ಯೆ 2,27,364ಕ್ಕೆ ಏರಿಕೆಯಾಗಿದೆ.


ಕೊರೊನಾ ಕೋವಿಡ್ -19 (Covid-19) ಪೀಡಿತರ ಸಂಖ್ಯೆಯಲ್ಲಿ 7ನೇ ಸ್ಥಾನದಲ್ಲಿರುವುದು ಫ್ರಾನ್ಸ್ ದೇಶ. ಫ್ರಾನ್ಸ್ ದೇಶದ ಕೊರೊನಾ ಪೀಡಿತರ ಸಂಖ್ಯೆ 1,81,700ಕ್ಕೆ ಏರಿಕೆಯಾಗಿದೆ.  ನಂತರದ ಸ್ಥಾನ ಜರ್ಮನಿ ದೇಶದ್ದು.‌ ಜರ್ಮನಿಯ  ಕೊರೊನಾ ಪೀಡಿತರ ಸಂಖ್ಯೆ 1,78,473ಕ್ಕೆ ಏರಿಕೆಯಾಗಿದೆ.


ಕೊರೊನಾ ಪೀಡಿತರ ಸಂಖ್ಯೆಯಲ್ಲಿ 9ನೇ ಸ್ಥಾನದಲ್ಲಿರುವುದು ಟರ್ಕಿ. ಟರ್ಕಿ ದೇಶದ ಕೊರೊನಾ ಪೀಡಿತರ ಸಂಖ್ಯೆ 1,52,587ಕ್ಕೆ ಏರಿಕೆಯಾಗಿದೆ. ಬಳಿಕ ಕೊರೊನಾ ಪೀಡಿತರ ಸಂಖ್ಯೆಯಲ್ಲಿ 10ನೇ ಸ್ಥಾನದಲ್ಲಿರುವುದು ಇರಾನ್. ಇರಾನ್ ದೇಶದ ಕೊರೊನಾ ಪೀಡಿತರ ಸಂಖ್ಯೆ 1,26,949ಕ್ಕೆ ಏರಿಕೆಯಾಗಿದೆ.


ಕೊರೊನಾ ಪೀಡಿತರ ಸಂಖ್ಯೆಯಲ್ಲಿ 11ನೇ ಸ್ಥಾನ ಭಾರತದ್ದು. ಇತ್ತೀಚೆಗೆ 11ನೇ ಸ್ಥಾನದಲ್ಲಿದ್ದ ಚೀನಾವನ್ನು ಹಿಂದಿಕ್ಕಿದ ಭಾರತದ ಕೊರೊನಾ ಪೀಡಿತರ ಸಂಖ್ಯೆ1,12,028ಕ್ಕೆ ಏರಿಕೆಯಾಗಿದೆ.