ಅಮೆರಿಕದ 46 ನೇ ಅಧ್ಯಕ್ಷರಾಗಿ Joe Biden ಪ್ರಮಾಣ ವಚನ
ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್ ನಲ್ಲಿ ಹಿಂಸಾಚಾರ ನಡೆಸಿದ ಹಿನ್ನೆಲೆಯಲ್ಲಿ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ. ರಾಷ್ಟ್ರೀಯ ಕಾವಲುಗಾರರ ಸುಮಾರು 25 ಸಾವಿರ ಸೈನಿಕರನ್ನು ಇಲ್ಲಿ ನಿಯೋಜಿಸಲಾಗಿದೆ.
ವಾಷಿಂಗ್ಟನ್ : ಅಮೆರಿಕದ (America) 46ನೇ ಅಧ್ಯಕ್ಷರಾಗಿ ಜೋ ಬಿಡೆನ್ (Joe Biden) ಇಂದು (ಬುಧವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅವರೊಂದಿಗೆ ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿರುವ ಕಮಲಾ ಹ್ಯಾರಿಸ್ (Kamala Harris) ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬೆಂಬಲಿಗರು ಕ್ಯಾಪಿಟಲ್ ಹಿಲ್ (Capital Hill) ನಲ್ಲಿ ಹಿಂಸಾಚಾರ ನಡೆಸಿದ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ.
ರಾಷ್ಟ್ರೀಯ ಕಾವಲುಗಾರರ ಸುಮಾರು 25 ಸಾವಿರ ಸೈನಿಕರನ್ನು ಇಲ್ಲಿ ನಿಯೋಜಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು 12 ಗಂಟೆಗೆ (ಸ್ಥಳೀಯ ಸಮಯ) ಸಂಸತ್ ಭವನದ ಪಶ್ಚಿಮ ಮುಂಭಾಗದಲ್ಲಿ ಬಿಡೆನ್‌ಗೆ ಪ್ರಮಾಣ ವಚನ ಬೋಧಿಸದ್ದಾರೆ. ಇದು ಭಾರತದಲ್ಲಿ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ.
ಇದನ್ನೂ ಓದಿ - ಜೋ ಬಿಡನ್ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆಗೆ ಹಾಜರಾಗುವುದಿಲ್ಲ ಎಂದ ಟ್ರಂಪ್
ಪ್ರಮಾಣವಚನ ಸ್ವೀಕರಿಸಿದ ಬಳಿಕ ಜೋ ಬಿಡೆನ್ (Joe Biden) ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜೋ ಬಿಡೆನ್ ಅವರ ಪ್ರಮಾಣವಚನ ಸಮಾರಂಭವು ಎಲ್ಲಾ ಯುಎಸ್ ಟಿವಿ ನೆಟ್ ವರ್ಕ್ ಗಳಲ್ಲಿ (US TV Network) ನೇರ ಪ್ರಸಾರವಾಗಲಿದೆ. ಇದಲ್ಲದೆ https://bideninaugural.org/watch/ ಗೆ ಭೇಟಿ ನೀಡುವ ಮೂಲಕ ಅಥವಾ ಅಮೆಜಾನ್ ಪ್ರೈಮ್‌ನಲ್ಲಿಯೂ ಇದನ್ನು ನೋಡಬಹುದು.
78 ವರ್ಷದ ಬಿಡೆನ್, ಬೈಬಲ್ ಮೇಲೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಯುಎಸ್ (US) ಇತಿಹಾಸದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷರಾಗಲಿರುವ ಬಿಡೆನ್ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಮಲಾ ಹ್ಯಾರಿಸ್ ಇತಿಹಾಸ ಸೃಷ್ಠಿ :
ಭಾರತೀಯ ಮೂಲದ ಕಮಲಾ ಹ್ಯಾರಿಸ್ (Kamala Harris) ಯುಎಸ್ ಪ್ರಜಾಪ್ರಭುತ್ವ ಇತಿಹಾಸದ ಮೊದಲ ಮಹಿಳಾ ಉಪಾಧ್ಯಕ್ಷರಾಗಲಿದ್ದಾರೆ. ಈ ಮೂಲಕ ಕಮಲಾ ಹ್ಯಾರೀಸ್ ಇತಿಹಾಸ ಸೃಷ್ಠಿಸಲಿದ್ದಾರೆ. 2013 ರಲ್ಲಿ ಜೋ ಬಿಡೆನ್ ಕೂಡ ಅವರನ್ನು ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಇದನ್ನೂ ಓದಿ - Joe Biden : ನಾಳೆ ಬೈಡನ್ ಪಟ್ಟಾಭಿಷೇಕ..ಮೊದಲ ಹತ್ತು ನಿರ್ಧಾರಗಳು ಏನಿರಬಹುದು ಗೊತ್ತಾ..?
ಕಾರ್ಯಕ್ರಮದ ವಿವರ
ಪ್ರಮಾಣವಚನ ಸ್ವೀಕಾರ ಸಮಾರಂಭವು ಯುಎಸ್ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಗಲಿದೆ. ಪ್ರಮಾಣವಚನ ಸಮಾರಂಭದಲ್ಲಿ ಖ್ಯಾತ ಗಾಯಕಿ ಗಾಗಾ ರಾಷ್ಟ್ರಗೀತೆ ಹಾಡಲಿದ್ದಾರೆ. ಜೆನ್ನಿಫರ್ ಲೋಪೆಜ್ ಸೇರಿದಂತೆ ಅನೇಕ ಹಾಲಿವುಡ್ ನಟರು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ. ನಂತರ ದೇಶದ ಪ್ರಥಮ ಮಹಿಳೆ ಡಾ. ಜಿಲ್ ಬಿಡೆನ್ ಅವರು ದೇಶದ ಜನರೊಂದಿಗೆ ಮಾತನಾಡಲಿದ್ದಾರೆ. ಇದಾದ ಮೇಲೆ ಜೋ ಬಿಡನ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರಮಾಣವಚನ ಬೋಧಿಸಲಿದ್ದಾರೆ ಮತ್ತು ನಂತರ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸೋನಿಯಾ ಸೋಟೊಮರೆ ಪ್ರಮಾಣವಚನ ಬೋಧಿಸಲಿದ್ದಾರೆ.
ನಂತರ ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಕ್ಯಾಪಿಟಲ್ ಹಿಲ್‌ನಿಂದ 'ಪ್ರೆಸಿಡೆನ್ಶಿಯಲ್ ಎಸ್ಕಾರ್ಟ್' (Presidential Escort) ನಲ್ಲಿ ಶ್ವೇತಭವನಕ್ಕೆ (White House) ಹೋಗಲಿದ್ದಾರೆ. ಸಾಮಾನ್ಯವಾಗಿ ಸುಮಾರು 3 ಲಕ್ಷ ಜನರು ರಸ್ತೆಯ ಎರಡೂ ಬದಿಯಲ್ಲಿ ನಿಂತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಆದರೆ ಈ ಬಾರಿ ಕೊರೋನಾ (Corona) ಸಾಂಕ್ರಾಮಿಕ ರೋಗದಿಂದ ಅದು ಸಂಭವಿಸುವುದಿಲ್ಲ. ಕೊರೋನಾದ ಕಾರಣಕ್ಕೆ ಸಾರ್ವಜನಿಕರಿಗೆ ಈ ಬಾರಿ ಟಿಕೆಟ್ ನೀಡುತ್ತಿಲ್ಲ. ಸಂಘಟನಾ ಸಮಿತಿಯು ಮನೆಯಲ್ಲಿ ನಡೆಯುವ ವರ್ಚುವಲ್ ಈವೆಂಟ್‌ಗೆ ಸೇರಲು ಜನರನ್ನು ಮನವಿ ಮಾಡಿದೆ.
ಡೊನಾಲ್ಡ್ ಟ್ರಂಪ್ ಘೋಷಣೆ :
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಈಗಾಗಲೇ ಹೇಳಿದ್ದಾರೆ. ಸಮಾರಂಭ ಪ್ರಾರಂಭವಾಗುವ ಮೊದಲು ಟ್ರಂಪ್ ವಾಷಿಂಗ್ಟನ್‌ನಿಂದ (Washington) ಹೊರಟು ಹೋಗುತ್ತಾರೆ ಎಂದು ಅನೇಕ ವರದಿಗಳು ತಿಳಿಸಿವೆ. ಟ್ರಂಪ್ ಅವರ ನಿಲುವು ದೇಶದ ಪ್ರಜಾಪ್ರಭುತ್ವ ಸಂಪ್ರದಾಯವನ್ನು ಮುರಿಯುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ (Newyork Times) ಬಣ್ಣಿಸಿದೆ. ಆದರೆ, ಉಪಾಧ್ಯಕ್ಷ ಮೈಕ್ ಪೆನ್ಸ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಜೋ ಬಿಡನ್ ಪೆನ್ಸ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಇದನ್ನೂ ಓದಿ - Joe Biden ಪದಗ್ರಹಣದ ದಿನವೇ ಭೂಮಿಯೆಡೆಗೆ ಬರುತ್ತಿವೆ ಈ ಅತಿಥಿಗಳು
ಸಮಾರಂಭಕ್ಕೆ ಯಾರು ಸೇರುತ್ತಾರೆ?
ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಮತ್ತು ಅವರ ಪತ್ನಿ ಲಾರಾ ಬುಷ್ ಒಪ್ಪಿದ್ದಾರೆ. ಅಂತೆಯೇ ಬರಾಕ್ ಒಬಾಮ ಮತ್ತು ಅವರ ಪತ್ನಿ ಮಿಚೆಲ್, ಬಿಲ್ ಕ್ಲಿಂಟನ್ ಮತ್ತು ಅವರ ಪತ್ನಿ ಹಿಲರಿ ಕ್ಲಿಂಟನ್ ಕೂಡ ಆಗಮಿಸುವ ನಿರೀಕ್ಷೆಯಿದೆ. 96 ವರ್ಷ ವಯಸ್ಸಿನ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮತ್ತು ಅವರ ಪತ್ನಿ ಸೆರೆಮಾನಿ ಅವರು ಭಾಗವಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.