ನವದೆಹಲಿ: ಜೋ ಬಿಡೆನ್ ಜನವರಿ 20 ರಂದು ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಅವರ ದಾರಿಯಲ್ಲಿ ಕೇವಲ ಟ್ರಂಪ್ ಬೆಂಬಲಿಗರಷ್ಟೇ ಅಲ್ಲ ಆಗಸದಿಂದ ಕೆಲ 'ಅತಿಥಿ'ಗಳು ಕೂಡ ಆಗಮಿಸಲಿದ್ದಾರೆ. ವಾಸ್ತವದಲ್ಲಿ ಮುಂಬರುವ ದಿನಗಳಲ್ಲಿ ಕೆಲ ಕ್ಷುದ್ರಗ್ರಹಗಳ ಒಂದು ಸರಣಿ ಭೂಮಿಯ ಹತ್ತಿರದಿಂದ ಹಾದುಹೋಗುವ ನಿರೀಕ್ಷೆ ಇದೆ. ಇವುಗಳಲ್ಲಿ ಒಂದು ಕ್ಷುದ್ರಗ್ರಹ ಸುಮಾರು 46 ಸಾವಿರ ಕಿ.ಮೀ ಪ್ರತಿಗಂಟೆ ವೇಗದಲ್ಲಿ ನಮ್ಮ ಭೂಮಿಯೆಡೆಗೆ ಬರುತ್ತಿದೆ.
ಪ್ರಮಾಣವಚನ ಸ್ವೀಕಾರದ ದಿನ 4 ಅಸ್ಟ್ರಾಯಿಡ್ ಗಳು ಬರಲಿವೆ
ಮುಂಬರುವ ದಿನಗಳಲ್ಲಿ ಕೆಲ ಕ್ಷುದ್ರಗ್ರಹಗಳು ಭೂಮಿಯತ್ತ ಬರಲಿವೆ. ಜೋ ಬಿಡೆನ್ ಅಮೆರಿಕಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ದಿನವೇ ಈ 4 ಕ್ಷುದ್ರಗ್ರಹಗಳು ಭೂಮಿಯ ಹತ್ತಿರದಿಂದ ದಾಟಲಿವೆ ಎಂದು NASAದ ಸೆಂಟರ್ ಫಾರ್ ನಿಯರ್ ಅರ್ಥ ಒಬ್ಜೆಕ್ಟಿವ ಹೇಳಿದೆ.
ಈ ಕ್ಷುದ್ರಗ್ರಹಗಳು ಭೂಮಿಯಿಂದ ಸುರಕ್ಷಿತ ಅಂತರದಲ್ಲಿ ಹಾದುಹೊಗಲಿವೆ ಎಂದು ನಂಬಲಾಗಿದ್ದರು ಕೂಡ ಜೋ ಬಿಡೆನ್ ಪ್ರಮಾಣ ವಚನ ಸ್ವೀಕರಿಸುವ ದಿನದಂದು ಹಾದುಹೋಗುವ 4 ಕ್ಷುದ್ರ ಗ್ರಹಗಳು ಭೂಮಿಗೆ ತೀರಾ ಹತ್ತಿರದಿಂದ ಕ್ರಮಿಸಲಿವೆ. ಇವುಗಳಲ್ಲಿ ಅತಿ ಹತ್ತಿರದಿಂದ ಹಾಯ್ದು ಹೋಗುವ ಕ್ಷುದ್ರ ಗ್ರಹಕ್ಕೆ 2021 BK1 ಎಂದು ಹೆಸರಿಸಲಾಗಿದ್ದು,, ಇದು ಭೂಮಿ ಹಾಗೂ ಚಂದ್ರನ ಕಕ್ಷೆಯ ನಡುವೆ ಇರುವ ಅಂತರದಷ್ಟೇ ಸಮೀಪದಿಂದ ಭೂಮಿಯ ಬಳಿಯಿಂದ ಹಾದು ಹೋಗಲಿದೆ.
ಇದನ್ನು ಓದಿ- ಕಣ್ಮರೆಯಾದ Supermassive Black Hole, ಭೂಮಿಗೇನು ಅಪಾಯ?
ಕೆಲ ದಿನಗಳ ಮೊದಲು ಏಲಿಯನ್ಸ್ ಗಳ ಕುರಿತು ಹೇಳಲಾಗಿತ್ತು
ಇತ್ತೀಚೆಗೆ ಇಸ್ರೇಲಿ ಬಾಹ್ಯಾಕಾಶ ಏಜೆನ್ಸಿ ಮಾಜಿ ಮುಖ್ಯಸ್ಥ ಹ್ಯಾಮ್ ಎಶೆಡ್ ವಾಸ್ತವಿಕವಾಗಿ ಏಲಿಯನ್ಸ್ ಗಲಿವೆ ಎಂದು ಹೇಳಿ ಜಗತ್ತನ್ನೇ ಬೆಚ್ಚಿಬೀಳಿಸಿದ್ದರು. ಅಷ್ಟೇ ಅಲ್ಲ ಟ್ರಂಪ್ ಆಡಳಿತಕ್ಕೆ ಈ ಕುರಿತು ಮಾಹಿತಿ ಇದೆ ಎಂದು ಅವರು ಹೇಳಿದ್ದರು.
ಇದನ್ನು ಓದಿ-Space Scienceಗಾಗಿ ಕುತೂಹಲಕಾರಿಯಾಗಿದೆ ಈ ವರ್ಷ, ಇಲ್ಲಿದೆ ಡೀಟೇಲ್ಸ್
ಏಲಿಯನ್ಸ್ ಗಳ ಅಸ್ತಿತ್ವದ ವಿಷಯವನ್ನು ಟ್ರಂಪ್ ವಿಶ್ವದ ಮುಂದೆ ತರಲು ಬಯಸಿದ್ದರು. ಆದರೆ ಪ್ರಪಂಚ ಇನ್ನು ಅದಕ್ಕೆ ಸಿದ್ದವಾಗಿಲ್ಲ ಎಂದು ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಉಲ್ಲೇಖಿಸಿದ್ದರು. ಈ ಕುರಿತು ಐದು ವರ್ಷಗಳ ಹಿಂದೆ ತಾವು ಮಾತನಾಡಿದ್ದಾರೆ ಆಸ್ಪತ್ರೆಗೆ ದಾಖಲಾಗಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ-ಎಚ್ಚರ..ಎಚ್ಚರ..! ಭಾನುವಾರ ಭುವಿಯ ಸನಿಹಕ್ಕೆ ಬರಲಿದೆ ಅತಿದೊಡ್ಡ ಕ್ಷುದ್ರಗ್ರಹ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.