ನವದೆಹಲಿ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಜನವರಿ 8) ತಮ್ಮ ಉತ್ತರಾಧಿಕಾರಿ ಜೋ ಬಿಡನ್ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆಗೆ ಹಾಜರಾಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Donald Trump ಬೆಂಬಲಿಗರಿಂದ ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ: 4 ಸಾವು
ಚುನಾವಣಾ ಫಲಿತಾಂಶವನ್ನು ವಂಚನೆ ಎಂದು ಟ್ರಂಪ್ (Donald Trump) ಪದೇ ಪದೇ ತಿರಸ್ಕರಿಸಿದ್ದಾರೆ ಮತ್ತು ಅವರ ಬೆಂಬಲಿಗರು ವಾಷಿಂಗ್ಟನ್‌ನಲ್ಲಿನ ಯುಎಸ್ ಕ್ಯಾಪಿಟಲ್ ನಲ್ಲಿ ಗಲಭೆಯಲ್ಲಿ ತೊಡಗಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು.ಜನವರಿ 20 ರಂದು ಉದ್ಘಾಟನೆಗೆ ಹೋಗುವುದಿಲ್ಲ ಎಂದು ಟ್ವೀಟ್ ನಲ್ಲಿ ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಟ್ರಂಪ್ ಅವರ Facebook, Instagram ಖಾತೆ ಮೇಲಿನ ನಿಷೇಧ 2 ವಾರಗಳಿಗೆ ವಿಸ್ತರಣೆ
To all of those who have asked, I will not be going to the Inauguration on January 20th.
— Donald J. Trump (@realDonaldTrump) January 8, 2021
ಆದರೆ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹಾಜರಾಗದಿರಲು ನಿರ್ಗಮಿತ ಅಧ್ಯಕ್ಷ ಟ್ರಂಪ್ ಯಾವುದೇ ಕಾರಣವನ್ನು ನೀಡಿಲ್ಲ. ಇದಕ್ಕೂ ಮುನ್ನ ಡೊನಾಲ್ಡ್ ಟ್ರಂಪ್ ಅವರ ಖಾತೆಗಳ ಮೇಲಿನ ನಿಷೇಧವನ್ನು ಮುಂದಿನ ಎರಡು ವಾರಗಳವರೆಗೆ ವಿಸ್ತರಿಸಲು ಫೇಸ್‌ಬುಕ್ ಇಂಕ್ ಮತ್ತು ಇನ್‌ಸ್ಟಾಗ್ರಾಮ್ ನಿರ್ಧರಿಸಿತ್ತು.
ಇದನ್ನೂ ಓದಿ: ಕೊನೆಗೂ ಸೋಲೊಪ್ಪಿಕೊಂಡ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಬುಧವಾರದಂದು ಟ್ವಿಟರ್, ಫೇಸ್‌ಬುಕ್ ಮತ್ತು ಸ್ನ್ಯಾಪ್ ಇಂಕ್ ಡೊನಾಲ್ಡ್ ಟ್ರಂಪ್ (Donald Trump) ಅವರ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು.ಗುರುವಾರ (ಜನವರಿ 7), ಕ್ಯಾಪಿಟಲ್ ಹಿಲ್ ದಲ್ಲಿ ಅಧ್ಯಕ್ಷ ಟ್ರಂಪ್ ಅವರ ಬೆಂಬಲಿಗರು ಕಾಂಗ್ರೆಸ್ ಜಂಟಿ ಅಧಿವೇಶನಕ್ಕೆ ನುಗ್ಗಿದಾಗ ಉಂಟಾದ ಗಲಭೆಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ಖಂಡಿಸಿ ಈ ಕ್ರಮವನ್ನು ತೆಗೆದುಕೊಂಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.