ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಂಡಿಸಿದ ವರದಿಯಲ್ಲಿ ಅಫ್ಘಾನಿಸ್ತಾನಕ್ಕೆ ಸಾವಿರಾರು ಭಯೋತ್ಪಾದಕರನ್ನು ಕಳುಹಿಸುವ ಬಗ್ಗೆ ಪಾಕಿಸ್ತಾನ ಉಲ್ಲೇಖಿಸಿದೆ. ಅಧಿಕೃತ ಮೂಲಗಳ ಪ್ರಕಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Imran Khan) ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.


ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಿಸಲು ಪಾಕಿಸ್ತಾನದ ಐಎಸ್‌ಐ ಸಂಚು


COMMERCIAL BREAK
SCROLL TO CONTINUE READING

ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಭಯೋತ್ಪಾದಕರಲ್ಲಿ 6,500 ಪಾಕಿಸ್ತಾನಿ ಪ್ರಜೆಗಳು ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ (UN) ವರದಿ ಹೇಳುತ್ತದೆ. ಅಫ್ಘಾನಿಸ್ತಾನಕ್ಕೆ ವಿದೇಶಿ ಹೋರಾಟಗಾರರನ್ನು ಕರೆತರುವಲ್ಲಿ ಜೈಶ್-ಎ-ಮೊಹಮ್ಮದ್ (Jaish-e-Mohammed) ಮತ್ತು ಲಷ್ಕರ್-ಎ-ತೈಬಾ (Lashkar-e-Taiba) ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿದೆ.


ಐಎಸ್‌ಐನ 'ಡರ್ಟಿ ಗೇಮ್': ಪಾಕಿಸ್ತಾನದ ಸಿಮ್ ಕಾರ್ಡ್ ಪಿತೂರಿ ಬಹಿರಂಗ


ಪಾಕಿಸ್ತಾನ ಭಯೋತ್ಪಾದನೆ(Terrorism)ಯ ಕೇಂದ್ರ ಎಂದು ವಿಶ್ವದಾದ್ಯಂತದ ದೇಶಗಳು ಈಗ ತಿಳಿದುಕೊಂಡಿವೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ (Pakistan)  ಇನ್ನೂ 30,000 ದಿಂದ 40,000 ಭಯೋತ್ಪಾದಕರಿಗೆ ಆತಿಥ್ಯ ವಹಿಸುತ್ತಿದೆ ಎಂದು ಕಳೆದ ವರ್ಷ ತಮ್ಮ ಪ್ರಧಾನಿ ಒಪ್ಪಿಕೊಂಡಿದ್ದನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ನೆನಪಿಸಿಕೊಳ್ಳುತ್ತದೆ ಎಂದು ಮೂಲವೊಂದು ತಿಳಿಸಿದೆ. ವರದಿ ಹೊರಬಂದ ನಂತರ, ಭಾರತವು ಪಾಕಿಸ್ತಾನದ ಬಗ್ಗೆ ದೀರ್ಘಕಾಲದವರೆಗೆ ಒಂದೇ ರೀತಿಯ ಮನೋಭಾವವನ್ನು ಹೊಂದಿದೆ ಮತ್ತು ಈ ವರದಿಯಲ್ಲಿ ದಾಖಲಾದ ಸಾಕ್ಷ್ಯಗಳಿಂದ ಇದು ಸಾಬೀತಾಗಿದೆ ಎಂದು ಭಾರತ ಹೇಳಿದೆ.