ಈ ತಿಂಗಳ ಆರಂಭದಲ್ಲಿ ನಡೆದ ಘಟನೆಯೊಂದರಲ್ಲಿ, ಕಾಶ್ಮೀರದ ಉಗ್ರ ಸಂಘಟನೆಗಳೊಡನೆ ಸಂಪರ್ಕ ಹೊಂದಿದ್ದ ಜಮಾತ್ ಉದ್ ದಾವಾದ ಮಾಜಿ ನಾಯಕನೊಬ್ಬನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿಟ್ಟು ಹತ್ಯೆಗೈಯಲಾಗಿತ್ತು.
ಹಲವಾರು ವಿಧ್ವಂಸಕ ಕೃತ್ಯ ನಡೆಸಿ, ಅಮಾಯಕರನ್ನು ಬಲಿ ಪಡೆದ ಭಯೋತ್ಪಾದಕ ಮಸೂದ್ ಅಜರ್ನನ್ನು, ರಾಹುಲ್ ಗಾಂಧಿ ಮಸೂದ್"ಜೀ" ಎಂದು ಕರೆಯುವ ಮೂಲಕ ಉಗ್ರರ ಬಗ್ಗೆ ತಮಗಿರುವ ಆಂತರಿಕ ಪ್ರೇಮವನ್ನು ವ್ಯಕ್ತಪಡಿಸಿದ್ದರು ಎಂದು ಬಿಜೆಪಿ ಟ್ವೀಟ್ ಮಾಡಿದೆ.
PM Modi speech on terror in US Congress: ಭಯೋತ್ಪಾದನೆಗೆ ಪ್ರಚೋದನೆ ಮತ್ತು ಸೃಷ್ಟಿ ಮಾಡುವವರೊಂದಿಗೆ ನಾವು ಕಟ್ಟುನಿಟ್ಟಾಗಿ ವ್ಯವಹರಿಸಬೇಕಾದ ಸಮಯ ಈಗ ಬಂದಿದೆ ಎಂದು ಕಿಕ್ಕಿರಿದ ಯುಎಸ್ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದ ಹೆಸರನ್ನು ತೆಗೆದುಕೊಳ್ಳದೆ ಹೇಳಿದರು.
ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಉಜ್ಬೆಕಿಸ್ತಾನ್ (ಐ ಎಂ ಯು) ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯ (ಐಸಿಸ್)ಗಳು ತಜಿಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಉಗ್ರಗಾಮಿ ಗುಂಪುಗಳು. ಈ ಎರಡು ಗುಂಪುಗಳು ತಜಿಕಿಸ್ಥಾನದಲ್ಲಿ ಬಾಂಬ್ ದಾಳಿ, ಹತ್ಯೆ-ಕಗ್ಗೊಲೆಗಳು ಹಾಗೂ ಅಪಹರಣಗಳಂತಹ ಅನೇಕ ದಾಳಿಗಳನ್ನು ನಡೆಸಿವೆ.
BJP vs Congress: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಡಿ ಉಗ್ರರು ಮತ್ತು ಉಗ್ರರ ತವರಾದ ಪಾಕಿಸ್ತಾನವು ಹೆದರಿದೆ. ಸರ್ಜಿಕಲ್ ದಾಳಿ, ಯೋಧರಿಗೆ ಬಲ ತುಂಬಿದ್ದಕ್ಕೆ ಪಾಕ್ಗೆ ನಿದ್ದೆಯೂ ಬರುತ್ತಿಲ್ಲವೆಂದು ಬಿಜೆಪಿ ಟೀಕಿಸಿದೆ.
ಕಳೆದ 3 ತಿಂಗಳಿನಿಂದ ಮಂಗಳೂರಿನಲ್ಲಿ ಎನ್ಐಎ ಸಕ್ರಿಯವಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವಂತೆ ಸ್ಥಳೀಯ ಪೊಲೀಸರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.
ಇಂದಿರಾ, ಸೋನಿಯಾ, ರಾಹುಲ್ ಭಯೋತ್ಪಾದನೆ ಪರ ಇದ್ದರು. ಈ ರಾಜ್ಯದ ಏಕೈಕ ರಾವಣ ಸಿದ್ದರಾವಣ ಸಹ ಅದನ್ನೇ ಮಾಡಿದ್ದು. ಸಿದ್ದರಾಮಯ್ಯ ಸಿಎಂ ಆದಾಗ ಗೋ ಹಂತಕರ ಪರ ನಿಂತರು ಎಂದು ನವಲಗುಂದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರೇರಣೆ ಕೊಟ್ಟಿದ್ದು ಕಾಂಗ್ರೆಸ್. RSS ನಿಷೇಧ ಮಾಡ್ಬೇಕು ಎಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಹಿಂದೂಗಳು ವೋಟ್ ಬೇಡ ಅಂತಾ ತಾಕತ್ ಇದ್ರೆ ಹೇಳಿ ಎಂದು ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.
ಗುಪ್ತಚರ ಸಂಸ್ಥೆಗಳು ಎಚ್ಚರಿಕೆಯನ್ನು ನೀಡಿದ್ದು, ಪಾಕಿಸ್ತಾನದಿಂದ ಡ್ರೋನ್ಗಳ ಮೂಲಕ ಪಿಸ್ತೂಲ್, ಹ್ಯಾಂಡ್ ಗ್ರೆನೇಡ್ ಮತ್ತು ಎಕೆ 47 ನಂತಹ ಶಸ್ತ್ರಾಸ್ತ್ರಗಳು ಸೇರಿದಂತೆ ಮಾರಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ಭದ್ರತಾ ಸಂಸ್ಥೆಗಳಿಗೆ ತಿಳಿಸಿವೆ.
ಎಕ್ಯೂಐಎಸ್ ಜೂನ್ 6ರಂದು ಬೆದರಿಕೆ ಪತ್ರ ನೀಡಿದ್ದು, ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್ನಲ್ಲಿ 'ಪ್ರವಾದಿ ಗೌರವಕ್ಕಾಗಿ ಹೋರಾಡಲು' ಆತ್ಮಾಹುತಿ ದಾಳಿ ನಡೆಸುವುದಾಗಿ ತಿಳಿಸಿತ್ತು.
ದೇಶದ ಪಂಚಾಯತ್ಗಳನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿಯವರು, ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಮೃತ್ ಸರೋವರ ಎಂಬ ಹೊಸ ಉಪಕ್ರಮವನ್ನು ಸಹ ಪ್ರಾರಂಭಿಸಲಿದ್ದಾರೆ.
ಮುಸ್ಕಾನ್ ಮುಗ್ಧ ಹುಡುಗಿ, ಈ ಘಟನೆ ಅತ್ಯಂತ ವಿಷಾಧನೀಯ. ಭಯೋತ್ಪಾದಕ ಸಂಘಟನೆಗಳಿಂದ ಹೆಚ್ಚೇನು ನಿರೀಕ್ಷಿಸಲು ಸಾಧ್ಯ? ಅವರು ಮೂಲಭೂತವಾದಿಗಳಷ್ಟೆ ಅಲ್ಲ, ಮೂಲ ಭಯೋತ್ಪಾದಕರು. ಭಯೋತ್ಪಾದಕರು ಜನರಲ್ಲಿ ಭಯ ಹುಟ್ಟಿಸಲಷ್ಟೆ ಸಾಧ್ಯ, ಈ ನಿಟ್ಟಿನಲ್ಲಿ ಜನರ ಮುಗ್ಧತೆಯನ್ನು ಅಸ್ತ್ರವನ್ನಾಗಿ ಬಳಸುತ್ತಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಮಂಡ್ಯದ ಮುಸ್ಕಾನ್ ಹೇಳಿಕೆಗೆ ಅಲ್ ಖೈದಾ ಬೆಂಬಲ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.