ಜಿನೀವಾ: ವಿಶ್ವಾದ್ಯಂತ ಕರೋನಾ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದುವರೆಗೂ ಈ ಸೋಂಕಿನಿಂದಾಗಿ 47 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ತೀವ್ರವಾಗಿ ಸೋಂಕು ಎಲ್ಲೆಡೆ ಪಸರಿಸುತ್ತಿರುವುದು ವಿಶ್ವ ಆರೋಗ್ಯ ಸಂಸ್ಥೆ (WHO)ಗೂ ತಲೆನೋವಾಗಿ ಪರಿಣಮಿಸಿದೆ. ಕರೋನಾ ವೈರಸ್ ಕ್ಷಿಪ್ರವಾಗಿ ಹರಡುತ್ತಿರುವುದರ ಬಗ್ಗೆ ಆತಂಕವಿರುವುದಾಗಿ WHO ತಿಳಿಸಿದೆ.


ಲಾಕ್‌ಡೌನ್ ಮಧ್ಯೆ ಟ್ರೆಂಡ್ ಆಗಿದೆ ಈ App, ಆದರೂ ಬಳಕೆದಾರರು ಇದನ್ನ ಡಿಲೀಟ್ ಮಾಡ್ತಿರೋದು ಏಕೆ?


COMMERCIAL BREAK
SCROLL TO CONTINUE READING

ಬುಧವಾರ ಕೊರೋನಾ ವೈರಸ್ ಹರಡುವಿಕೆ ಬಗ್ಗೆ ಮಾತನಾಡಿರುವ WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೇಯಾಸ್, " COVID-19 ನಿಂದಾಗಿ ಸತ್ತವರ ಸಂಖ್ಯೆ ಕಳೆದ ಒಂದು ವಾರದಲ್ಲಿ ದ್ವಿಗುಣಗೊಂಡಿದೆ. ಮುಂದಿನ ಕೆಲ ದಿನಗಳಲ್ಲಿ ಸೋಂಕಿತರ ಸಂಖ್ಯೆ, 1 ಮಿಲಿಯನ್ ಮತ್ತು ಸತ್ತವರ ಸಂಖ್ಯೆ 50,000 ದಾಟಬಹುದು" ಎಂಬ ಆತಂಕಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.


Coronavirus: ಈ ಬ್ಯಾಂಕಿನಲ್ಲಿ ಸಿಗಲಿಗೆ 5 ವಿಶೇಷ ತುರ್ತು ಸಾಲ


ಈ ದೇಶಗಳಲ್ಲಿ ಕೊರೋನಾ ಹಾವಳಿ:
ಈ ದೇಶಗಳಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ. ಇಟಲಿ, ಸ್ಪೇನ್ (Spain), ಜರ್ಮನಿ, ಫ್ರಾನ್ಸ್, ಬ್ರಿಟನ್, ಸ್ವಿಟ್ಜರ್ಲೆಂಡ್, ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ ನಂತರ ಆಸ್ಟ್ರಿಯಾದಲ್ಲೂ ಕರೋನದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಆಸ್ಟ್ರಿಯಾ 10,000 ಕ್ಕೂ ಹೆಚ್ಚು ಕರೋನಾ ರೋಗಿಗಳನ್ನು ಹೊಂದಿರುವ ವಿಶ್ವದ ಒಂಬತ್ತನೇ ರಾಷ್ಟ್ರವಾಗಿದೆ.


ಸ್ಪೇನ್‌ನಲ್ಲಿ ಒಂದೇ ದಿನದಲ್ಲಿ 9,222 ಹೊಸ ಪ್ರಕರಣ:
ದೇಶದಲ್ಲಿ ಒಟ್ಟು ಕೊರೊನೊ ವೈರಸ್ ಪ್ರಕರಣಗಳ ಸಂಖ್ಯೆ 94,417ಕ್ಕೆ ಏರಿದೆ ಎಂದು ಸ್ಪ್ಯಾನಿಷ್ ಆರೋಗ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.  ಮಾರ್ಚ್ 31 ರಂದು ಒಂದೇ ದಿನದಲ್ಲಿ 9,222 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಹಿಂದಿನ ಎರಡು ದಿನಗಳಿಗಿಂತ ಹೆಚ್ಚಾಗಿದೆ. ದೇಶದಲ್ಲಿ ಇಲ್ಲಿಯವರೆಗೆ ಕರೋನವೈರಸ್‌ನಿಂದಾಗಿ 8,189 ರೋಗಿಗಳು ಸಾವನ್ನಪ್ಪಿದ್ದಾರೆ.


ಇಟಲಿಯ ಸ್ಥಿತಿಯಂತೂ ಚಿಂತಾಜನಕ:
ಚೀನಾದಲ್ಲಿ ಪ್ರಾರಂಭವಾದ ಕರೋನಾವೈರಸ್ (Coronavirus) 200 ದೇಶಗಳಲ್ಲಿ ಪ್ರಭಾವಬೀರಿದ್ದು, ಸುಮಾರು 640,000 ಪ್ರಕರಣಗಳು ವರದಿಯಾಗಿವೆ. 10 ದೇಶಗಳಲ್ಲಿ 10,000ಕ್ಕೂ ಹೆಚ್ಚು ಮಂದಿ ಕೊರೋನಾ ಪೀಡಿತರಾಗಿದ್ದಾರೆ. ವಿಶೇಷವಾಗಿ ಇದು ಯೂರೋಪಿಯನ್ ದೇಶಗಳಲ್ಲಿ ಹೆಚ್ಚಾಗಿದೆ. ಇಟಲಿ (Italy)ಯ ಸ್ಥಿತಿಯಂತೂ ಚಿಂತಾಜನಕವಾಗಿದೆ. ಇಟಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದು ಲಕ್ಷದ 10 ಸಾವಿರ ದಾಟಿದ್ದು, 13 ಸಾವಿರ ಜನರು ಸಾವನ್ನಪ್ಪಿದ್ದಾರೆ.


ಭಯಾನಕ ಪರಿಸ್ಥಿತಿ ಎದುರಿಸುತ್ತಿರುವ ಜರ್ಮನಿ:
ಜರ್ಮನಿಯಲ್ಲಿ ಮಾರ್ಚ್ 31ರ ವೇಳೆಗೆ Covid-19 ಸೋಂಕಿಗೆ ಒಳಗಾದವರ ಸಂಖ್ಯೆ  61,913ಕ್ಕೆ ಏರಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ಕೆಲಸ ಮಾಡುವ ಸರ್ಕಾರಿ ಸಂಸ್ಥೆ ಮತ್ತು ಸಂಶೋಧನಾ ಸಂಸ್ಥೆಯಾದ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ (ಆರ್ಕೆಐ) ಅಧ್ಯಕ್ಷ ಲೋಥರ್ ವಿಲ್ಲರ್ ಜರ್ಮನಿಯಲ್ಲಿ ಸಾವಿನ ಪ್ರಮಾಣ ಏರಿಕೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.



Input: IANS