Desert Rose Tree: ಮರುಭೂಮಿಯಲ್ಲಿ ಅರಳಿ ನಿಂತ ಪುಷ್ಪಗಳು: ಸ್ವರ್ಗವೇ ಧರೆಗಿಳಿದಂಥಹ ನೋಟ..!
ಎಫ್ಎಸ್ ಸುಸಂತಾ ನಂದಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ ನಂತರ ಈ ವಿಡಿಯೋ ಬೆಳಕಿಗೆ ಬಂದಿದೆ.
Desert Rose Tree: ಮರುಭೂಮಿಯಲ್ಲೂ ಹೂವುಗಳು ಅರಳುತ್ತವೆ. ಮರುಭೂಮಿಯ ಹೂವುಗಳು ಎಷ್ಟು ನಯನ ಮನೋಹರವಾಗಿರುತ್ತದೆಯೆಂದರೆ, ನೋಡಿದವರು ನೋಡುತ್ತಲೇ ಇರುತ್ತಾರೆ. ಇದೀಗ ಮರುಭೂಮಿಯಲ್ಲಿ ಅರಳಿ ನಿಂತಿರುವ ಹೂವುಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಈ ವಿಡಿಯೋ ವೀಕ್ಷಿಸಿದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
ಎಫ್ಎಸ್ ಸುಸಂತಾ ನಂದಾ (IFS Susanta Nanda) ಅವರು ಸೋಶಿಯಲ್ ಮೀಡಿಯಾದಲ್ಲಿ (Social media) ಈ ವಿಡಿಯೋವನ್ನು ಶೇರ್ ಮಾಡಿದ ನಂತರ ಈ ವಿಡಿಯೋ ಬೆಳಕಿಗೆ ಬಂದಿದೆ.
35 ಗರ್ಲ್ ಫ್ರೆಂಡ್ಸ್ ಗಳ ಜೊತೆ ಆಟವಾಡುತ್ತಿದ್ದ ಭೂಪ, ಒಂದೇ ತಪ್ಪಿನಿಂದ ಹೀಗೆ ಸಿಕ್ಕಿ ಬಿದ್ದ..!
ಈ ವಿಡಿಯೋದಲ್ಲಿ ಒಂದಲ್ಲ, ಎರಡಲ್ಲ ಸಾವಿರಾರು ಹೂವುಗಳು (Flower) ಅರಳಿ ನಿಂತಿರುವುದು ಕಂಡುಬರುತ್ತದೆ. ಅಲ್ಲದೆ ವಿಭಿನ್ನ ಬಣ್ಣಗಳಲ್ಲಿ ಇರುವ ಈ ಪುಷ್ಪಗಳು ಎಂಥವರನ್ನೂ ಮನಸೂರೆಗೊಳಿಸದೆ ಇರದು . ವೀಡಿಯೊದಲ್ಲಿ ಕಂಡುಬರುವ ಮರುಭೂಮಿ ಗುಲಾಬಿ (Desert Rose) ಒಂದು ರೀತಿಯ ಸಣ್ಣ ಮರವಾಗಿದೆ. ಅವು ಗುಲಾಬಿ, ಬಿಳಿ ಕೆಂಪು ಬಣ್ಣಗಳಲ್ಲಿ ಹೂವುಗಳಲ್ಲಿ ಕಂಡು ಬರುತ್ತವೆ.
ಈ ವೀಡಿಯೊದಲ್ಲಿ ಇರುವ ನೋಟ ಯೆಮನ್‌ನ ಮರುಭೂಮಿಯದ್ದಾಗಿದೆ. ಈ ನೋಟ ಎಲ್ಲರನ್ನೂ ಮಂತ್ರ ಮಗ್ನರನ್ನಾಗಿಸಿದ್ದಂತೂ ಸುಳ್ಳಲ್ಲ..
ಇದನ್ನೂ ಓದಿ : ಹದಿನೈದು ವರ್ಷ ಕೆಲಸಕ್ಕೆ ಚಕ್ಕರ್, ಆದರೂ ತಿಂಗಳ ಕೊನೆಗೆ ಬರುತ್ತಿತ್ತು ಸ್ಯಾಲರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.