What Happens After Death - ಸಾವಿನ ನಂತರ ಜನರು ಎಲ್ಲಿಗೆ ಹೋಗುತ್ತಾರೆ ಮತ್ತು ಅಲ್ಲಿ ಏನಾಗುತ್ತದೆ? ಎರಡನೇ ಜನ್ಮ (Second Life) ಸಿಗುತ್ತದೆಯೇ? ಮರಣದ ನಂತರದ ಪ್ರಯಾಣವನ್ನು ಜನ್ಮ ಕರ್ಮದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆಯೇ? ಇಂತಹ ಎಲ್ಲಾ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಸುತ್ತುತ್ತಿರುತ್ತವೆ.. ಆದರೆ ಸಾವಿನ ನಂತರ ಏನಾಗುತ್ತದೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಯಾರೂ ಉತ್ತರಿಸಲು ಸಾಧ್ಯವಾಗಿಲ್ಲ. ಈ ಪ್ರಶ್ನೆಗಳಿಗೆ ಉತ್ತರವನ್ನು ಸಾವಿನ ನಂತರ ನಮ್ಮ ನಡುವೆ ಜೀವಂತವಾಗಿ ಬರುವವನು ವ್ಯಕ್ತಿ ಮಾತ್ರ ನೀಡಬಹುದು (Life After Death). ಆದರೆ,  ಅದು ಸಾಧ್ಯವೇ?  ಕೇಳಲು ಸ್ವಲ್ಪ ವಿಚಿತ್ರ ಎನಿಸಬಹುದು, ಆದರೆ ಓರ್ವ ವ್ಯಕ್ತಿ ಈ ಅನುಭವವನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸಾವು ಸಂಭವಿಸಿದ 20 ನಿಮಿಷಗಳ ಬಳಿಕ ಮತ್ತೆ ಜೀವ ಪಡೆದ ವ್ಯಕ್ತಿ
ಈ ಕುರಿತು ಹಕ್ಕು ಮಂಡಿಸಿರುವ 60 ವರ್ಷ ವಯಸ್ಸಿನ ಸ್ಕಾಟ್ ಡ್ರೂಮೊಂಡ್ (Scott Drummond), 28ನೇ ವಯಸ್ಸಿನಲ್ಲಿ ತಮ್ಮ ಸಾವು ಸಂಭವಿಸಿತ್ತು ಮತ್ತೂ ಅದೂ ಕೂಡ ಕೇವಲ 20 ನಿಮಿಷಗಳವರೆಗೆ ಮಾತ್ರ ಎಂದು ಹೇಳಿದ್ದಾರೆ. 20 ನಿಮಿಷಗಳ ಬಳಿಕ ಪುನಃ ತಮ್ಮ ಪ್ರಾಣ ಮರಳಿ ದೇಹ ಸೇರಿತ್ತು ಎಂದು ಅವರು ಹೇಳಿದ್ದಾರೆ. ಅಂದರೆ 20 ನಿಮಿಷಗಳ ಬಳಿಕ ತಮ್ಮ ಆತ್ಮ ಪುನಃ ತಮ್ಮ ಶರೀರಕ್ಕೆ ಮರಳಿತ್ತು ಎಂದು ಅವರು ಹೇಳಿದ್ದಾರೆ.


ವಾಪಸ್ ಕಳುಹಿಸಿಕೊಟ್ಟ ದೇವರು
ಸ್ಕಾಟ್ ಡ್ರಮ್ಮಂಡ್ ಅವರು 28 ವರ್ಷ ವಯಸ್ಸಿನವರಾಗಿದ್ದಾಗ, ಸ್ಕೈಯಿಂಗ್ ಮಾಡುವಾಗ ಅವರಿಗೆ ಅಪಘಾತ ಸಂಭವಿಸಿದೆ ಎಂದು ಹೇಳುತ್ತಾರೆ. ಈ ಅಪಘಾತದಲ್ಲಿ ಅವನ ಕೈಯ ಹೆಬ್ಬೆರಳು ಮುರಿದಿವೆ.  ಆಪರೇಷನ್ ಸಮಯದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಆ ವೇಳೆ ನಾವು ನರ್ಸ್ ಓಡಿ ಹೋಗಿ ವೈದ್ಯರನ್ನು  ಕರೆತರುವುದನ್ನು ಆಲಿಸಿದ್ದಾರೆ ಮತ್ತು ಘಟನೆಯ 20 ನಿಮಿಷಗಳ ಬಳಿಕ ತಮಗೆ ಜೀವ ಬಂದಿರುವುದಾಗಿ ಹೇಳುತ್ತಾರೆ. ಎರಡನೇ ಬಾರಿಗೆ ಜೀವ ಬಂದಾಗ ತಾವು ಎರಡನೇ ವಿಶ್ವದ ಪ್ರಯಾಣ ಮಾಡಿರುವುದಾಗಿ ಸ್ಕಾಟ್ ಹೇಳುತ್ತಾರೆ. ಇನ್ನೂ ನಿಮ್ಮ ಸಮಯ ಬಂದಿಲ್ಲ ಎಂದು ದೇವರು ಅವರಿಗೆ ಹೇಳಿ ವಾಪಸ್ ಕಳುಹಿಸಿದ್ದಾರೆ ಎಂದು ಸ್ಕಾಟ್ ಹೇಳುತ್ತಾರೆ.


ಇದನ್ನೂ ಓದಿ-Matt Hancock : ಕಿಸ್‌ ಕೊಟ್ಟು ಕೆಲಸ ಕಳೆದುಕೊಂಡ ಆರೋಗ್ಯ ಸಚಿವ!


ಸಾವಿನ ಬಳಿಕ ಏನಾಗಿದೆ?
Prioritize Your Life ಜೊತೆಗೆ ನಡೆಸಿದ ಸಂವಾದದಲ್ಲಿ ಮಾತನಾಡಿರುವ ಸ್ಕಾಟ್, ಮೊಟ್ಟಮೊದಲ ಬಾರಿಗೆ ಜಗತ್ತಿಗೆ ಸಾವಿನ ಬಳಿಕ ಏನಾಗುತ್ತದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ತಮ್ಮ ಪತ್ನಿ ಹಾಗೂ ಸ್ನೇಹಿತರ ಜೊತೆಗೆ ಈ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಸ್ಕಾಟ್, "ನನ್ನ ಸಾವಿನ ಕುರಿತು ನರ್ಸ್ ಕಿರುಚುತ್ತಿರುವುದನ್ನು ಕೇಳಿದೆ, ಅದಾದ ಬಳಿಕ ನನ್ನ ಹತ್ತಿರದಲ್ಲಿ ಒಂದು ಅದೃಶ್ಯ ಶಕ್ತಿ ಇರುವುದನ್ನು ನಾನು ಅನುಭವಿಸಿದೆ. ಆ ಅದೃಶ್ಯ ಶಕ್ತಿ ಕಣ್ಣು ಪಿಳುಕಿಸುವುದರಲ್ಲಿ ನನ್ನನ್ನು ಒಂದು ಸುಂದರ ಮೈದಾನಕ್ಕೆ ತೆಗೆದುಕೊಂಡು ಹೋಯಿತು. ಬಳಿಕ ನಾನು ಆ ಅದೃಶ್ಯ ಶಕ್ತಿಯನ್ನು ಹಿಂಬಾಲಿಸಿದೆ. ಆ ಸುಂದರ ಮೈದಾನದಲ್ಲಿ ಬಣ್ಣಬಣ್ಣದ ಹೂವುಗಳಿದ್ದವು. ಸೊಂಟೆತ್ತರಕ್ಕೆ ಬೆಳೆದ ಹುಲ್ಲಿತ್ತು. ಬಿಳಿ ಬಣ್ಣದ ಆಗಸ ನನ್ನನ್ನು ಸ್ಪರ್ಶಿಸುತ್ತಿತ್ತು. ಆದರೆ, ಆ ಅದೃಶ್ಯ ಶಕ್ತಿ ನನಗೆ ಹಿಂತಿರುಗಿ ನೋಡದಿರಲು ಹೇಳಿತ್ತು. ತಮ್ಮ ಬಲಭಾಗದಲ್ಲಿ ನೀಳವಾಗಿ ಬೆಳೆದ ಸುಂದರ ಮರಗಳಿದ್ದವು. ಆ ಮರಗಳನ್ನು ನಾನು ಹಿಂದೆಂದು ನೋಡಿರಲಿಲ್ಲ. ಇನ್ನೊಂದೆಡೆ ಸುಂದರವಾದ ಹೂವುಗಳಿದ್ದವು. ಇಂದಿಗೂ ಕೂಡ ನನಗೆ ಆ ಹೂವುಗಳು ನೆನಪಿವೆ ಮತ್ತು ಆ ಎರಡನೇ ಪ್ರಪಂಚ (Second World) ತುಂಬಾ ಶಾಂತವಾಗಿತ್ತು' ಎಂದಿದ್ದಾರೆ.


ಇದನ್ನೂ ಓದಿ-Imran Khan On Modi Government: 'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು'


ಪುನಃ ಜೀವ ಬಂದಿದ್ದಾದರೂ ಹೇಗೆ?
'ಅದೃಶ್ಯ ಶಕ್ತಿಯ ಹೇಳಿಕೆಯ ಮೇರೆಗೆ ನಾನು ಮೋಡಗಳತ್ತ ಪ್ರಯಾಣ ಬೆಳೆಸಿದ್ದೆ. ಆದರೆ, ಏತನ್ಮಧ್ಯೆ ಯಾರೋ ನನ್ನ ಕೈ ಹಿಡಿದು ಇನ್ನೂ ನಿನ್ನ ಸಮಯ ಬಂದಿಲ್ಲ ಎಂದು ಹೇಳಿದರು. ನೀನು ಮಾಡಬೇಕಾಗಿರುವುದು ಸಾಕಷ್ಟಿದೆ. ಈ ಧ್ವನಿ ಕೇಳಿದ ಬಳಿಕ ಪುನಃ ನಾನು ನನ್ನ ಶರೀರಕ್ಕೆ ಮರಳಿದೆ' ಎಂದು ಸ್ಕಾಟ್ ಹೇಳಿದ್ದಾರೆ. ಸ್ಕಾಟ್ ತಾವು 20 ನಿಮಿಷಗಳ ಕಾಲ ಮೃತಪಟ್ಟಿರುವುದಾಗಿ ಹೇಳುತ್ತಾರೆ. ಈ ಘಟನೆಯ ಬಳಿಕ ಜೀವನದ ಪ್ರತಿ ತಮ್ಮ ದೃಷ್ಟಿಕೊನವೇ ಬದಲಾಯಿತು ಎಂದು ಸ್ಕಾಟ್ ಹೇಳುತ್ತಾರೆ.


(ಸೂಚನೆ: ಸ್ಕಾಟ್ ಅವರ ಈ ಹೇಳಿಕೆಯನ್ನು ಝೀ ಹಿಂದುಸ್ತಾನ್ ಕನ್ನಡ  ದೃಢಪಡಿಸುವುದಿಲ್ಲ)


ಇದನ್ನೂ ಓದಿ- Research On Covid-19: ಕೊರೊನಾ ವೈರಸ್ ಹೊಸದಲ್ವಂತೆ ! ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.