ಉಕ್ರೇನ್ ಮೇಲೆ ‘ಪರಮಾಣು ಬಾಂಬ್’ ಹಾಕುತ್ತಾ ರಷ್ಯಾ! 500 ವರ್ಷಗಳ ಹಿಂದೆ ನಾಸ್ಟ್ರಾಡಾಮಸ್ ನುಡಿದ ಭವಿಷ್ಯವೇನು?
ವಿಶ್ವದ ಶ್ರೇಷ್ಠ ಪ್ರವಾದಿ, ಖ್ಯಾತ ಜ್ಯೋತಿಷಿ, ಭೌತವಿಜ್ಞಾನಿ ನಾಸ್ಟ್ರಾಡಾಮಸ್ ಜರ್ಮನಿಯಲ್ಲಿ 14 ಡಿಸೆಂಬರ್ 1503ರಂದು ಜನಿಸಿದರು ಮತ್ತು 2 ಜುಲೈ 1566ರಂದು ನಿಧನರಾದರು.
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ(Russia Ukraine War) ಸತತ 10ನೇ ದಿನವೂ ಮುಂದುವರಿದಿದ್ದು, ದಾಳಿಯ ನಂತರ ಉಕ್ರೇನ್ ನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ವಿಶ್ವದ ಶ್ರೇಷ್ಠ ಪ್ರವಾದಿ, ಖ್ಯಾತ ಜ್ಯೋತಿಷಿ, ಭೌತವಿಜ್ಞಾನಿ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿ ವಿಶ್ವದಲ್ಲೇ ಅತೀಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. 500 ವರ್ಷಗಳ ಹಿಂದೆಯೇ ಈತ 2022ನೇ ಇಸವಿ ಬಗ್ಗೆ ಒಂದು ದೊಡ್ಡ ಭವಿಷ್ಯವನ್ನು ನುಡಿದಿದ್ದರು.
ನಾಸ್ಟ್ರಾಡಾಮಸ್(Nostradamus) ಹೇಳಿದ ಭವಿಷ್ಯವಾಣಿಯು ಎಂದಿಗೂ ತಪ್ಪಾಗಿಲ್ಲವೆಂದು ಹೇಳಲಾಗಿದೆ. ಹಿಟ್ಲರ್ ಆಡಳಿತ, ವಿಶ್ವ ಸಮರ II, 9/11 ಭಯೋತ್ಪಾದನಾ ದಾಳಿ ಮತ್ತು ಫ್ರೆಂಚ್ ಕ್ರಾಂತಿಯ ಬಗ್ಗೆ ನಾಸ್ಟ್ರಾಡಾಮಸ್ ನುಡಿದ ನಿಖರವಾದ ಭವಿಷ್ಯವಾಣಿಗಳು ನಿಜವಾಗಿವೆ. ನಾಸ್ಟ್ರಾಡಾಮಸ್ ಜರ್ಮನಿಯಲ್ಲಿ 14 ಡಿಸೆಂಬರ್ 1503ರಂದು ಜನಿಸಿದರು ಮತ್ತು 2 ಜುಲೈ 1566ರಂದು ನಿಧನರಾದರು. ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ನಾಸ್ಟ್ರಾಡಾಮಸ್ ಏನು ಭವಿಷ್ಯ ನುಡಿದಿದ್ದಾರೆಂದು ತಿಳಿದುಕೊಳ್ಳಿರಿ.
ಇದನ್ನೂ ಓದಿ: Russia-Ukraine War: ದೇಶದಿಂದ ಪಲಾಯನ ಮಾಡಿದ್ದಾರೆಯೇ ಉಕ್ರೇನ್ ಅಧ್ಯಕ್ಷರು?
ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಉಲ್ಲೇಖ
ನಾಸ್ಟ್ರಡಾಮಸ್ ತನ್ನ ಪುಸ್ತಕದಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭವಿಷ್ಯ(Nostradamus Prediction On Russia Ukraine War) ನುಡಿದಿದ್ದಾರೆ. ಯುರೋಪ್‌ನ ಒಂದು ದೇಶವು ತನ್ನ ಶಕ್ತಿಯಿಂದ ಇಡೀ ಜಗತ್ತನ್ನು ಪ್ರಭಾವಿಸಲು ಪ್ರಯತ್ನಿಸುತ್ತದೆ ಮತ್ತು ಇದಕ್ಕಾಗಿ ಅದು ತನ್ನ ಗಡಿಯ ಪಕ್ಕದಲ್ಲಿರುವ ಮತ್ತೊಂದು ಸಣ್ಣ ದೇಶದೊಂದಿಗೆ ಯುದ್ಧಕ್ಕಿಳಿಯುತ್ತದೆ ಎಂದು ಅವರು ಬರೆದಿದ್ದಾರೆ. ಈ ಯುದ್ಧದಲ್ಲಿ ಸಾವಿರಾರು ಜನರು ಸಾಯುತ್ತಾರೆ ಮತ್ತು ಅನೇಕ ಜನರು ತಮ್ಮ ಮನೆ-ಮಠಗಳನ್ನು ತೊರೆದು ಇತರ ದೇಶಗಳಿಗೆ ಪಲಾಯನ ಮಾಡುತ್ತಾರೆ ಅಂತಲೂ ಉಲ್ಲೇಖಿಸಿದ್ದಾರೆ. ಇದಲ್ಲದೆ ‘ಒಬ್ಬ ದೊಡ್ಡ ದೇಶದ ಆಡಳಿತಗಾರ ತಾನು ಸೋಲುವುದನ್ನು ಕಂಡು ಪರಮಾಣು ಬಾಂಬ್(Nuclear Bomb) ಅನ್ನು ಸಹ ಬಳಸುವ ಬಗ್ಗೆ ಆಲೋಚಿಸುತ್ತಾನೆ. ಆದರೆ ಲಕ್ಷಾಂತರ ಜನರ ಸಾವು ಮತ್ತು 3ನೇ ಮಹಾಯುದ್ಧದ ಭಯದಿಂದಾಗಿ ಆತ ನೆಲಮಟ್ಟದಲ್ಲಿಯೇ ಹೋರಾಡಲು ನಿರ್ಧರಿಸುತ್ತಾನೆ. ಆಗ ಆತ ಆ ದೇಶದ ಮೇಲೆ ವಿಜಯ ಸಾಧಿಸುತ್ತಾನೆಂದು ಹೇಳಿದ್ದಾರೆ.
ಇಂದಿರಾಗಾಂಧಿ ಭವಿಷ್ಯ ನಿಜವಾಯಿತು
ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಬಗ್ಗೆ ನಾಸ್ಟ್ರಾಡಾಮಸ್ ಅವರ ಭವಿಷ್ಯ(Nostradamus Prediction)ವು ಸಂಪೂರ್ಣವಾಗಿ ನಿಜವೆಂದು ಸಾಬೀತಾಗಿದೆ. ಭಾರತದಲ್ಲಿ ಮಹಿಳೆಯೊಬ್ಬರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ನಾಸ್ಟ್ರಾಡಾಮಸ್ ಬರೆದಿದ್ದರು. ಆದರೆ ಅವರ ಶತ್ರುಗಳೇ ಅವರ ವಿರುದ್ಧ ಭಯಾನಕ ಪಿತೂರಿ ಹೂಡುತ್ತಾರೆ. 3 ವರ್ಷಗಳ ಸ್ಮರಣೀಯ ಸಮಯದ ನಂತರ ಅವರು ಸುಮಾರು 70ನೇ ವಯಸ್ಸಿನಲ್ಲಿ ಸಾವನ್ನಪ್ಪುತ್ತಾರೆ ಅಂತಲೂ ಅವರು ಉಲ್ಲೇಖಿಸಿದ್ದರಂತೆ. 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾಗಾಂಧಿ ಸೋಲನ್ನು ಎದುರಿಸಬೇಕಾಯಿತು ಮತ್ತು ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ಇಂದಿರಾ ಗಾಂಧಿ 1970ರಲ್ಲಿ ಪ್ರಬಲ ಪುನರಾಗಮನ ಮಾಡಿ ಮತ್ತೊಮ್ಮೆ ಪ್ರಧಾನಿಯಾದರು. ತಮ್ಮ ಭದ್ರತಾ ಸಿಬ್ಬಂದಿಯಿಂದ ಹತ್ಯೆಯಾದಾಗ ಇಂದಿರಾ ಗಾಂಧಿ ಅವರಿಗೆ 67 ವರ್ಷ ವಯಸ್ಸಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನಾಸ್ಟ್ರಡಾಮಸ್ ಅವರು ಭಾರತದ ರಾಜಕೀಯ ಮತ್ತು ಇಂದಿರಾ ಗಾಂಧಿಯವರ ಬಗ್ಗೆ ಹೇಳಿದ ಭವಿಷ್ಯ ನಿಜವಾಯಿತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಯುದ್ದ ನಿಲ್ಲಿಸಲು ಯುಕ್ರೇನ್ ಮುಂದೆ ಮೂರು ಶರತ್ತುಗಳನ್ನಿಟ್ಟ ರಷ್ಯಾ
ಕೊರೊನಾ ವೈರಸ್ ಬಗ್ಗೆ ಭವಿಷ್ಯ!
ನಾಸ್ಟ್ರಾಡಾಮಸ್ ಸುಮಾರು 500 ವರ್ಷಗಳ ಹಿಂದೆ ಕೊರೊನಾ ವೈರಸ್(CoronaVirus) ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡಿದ್ದರು. 21ನೇ ಶತಮಾನದಲ್ಲಿ ಇಡೀ ಜಗತ್ತು ಲಕ್ಷಾಂತರ ಜನರನ್ನು ಕೊಲ್ಲುವ ಭಯಾನಕ ಕಾಯಿಲೆಗೆ ಸಿಲುಕುತ್ತದೆ ಎಂದು ನಾಸ್ಟ್ರಾಡಾಮಸ್ ಉಲ್ಲೇಖಿಸಿದ್ದರಂತೆ. ‘ಈ ಮಾರಣಾಂತಿಕ ರೋಗವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ ಮತ್ತು ಇಡೀ ಪ್ರಪಂಚವೇ ಈ ಮಾರಕ ಕಾಯಿಲೆಯ ಹೊಡೆತಕ್ಕೆ ಸಿಲುಕುತ್ತದೆ. 2024ರಲ್ಲಿ ಈ ಸಾಂಕ್ರಾಮಿಕ ರೋಗವು ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತದೆ. ಅಲ್ಲಿಯವರೆಗೆ ಮನುಷ್ಯ ಈ ಭಯಾನಕ ಕಾಯಿಲೆಯಿಂದ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಕಾಯಿಲೆಗೆ ಸಿಲುಕಿ ಬಲಿಯಾಗಬೇಕಾಗುತ್ತದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದರಂತೆ.
(ಗಮನಿಸಿ: ಮೇಲೆ ಉಲ್ಲೇಖಿಸಿರುವ ಮಾಹಿತಿಯು 1500 ADಯಲ್ಲಿ ನಾಸ್ಟ್ರಾಡಾಮಸ್ ನುಡಿದ ಭವಿಷ್ಯವಾಣಿಗಳಾಗಿವೆ. Zee Kannada News ಇವುಗಳ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.