ರಷ್ಯಾ ದಾಳಿಯಿಂದ ಯುಕ್ರೇನ್ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಲ್ಲಿ ಕಾಣಿಸಿಕೊಂಡ ಬೆಂಕಿ : ಇಲ್ಲಿದೆ ವಿಡಿಯೋ

ರಷ್ಯಾದ ಸೇನಾ ದಾಳಿಯಲ್ಲಿ ಉಕ್ರೇನ್‌ನ ಝಪೊರೊಝೈ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಎಂದು ಹೇಳಲಾಗುತ್ತದೆ. 

Written by - Ranjitha R K | Last Updated : Mar 4, 2022, 09:11 AM IST
  • ರಷ್ಯಾ ಉಕ್ರೇನ್ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ
  • ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ಸೇನೆಯ ದಾಳಿ
  • ಡಿಮಿಟ್ರೋ ಕುಲೇಬಾ ಗುಂಡಿನ ದಾಳಿಯನ್ನು ನಿಲ್ಲಿಸುವಂತೆ ಮನವಿ
ರಷ್ಯಾ ದಾಳಿಯಿಂದ ಯುಕ್ರೇನ್ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಲ್ಲಿ ಕಾಣಿಸಿಕೊಂಡ ಬೆಂಕಿ : ಇಲ್ಲಿದೆ ವಿಡಿಯೋ  title=
ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ಸೇನೆಯ ದಾಳಿ (file photo)

ಕೀವ್ : ರಷ್ಯಾ ಉಕ್ರೇನ್ ಮೇಲೆ  ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ (Russia-Ukraine War). ಏತನ್ಮಧ್ಯೆ, ಉಕ್ರೇನ್‌ನ ಝಪೊರೊಝೈ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಬೆಳಕಿಗೆ ಬಂದಿದೆ (Zaporizhzhia Nuclear Power Plant). ರಷ್ಯಾ ನಡೆಸಯಾದ್ ದಾಳಿಯೇ ಈ ಬೆಂಕಿಗೆ ಕಾರಣ ಎಂದು ಹೇಳಲಾಗುತ್ತಿದೆ. ವ್ಲಾಡಿಮಿರ್ ಪುಟಿನ್ ಅವರನ್ನು ತಡೆಯದಿದ್ದರೆ ಬಹು ದೊಡ್ಡ ವಿನಾಶ ಸಂಭವಿಸಲಿದೆ ಎನ್ನುತ್ತಾರೆ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ (Dmytro Kuleba). ಆದರೆ, ಸ್ಥಳೀಯ ಅಧಿಕಾರಿಗಳ ಪ್ರಕಾರ, ಇಲ್ಲಿಯವರೆಗೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಸ್ಥಾವರದ ವಿಕಿರಣ ಮಟ್ಟದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಚೆರ್ನೋಬಿಲ್‌ಗಿಂತ 10 ಪಟ್ಟು ಹೆಚ್ಚಾಗಿತ್ತು  ಸ್ಫೋಟದ ಪ್ರಮಾಣ : 
ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಝಪೊರೊಝೈ ಎನ್‌ಪಿಪಿ ಮೇಲೆ ರಷ್ಯಾದ ಮಿಲಿಟರಿ ದಾಳಿ  (Russia Ukraine war) ನಡೆಸುತ್ತಿದೆ ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ (Dmytro Kuleba) ಟ್ವೀಟ್ ಮೂಲಕ ಹೇಳಿದ್ದಾರೆ. ಈಗಾಗಲೇ ಬೆಂಕಿ ಹೊತ್ತಿಕೊಂಡಿದೆ , ಅದು ಸ್ಫೋಟಗೊಂಡರೆ, ಅದರ ಪ್ರಮಾಣ  ಚೆರ್ನೋಬಿಲ್‌ಗಿಂತ 10 ಪಟ್ಟು ಹೆಚ್ಚು ಇರಲಿದೆ ಎಂದಿದ್ದಾರೆ. 26 ಏಪ್ರಿಲ್ 1986 ರಂದು, ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದ ನಾಲ್ಕನೇ ರಿಯಾಕ್ಟರ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಇದು ಅತ್ಯಂತ ಭೀಕರ ಪರಮಾಣು ದುರ್ಘಟನೆ ಎಂದುಎನ್ನಲಾಗಿದೆ (Zaporizhzhia Nuclear Power Plant).  

 

ಇದನ್ನೂ ಓದಿ  :  ಉಕ್ರೇನ್-ರಷ್ಯಾ ಬಿಕ್ಕಟ್ಟು: ಬೆಲಾರಸ್‌ನಲ್ಲಿ ಎರಡನೇ ಸುತ್ತಿನ ಮಾತುಕತೆ ಪ್ರಾರಂಭ

 ಝೆಲೆನ್ಸ್ಕಿಯೊಂದಿಗೆ ಮಾತ್ರುಕತೆ ನಡೆಸಿದ ಬಿಡೆನ್ : 
 ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯ (International Atomic Energy Agency) ಮಹಾನಿರ್ದೇಶಕ ರಾಫೆಲ್ ಮರಿಯಾನೋ ಗ್ರೋಸಿ ಅವರು ಉಕ್ರೇನ್ ಪ್ರಧಾನ ಮಂತ್ರಿ ಮತ್ತು ಉಕ್ರೇನಿಯನ್ ಪರಮಾಣು ನಿಯಂತ್ರಕ ಮತ್ತು ಆಪರೇಟರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಲ್ಲದೆ ತಕ್ಷಣೆ ಈ ದಾಳಿಯನ್ನು ನಿಲ್ಲಿಸುವಂತೆ ಅವರ್ಯು ಮನವಿ ಮಾಡಿದ್ದಾರೆ. ಇಲ್ಲವಾದಲ್ಲಿ ಇದರ ಪರಿಣಾಮ ಬಹಳ ಗಂಭೀರವಾಗಿರಲಿದೆ ಎದ್ನು ಅವರು ಹೇಳಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡನ್ (Biden) ಕೂಡಾ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಇಂದು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಎಂಟನೇ ದಿನ. ರಷ್ಯಾ ಇನ್ನೂ ತನ್ನ ದಾಳಿಗಳನ್ನು ಮುಂದುವರೆಸಿದೆ (Russia Ukraine War Updates). 

ಇಲ್ಲಿಯವರೆಗೆ ರಷ್ಯಾವನ್ನು (Russia) ತಡೆಯಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಯತ್ನಗಳು ನಡೆದಿವೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ನಿರ್ಬಂಧಗಳನ್ನು ಹೇರಿದ್ದರೂ ರಷ್ಯಾ ದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ರಷ್ಯಾದ ಸೈನ್ಯವು (Russia Milittery) ಉಕ್ರೇನ್‌ನಲ್ಲಿ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಸೇನೆಯ ದಾಳಿಯಲ್ಲಿ ಅಪಾರ ಸಂಖ್ಯೆಯ ನಾಗರಿಕರೂ ಪ್ರಾಣ ಕಳೆದುಕೊಂಡಿದ್ದಾರೆ.  ಈ ಯುದ್ದದ ಮಧ್ಯೆ ಯಾರಾದರೂ ಬಂದರೆ ಪರಿಣಾಮಗಳು ಭೀಕರವಾಗಿರುತ್ತವೆ ಎಂದು ಪುಟಿನ್ ಈಗಾಗಲೇ ಎಚ್ಚರಿಸಿದ್ದರು. 

ಇದನ್ನೂ ಓದಿ  :  ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ? ಈ ಕಾರಣಕ್ಕೆ ‘ದೊಡ್ಡಣ್ಣ’ನಿಗೆ ಕೋಪ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News