ಯುದ್ದ ನಿಲ್ಲಿಸಲು ಯುಕ್ರೇನ್ ಮುಂದೆ ಮೂರು ಶರತ್ತುಗಳನ್ನಿಟ್ಟ ರಷ್ಯಾ

ಉಕ್ರೇನ್‌ನ ರಾಜಧಾನಿ ಕೈವ್ ಮತ್ತು ಇತರ ದೊಡ್ಡ ನಗರಗಳ ಮೇಲೆ ವೈಮಾನಿಕ ದಾಳಿಗಳ ಸುದ್ದಿ  ದುಷ್ಪ್ರಚಾರವಾಗಿದೆ ಎಂದು  ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ತಮ್ಮ ಬೇಡಿಕೆಗಳನ್ನು ಅಂಗೀಕರಿಸಿದರೆ ಮಾತುಕತೆಗೆ ಸಿದ್ಧ ಎಂದೂ ಅವರು ಹೇಳಿದ್ದಾರೆ.  

Written by - Ranjitha R K | Last Updated : Mar 5, 2022, 08:54 AM IST
  • 9ನೇ ದಿನವೂ ಮುಂದುವರೆದಿದೆ ರಷ್ಯಾ-ಉಕ್ರೇನ್ ಯುದ್ಧ
  • ರಷ್ಯಾದೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿದೆ ಉಕ್ರೇನ್
  • ಯುದ್ಧವನ್ನು ನಿಲ್ಲಿಸುವ ಪ್ರಯತ್ನಗಳೂ ನಡೆಯುತ್ತಿವೆ
ಯುದ್ದ ನಿಲ್ಲಿಸಲು ಯುಕ್ರೇನ್ ಮುಂದೆ ಮೂರು ಶರತ್ತುಗಳನ್ನಿಟ್ಟ ರಷ್ಯಾ  title=
9ನೇ ದಿನವೂ ಮುಂದುವರೆದಿದೆ ರಷ್ಯಾ-ಉಕ್ರೇನ್ ಯುದ್ಧ (file photo)

ಮಾಸ್ಕೋ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಸೇನೆಯು 3-4 ದಿನಗಳಲ್ಲಿ ಇಡೀ ಉಕ್ರೇನ್ ಅನ್ನು ವಶಪಡಿಸಿಕೊಳ್ಳುತ್ತದೆ ಎಂದೇ ಭಾವಿಸಿದ್ದರು (Russia Ukraine War). ಆದರೆ ಉಕ್ರೇನ್‌ನ ಕೆಚ್ಚೆದೆಯ ಸೈನ್ಯ ಇದಕ್ಕೆ ಅವಕಾಶ ನೀಡಲಿಲ್ಲ. ಯುದ್ಧದ 9 ನೇ ದಿನವೂ ರಷ್ಯಾಕ್ಕೆ ಅಂದುಕೊಂಡ ಯಶಸ್ಸು ಸಿಕ್ಕಿಲ್ಲ.  ಬಹುಶಃ ಪುಟಿನ್ (Vladimir Putin) ಈಗ ಮಾತುಕತೆಯ ಸೂಚನೆಗಳನ್ನು ನೀಡುತ್ತಿರುವುದು ಇದೇ ಕಾರಣಕ್ಕೆ. ಉಕ್ರೇನಿಯನ್ ನಗರಗಳಲ್ಲಿ ಬಾಂಬ್ ದಾಳಿಯನ್ನು ನಡೆಸುತ್ತಿರುವ ಆರೋಪಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರಾಕರಿಸಿದ್ದಾರೆ. ಅದೇ ವೇಳೆ ತಮ್ಮ ಬೇಡಿಕೆಗಳನ್ನು ಒಪ್ಪಿಕೊಂಡರೆ ಮಾತುಕತೆಗೆ ಸಿದ್ದ ಎಂದಿದ್ದಾರೆ. 

ಜರ್ಮನ್ ಚಾನ್ಸಲರ್ ಜೊತೆಗಿನ ಮಾತುಕತೆಯ ನಂತರ ನೀಡಿರುವ ಹೇಳಿಕೆ :
ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿಯ ವರದಿಗಳು ಸುಳ್ಳು ಎಂದು ರಷ್ಯಾದ ಅಧ್ಯಕ್ಷೀಯ ಕಚೇರಿ ತಿಳಿಸಿದೆ. ಜರ್ಮನ್ ಚಾನ್ಸೆಲರ್ ಓಲಾಫ್ ಸೋಲ್ಜ್ ಅವರೊಂದಿಗಿನ ಮಾತುಕತೆಯ ನಂತರ  ವ್ಲಾಡಿಮಿರ್ ಪುಟಿನ್ ಈ ಹೇಳಿಕೆಯನ್ನು ನೀಡಿದ್ದಾರೆ (Russia Ukraine war updates). ಉಕ್ರೇನ್‌ನ ರಾಜಧಾನಿ ಕೈವ್ ಮತ್ತು ಇತರ ದೊಡ್ಡ ನಗರಗಳ ಮೇಲೆ ನಡೆಸಿರುವ ವೈಮಾನಿಕ ದಾಳಿಯ ಸುದ್ದಿ ದುಷ್ಪ್ರಚಾರ ನೀಡುವಂತದ್ದಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಬೇಡಿಕೆಗಳನ್ನು ಅಂಗೀಕರಿಸಿದರೆ ಮಾತ್ರ ಉಕ್ರೇನ್ (Ukraine)ಕುರಿತು ಮಾತುಕತೆ ಸಾಧ್ಯ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ  :Russia-Ukraine War: ದೇಶದಿಂದ ಪಲಾಯನ ಮಾಡಿದ್ದಾರೆಯೇ ಉಕ್ರೇನ್ ಅಧ್ಯಕ್ಷರು?

ಈ 3 ಷರತ್ತುಗಳನ್ನು ಉಲ್ಲೇಖಿಸಿರುವ ಪುಟಿನ್  : 
ರಷ್ಯಾದ ಬೇಡಿಕೆಗಳೆಂದರೆ ಉಕ್ರೇನ್ ಅನ್ನು ತಟಸ್ಥ ಮತ್ತು ಪರಮಾಣು ರಹಿತ ರಾಷ್ಟ್ರವನ್ನಾಗಿ ಮಾಡುವುದು, ಕ್ರೈಮಿಯಾವನ್ನು ರಷ್ಯಾದ (Russia) ಭಾಗವೆಂದು ಗುರುತಿಸುವುದು ಮತ್ತು ಪೂರ್ವ ಉಕ್ರೇನ್‌ನ ಪ್ರತ್ಯೇಕತಾವಾದಿ ಪ್ರದೇಶಗಳ ಸಾರ್ವಭೌಮತ್ವವನ್ನು ಪಡೆದುಕೊಳ್ಳುವುದು. ಮೂರನೇ ಸುತ್ತಿನ ಮಾತುಕತೆ ಬಗ್ಗೆ ರಷ್ಯಾದಿಂದ ನಿರೀಕ್ಷೆಗಳು ವ್ಯಕ್ತವಾಗಿವೆ. ಈ ಬಗ್ಗೆ ಉಕ್ರೇನ್ ಸರ್ಕಾರವು ತಾರ್ಕಿಕ ಮತ್ತು ಸಕಾರಾತ್ಮಕ ಮನೋಭಾವವನ್ನು ತೋರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.  ಕೈವ್ ಸಮಾಲೋಚಕರ ಪ್ರಕಾರ, ಎರಡು ಕಡೆಯ ನಡುವಿನ ಮುಂದಿನ ಸುತ್ತಿನ ಮಾತುಕತೆ ವಾರಾಂತ್ಯದಲ್ಲಿ ನಡೆಯುವ ಸಾಧ್ಯತೆಯಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ಇಲ್ಲಿಯವರೆಗೆ ಎರಡು ಸುತ್ತಿನ ಮಾತುಕತೆಗಳು ನಡೆದಿವೆ.  ಆದರೂ ಈ ಮಾತುಕತೆಯಲ್ಲಿ ಇದುವರೆಗೆ ಯಾವುದೇ ನಿರ್ದಿಷ್ಟ ಫಲಿತಾಂಶ ಹೊರಬಿದ್ದಿಲ್ಲ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದ ಒಂಬತ್ತು ದಿನಗಳು ಕಳೆದಿವೆ (Russia Ukraine war updates). ಏಕಾಏಕಿ ಉಕ್ರೇನ್ ಮೇಲೆ ದಾಳಿ ಮಾಡಿ ಕ್ಷಿಪ್ರ ಗತಿಯಲ್ಲಿ ಕೈವ್ ವಶಪಡಿಸಿಕೊಳ್ಳುವ ರಷ್ಯಾ ಸೇನೆಯ ತಂತ್ರ ಯಶಸ್ವಿಯಾಗುವ ಲಕ್ಷಣ ಕಾಣುತ್ತಿಲ್ಲ (Vladimir Putin). ಉಕ್ರೇನ್‌ನ ಪ್ರಮುಖ ನಗರಗಳು ನಿರಂತರವಾಗಿ ರಷ್ಯಾದ ಸೇನೆಯಿಂದ ಗುರಿಯಾಗುತ್ತಿವೆ. ಇಲ್ಲಿಯವರೆಗೆ, ಈ ಯುದ್ಧದಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ಸಾವನ್ನಪ್ಪಿದ್ದಾರೆ. ಆದರೆ, ನಾಗರಿಕರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿಲ್ಲ ಎಂದು ರಷ್ಯಾ ಹೇಳಿದೆ.

ಇದನ್ನೂ ಓದಿ  : Ukraine War: UNHRCಯಲ್ಲಿ ರಷ್ಯಾ ವಿರುದ್ಧದ ನಿರ್ಣಯಕ್ಕೆ ಅಂಗೀಕಾರ, ಭಾರತ ತೆಗೆದುಕೊಂಡ ನಿಲುವು ಇದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News