Ukraine War: UNHRCಯಲ್ಲಿ ರಷ್ಯಾ ವಿರುದ್ಧದ ನಿರ್ಣಯಕ್ಕೆ ಅಂಗೀಕಾರ, ಭಾರತ ತೆಗೆದುಕೊಂಡ ನಿಲುವು ಇದು

Resolution Against Russia In UNHRC - ಉಕ್ರೇನ್ ವಿರುದ್ಧ ರಷ್ಯಾದ ಮಿಲಿಟರಿ ಕ್ರಮದ ಹಿನ್ನೆಲೆ ತಕ್ಷಣವೇ ಸ್ವತಂತ್ರ ಅಂತರಾಷ್ಟ್ರೀಯ ತನಿಖಾ ಆಯೋಗವನ್ನು ಸ್ಥಾಪಿಸಲು ನಿರ್ಧರಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಮತದಾನ ಪ್ರಕ್ರಿಯೆಯಿಂದ ಭಾರತ ಶುಕ್ರವಾರ ದೂರ ಉಳಿದಿದೆ.

Written by - Nitin Tabib | Last Updated : Mar 4, 2022, 07:26 PM IST
  • UNHRCಯಲ್ಲಿ ರಷ್ಯಾ ವಿರುದ್ಧದ ಪ್ರಸ್ತಾವನೆ ಅಂಗೀಕಾರ
  • ಮತದಾನ ಪ್ರಕ್ರಿಯೆಯಿಂದ ದೂರ ಉಳಿದ ಭಾರತ
  • ನಿರ್ಣಯ ಸ್ವಾಗತಿಸಿದ ಜಲೆನ್ಸ್ಕಿ
Ukraine War: UNHRCಯಲ್ಲಿ ರಷ್ಯಾ ವಿರುದ್ಧದ ನಿರ್ಣಯಕ್ಕೆ ಅಂಗೀಕಾರ, ಭಾರತ ತೆಗೆದುಕೊಂಡ ನಿಲುವು ಇದು title=
Ukraine War (File Photo)

ಜಿನೇವಾ / ಸಂಯುಕ್ತ ರಾಷ್ಟ್ರ : UNHRC Resolution Against Russia - ಉಕ್ರೇನ್ ವಿರುದ್ಧ ರಷ್ಯಾದ ಮಿಲಿಟರಿ ಕ್ರಮದ ಹಿನ್ನೆಲೆ ತಕ್ಷಣವೇ ಸ್ವತಂತ್ರ ಅಂತರಾಷ್ಟ್ರೀಯ ತನಿಖಾ ಆಯೋಗವನ್ನು ಸ್ಥಾಪಿಸಲು ನಿರ್ಧರಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ಮತದಾನ ಪ್ರಕ್ರಿಯೆಯಿಂದ ಭಾರತ ಶುಕ್ರವಾರ ದೂರ ಉಳಿದಿದೆ.

ಈ ದೇಶಗಳು ವೋಟಿಂಗ್ ನಿಂದ ದೂರ ಉಳಿದಿವೆ
47 ಸದಸ್ಯರ UN ಕೌನ್ಸಿಲ್ ನಲ್ಲಿ ಉಕ್ರೇನ್‌ನಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಕರಡು ನಿರ್ಣಯದ ಮೇಲೆ ಮತದಾನ ಪ್ರಕ್ರಿಯೆ ನಡೆದಿದೆ. ಪ್ರಸ್ತಾವನೆಗೆ ಅಂಗೀಕಾರ ಕೂಡ ದೊರೆತಿದೆ. ನಿರ್ಣಯದ ಪರವಾಗಿ 32 ಮತಗಳು ಚಲಾವಣೆಯಾದರೆ, ಅದರ ವಿರುದ್ಧ ಎರಡು ಮತಗಳು (ರಷ್ಯಾ ಮತ್ತು ಎರಿಟ್ರಿಯಾ) ಚಲಾವಣೆಯಾಗಿವೆ, ಆದರೆ ಭಾರತ, ಚೀನಾ, ಪಾಕಿಸ್ತಾನ, ಸುಡಾನ್ ಮತ್ತು ವೆನೆಜುವೆಲಾ ಸೇರಿದಂತೆ 13 ದೇಶಗಳು ಈ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ.

ಪ್ರಸ್ತಾವನೆಯ ಪರವಾಗಿ ಮತ ಚಲಾಯಿಸಿದ ದೇಶಗಳು
ನಿರ್ಣಯದ ಪರವಾಗಿ ಮತ ಚಲಾಯಿಸಿದ ದೇಶಗಳಲ್ಲಿ ಫ್ರಾನ್ಸ್, ಜರ್ಮನಿ, ಜಪಾನ್, ನೇಪಾಳ, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಶಾಮೀಲಾಗಿವೆ. "ಉಕ್ರೇನ್ ವಿರುದ್ಧ ರಷ್ಯಾದ ಮಿಲಿಟರಿ ಕ್ರಮದ ಹಿನ್ನೆಲೆ ಮಾನವ ಹಕ್ಕುಗಳ ಮಂಡಳಿಯು ತಕ್ಷಣವೇ ಸ್ವತಂತ್ರ ಅಂತರಾಷ್ಟ್ರೀಯ ತನಿಖಾ ಆಯೋಗ ಸ್ಥಾಪಿಸಲು ನಿರ್ಧರಿಸಿದೆ" ಎಂದು ಕೌನ್ಸಿಲ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.

ಇದನ್ನೂ ಓದಿ-Pakistan Blast: ಪೇಷಾವರ್ ಮಸೀದಿಯಲ್ಲಿ ಭಾರಿ ಬಾಂಬ್ ವಿಸ್ಫೋಟ, 30 ಜನರ ಸಾವು, 50 ಮಂದಿಗೆ ಗಾಯ

ನಿರ್ಣಯವನ್ನು ಸ್ವಾಗತಿಸಿದ ಜಲೆನ್ಸ್ಕಿ
ಮತದಾನ ಪ್ರಕ್ರಿಯೆಯ ನಂತರ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷರು, 'ಉಕ್ರೈನ್ ವಿರುದ್ಧ ರಷ್ಯಾದ ಯುದ್ಧಾಪರಾಧಗಳ ಸತ್ಯಾಸತ್ಯತೆಗಳನ್ನು ತನಿಖೆ ಮಾಡಲು ಅಂತಾರಾಷ್ಟ್ರೀಯ ತನಿಖಾ ಆಯೋಗದ UN ಮಾನವ ಹಕ್ಕುಗಳ ಮಂಡಳಿ ಸ್ಥಾಪನೆಯನ್ನು ನಾನು ಸ್ವಾಗತಿಸುತ್ತೇನೆ' ಎಂದು ಹೇಳಿದ್ದಾರೆ. 

ಇದನ್ನೂ ಓದಿ-ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ತಗುಲಿದ ಗುಂಡು , ಕೈವ್‌ನ ಆಸ್ಪತ್ರೆಗೆ ದಾಖಲು

ಭಾರತದ ನಿಲುವು
ಕಳೆದ ಒಂದು ವಾರದಲ್ಲಿ 15 ದೇಶಗಳ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ಕುರಿತ ಎರಡು ನಿರ್ಣಯಗಳನ್ನು ಮತ್ತು 193 ಸದಸ್ಯರ ಸಾಮಾನ್ಯ ಸಭೆಯಲ್ಲಿ ಒಂದು ನಿರ್ಣಯದಲ್ಲಿ ಭಾರತವು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದೆ. ಬುಧವಾರ 193 ಸದಸ್ಯರ ಸಾಮಾನ್ಯ ಸಭೆಯು ಉಕ್ರೇನ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಲು ಮತ ಚಲಾಯಿಸಿದೆ ಮತ್ತು ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು "ಬಲವಾಗಿ ಖಂಡಿಸಲಾಗಿದೆ". ಮಾಸ್ಕೋ ತನ್ನ ಎಲ್ಲಾ ಮಿಲಿಟರಿ ಪಡೆಗಳನ್ನು ಉಕ್ರೇನ್ ಪ್ರದೇಶದಿಂದ 'ಸಂಪೂರ್ಣವಾಗಿ ಮತ್ತು ಬೇಷರತ್ತಾಗಿ' ಹಿಂತೆಗೆದುಕೊಳ್ಳಬೇಕೆಂದು ಅದು ಒತ್ತಾಯಿಸಿದೆ.

ಇದನ್ನೂ ಓದಿ-ರಷ್ಯಾ ದಾಳಿಯಿಂದ ಯುಕ್ರೇನ್ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಲ್ಲಿ ಕಾಣಿಸಿಕೊಂಡ ಬೆಂಕಿ : ಇಲ್ಲಿದೆ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News