ಜಿನೀವಾ : ಅಸಮಾನವಾದ ಕೋವಿಡ್ -19 ಲಸಿಕೆ ನೀತಿ (Covid -19 Vaccine Policy)ಗಳಿಂದಾಗಿ ಜಗತ್ತು ದುರಂತದ ನೈತಿಕ ವೈಫಲ್ಯ'ವನ್ನು ಎದುರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organisation) ಮುಖ್ಯಸ್ಥರು ಎಚ್ಚರಿಸಿದ್ದಾರೆ. 


COMMERCIAL BREAK
SCROLL TO CONTINUE READING

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಶ್ರೀಮಂತ ರಾಷ್ಟ್ರಗಳಲ್ಲಿನ ಆರೋಗ್ಯವಂತ ಜನರು ಬಡ ರಾಜ್ಯಗಳಲ್ಲಿ ದುರ್ಬಲ ಜನರ ಮುಂದೆ ಚುಚ್ಚುಮದ್ದು ಪಡೆಯುವುದು ನ್ಯಾಯವಲ್ಲ ಎಂದು ಹೇಳಿರುವುದನ್ನು ಬಿಬಿಸಿ (BBC) ವರದಿ ಮಾಡಿದೆ.


49 ಶ್ರೀಮಂತ ರಾಜ್ಯಗಳಲ್ಲಿ 39 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ (Vaccine) ಪ್ರಮಾಣವನ್ನು ನೀಡಲಾಗಿದೆ. ಬಡ ರಾಷ್ಟ್ರಗಳಲ್ಲಿ ಕೇವಲ 25 ಪ್ರಮಾಣವನ್ನು ಮಾತ್ರ ಹೊಂದಿದೆ‌ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ - ಬ್ರಿಟನ್‌ನಲ್ಲಿ ಹೈ ಸ್ಪೀಡ್ Corona ಹಾವಳಿ : ಪ್ರತಿ 30 ಸೆಕೆಂಡಿಗೆ ಓರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲು


ವಿಶ್ವ ಆರೋಗ್ಯ ಸಂಸ್ಥೆ ನಿಯೋಜಿಸಿದ ಸ್ವತಂತ್ರ ಸಮಿತಿಯಾದ ಯುಎನ್ (United Nations) ಸಾರ್ವಜನಿಕ ಆರೋಗ್ಯ ಸಂಸ್ಥೆಯು ಈ ಮೊದಲು ಅಂತರರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕಾಗಿತ್ತು ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಶೀಘ್ರವಾಗಿ ತೆಗೆದುಕೊಳ್ಳದ ಕಾರಣಕ್ಕಾಗಿ ಚೀನಾವನ್ನು ದೂಷಿಸಿತ್ತು.


ಇಲ್ಲಿಯವರೆಗೆ ಚೀನಾ (China), ಭಾರತ (India) ರಷ್ಯಾ (Russia), ಯುಕೆ (UK) ಮತ್ತು ಯುಎಸ್ (US) ದೇಶಗಳು ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸಿವೆ. ಈ ಎಲ್ಲಾ ರಾಷ್ಟ್ರಗಳು ತಮ್ಮದೇ ದೇಶಸ ಜನರಿಗೆ ಲಸಿಕೆ ವಿತರಣೆ ಮಾಡಲು ಆದ್ಯತೆ ನೀಡಿವೆ. ಸೋಮವಾರ ವಿಶ್ವ ಆರೋಗ್ಯ ಸಂಸ್ಥೆ ಕಾರ್ಯನಿರ್ವಾಹಕ ಮಂಡಳಿ ಅಧಿವೇಶನದಲ್ಲಿ ಮಾತನಾಡಿದ ಟೆಡ್ರೊಸ್, "ನಾನು ಮೊಂಡತನ ತೋರಬೇಕಿತ್ತು: ಜಗತ್ತು ದುರಂತದ ನೈತಿಕ ವೈಫಲ್ಯದ ಅಂಚಿನಲ್ಲಿದೆ - ಈ ವೈಫಲ್ಯದ ಬೆಲೆಯನ್ನು ಜಗತ್ತಿನ ಬಡ ದೇಶದ ಜನ ತೆತ್ತಬೇಕಾಗಿದೆ' ಎಂದರು.


ಇದನ್ನೂ ಓದಿ - Good News : ದೇಶವಾಸಿಗಳಿಗೆ ಶೀಘ್ರದಲ್ಲೇ ಸಿಗಲಿದೆ ಇನ್ನೂ 4 Corona vaccine


ಟೆಡ್ರೊಸ್ "ಮಿ-ಫಸ್ಟ್" (Me-First) ವಿಧಾನವು ಸ್ವಯಂ-ಸೋಲಿಸುವಂತಹುದು. ಏಕೆಂದರೆ ಅದು ಬೆಲೆಗಳನ್ನು ಹೆಚ್ಚಿಸುತ್ತದೆ ಮತ್ತು ಹೋರ್ಡಿಂಗ್ (Hording) ಅನ್ನು ಉತ್ತೇಜಿಸುತ್ತದೆ. "ಅಂತಿಮವಾಗಿ ಈ ಕ್ರಮಗಳು ಮಾನವ ಮತ್ತು ಆರ್ಥಿಕ ಸಂಕಷ್ಟಗಳನ್ನು ಮಾತ್ರ ಹೆಚ್ಚಿಸುತ್ತದೆ" ಎಂದು ಅವರು ಹೇಳಿದರು.


ಮುಂದಿನ ತಿಂಗಳು ಪ್ರಾರಂಭವಾಗಲಿರುವ ಜಾಗತಿಕ ಲಸಿಕೆ ಹಂಚಿಕೆ ಯೋಜನೆ ಕೊವಾಕ್ಸ್‌ಗೆ (Covaxin) ಸಂಪೂರ್ಣ ಬದ್ಧತೆ ನೀಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಕರೆ ನೀಡಿದರು. "ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ (World Health Day) ಬರುವ ಹೊತ್ತಿಗೆ ಪ್ರತಿ ದೇಶದಲ್ಲಿ ಕೋವಿಡ್ -19 ಲಸಿಕೆ (Covid 19 Vaccine) ಗಳನ್ನು ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಎಂದು ಟೆಡ್ರೊಸ್ ಹೇಳಿದರು.


ಇಲ್ಲಿಯವರೆಗೆ 180ಕ್ಕೂ ಹೆಚ್ಚು ದೇಶಗಳು ಕೋವಾಕ್ಸ್ ಉಪಕ್ರಮಕ್ಕೆ ಸಹಿ ಹಾಕಿವೆ. ಇದನ್ನು WHO ಮತ್ತು ಅಂತರರಾಷ್ಟ್ರೀಯ ಲಸಿಕೆ ವಕಾಲತ್ತು ಗುಂಪುಗಳ ಗುಂಪು ಬೆಂಬಲಿಸುತ್ತದೆ. ಔಷಧಿ ಕಂಪನಿಗಳೊಂದಿಗೆ ಮಾತುಕತೆ ನಡೆಸಲು ಅವರಿಗೆ ಹೆಚ್ಚಿನ ಅಧಿಕಾರವಿರುವುದರಿಂದ ದೇಶಗಳನ್ನು ಒಂದೇ ಬಣಕ್ಕೆ ಒಗ್ಗೂಡಿಸುವುದು ಇದರ ಉದ್ದೇಶ ಎಂದರು.


ಇದನ್ನೂ ಓದಿ - ಲಸಿಕೆ ಪಡೆದ ಬಳಿಕ Manipal Hospital ಚೇರಮನ್ ಡಾ. ಸುದರ್ಶನ್ ಬಲ್ಲಾಳ್ ಪ್ರತಿಕ್ರಿಯೆ ಏನು?


92 ದೇಶಗಳು - ಕಡಿಮೆ ಅಥವಾ ಮಧ್ಯಮ ಆದಾಯವಿರುವ ದೇಶಗಳು ಪ್ರಾಯೋಜಿಸಿದ ನಿಧಿಯಿಂದ ಲಸಿಕೆಗಳನ್ನು ನೀಡಿವೆ. "ನಾವು 5 ಉತ್ಪಾದಕ ಸಂಸ್ಥೆಗಳಿಂದ 2 ಬಿಲಿಯನ್ ಡೋಸ್‌ಗಳನ್ನು ಪಡೆದುಕೊಂಡಿದ್ದೇವೆ. ಒಂದು ಬಿಲಿಯನ್‌ಗಿಂತ ಹೆಚ್ಚಿನ ಡೋಸ್‌ಗಳ ಆಯ್ಕೆಗಳನ್ನು ಹೊಂದಿದ್ದೇವೆ. ಫೆಬ್ರವರಿಯಲ್ಲಿ ವಿತರಣೆಯನ್ನು ಪ್ರಾರಂಭಿಸುವ ಗುರಿ ಹೊಂದಿದ್ದೇವೆ" ಎಂದು ಟೆಡ್ರೊಸ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.