Anushree : ನನ್ನ ಪ್ರೀತಿಯ ಮುದ್ದು ಕಳೆದು ಹೋಗಿದೆ ಸಹಾಯ ಮಾಡಿ : ನಿರೂಪಕಿ ಅನುಶ್ರೀ

ಕನ್ನಡ ಖ್ಯಾತ  ಟಿವಿ ನಿರೂಪಕಿ ಅನುಶ್ರೀ ಪ್ರಾಣಿ ಪ್ರೇಮಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಕಳೆದ ಎರಡು ದಿನಗಳಿಂದ ಅನುಶ್ರೀಯ ಮುದ್ದಿನ ನಾಯಿಯೊಂದು ಕಳೆದು ಹೋಗಿದೆ ಎಂಬ ದುಃಖದಲ್ಲಿದ್ದಾರೆ. 

Written by - Zee Kannada News Desk | Last Updated : Feb 22, 2023, 03:26 PM IST
  • ಕನ್ನಡ ಖ್ಯಾತ ಟಿವಿ ನಿರೂಪಕಿ ಅನುಶ್ರೀ
  • ಅನುಶ್ರೀಯ ಮುದ್ದಿನ ನಾಯಿಯೊಂದು ಕಳೆದು ಹೋಗಿದೆ
  • ಪ್ರೀತಿಯ ಮುದ್ದು .. ಕಳೆದ ಎರಡು ದಿನಗಳಿಂದ ಮಿಸ್ ಆಗಿದ್ದಾನೆ
Anushree : ನನ್ನ ಪ್ರೀತಿಯ ಮುದ್ದು ಕಳೆದು ಹೋಗಿದೆ ಸಹಾಯ ಮಾಡಿ : ನಿರೂಪಕಿ ಅನುಶ್ರೀ  title=

ಕನ್ನಡ ಖ್ಯಾತ  ಟಿವಿ ನಿರೂಪಕಿ ಅನುಶ್ರೀ ಪ್ರಾಣಿ ಪ್ರೇಮಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಕಳೆದ ಎರಡು ದಿನಗಳಿಂದ ಅನುಶ್ರೀಯ ಮುದ್ದಿನ ನಾಯಿಯೊಂದು ಕಳೆದು ಹೋಗಿದೆ ಎಂಬ ದುಃಖದಲ್ಲಿದ್ದಾರೆ. 

" ಈ ಬಗ್ಗೆ ಅನುಶ್ರೀ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದು, 'ನಾನು ಸಹಾಯ ಕೇಳಿದ್ದು ಅಪರೂಪ ಎಂದು ಭಾವಿಸುವೆ.. ಆದ್ರೆ ದಯಮಾಡಿ ಸಹಾಯ ಮಾಡಿ.. ಇವನು ಚಾರ್ಲ್ಜ್ (Charlzi ) ಅಂತ ನನ್ನ ಹಾಗು ನಮ್ಮ ಕಂಠೀರವ ಸ್ಟುಡಿಯೋ ಪ್ರೀತಿಯ ಮುದ್ದು .. ಕಳೆದ ಎರಡು ದಿನಗಳಿಂದ ಮಿಸ್ ಆಗಿದ್ದಾನೆ... ಯಾರೋ ತಗೊಂಡು ಹೋದ್ರು ಅಂತ ಕೂಡ ಹೇಳ್ತಿದ್ದಾರೆ. ದಯವಿಟ್ಟು ಸಹಾಯ ಮಾಡಿ, ಕಂಠೀರವ ಸ್ಟುಡಿಯೋ  ಹತ್ತಿರ ಯಾರಾದರೂ ಇವನನ್ನು ನೋಡಿದ್ರೆ 9886946822 ಈ ಸಂಖ್ಯೆಗೆ ಪ್ಲೀಸ್ ಕರೆ ಮಾಡಿ ಅಥವಾ ಸ್ಟುಡಿಯೋ ಕರೆತಂದರು ಓಕೆ.. ಇವನಿಲ್ಲದೆ ಎಲ್ಲರಿಗೂ ನೋವಾಗಿದೆ… ಪ್ಲೀಸ್ ಸಹಾಯ ಮಾಡಿ, ಅವನ ಬಾಯಿ ಮೇಲೆ ಬಿಳಿ ಕಲೆ ಇದೆ...' ಎಂದು ಬರೆದುಕೊಂಡಿದ್ದಾರೆ. "

ಇದನ್ನೂ ಓದಿ-Darshan : ದಚ್ಚು ʼಈ ಗುಣʼವೇ ಫ್ಯಾನ್ಸ್‌ಗೆ ತುಂಬಾ ಇಷ್ಟವಂತೆ..!

ಅನುಶ್ರೀ ಕನ್ನಡ ಸಿನಿರಂಗದಲ್ಲಿ ಕಿರುತೆರೆ ನಿರೂಪಕಿಯಾಗಿ ಮತ್ತು ಚಿತ್ರನಟಿಯಾಗಿ ಸಕ್ರಿಯರಾಗಿದ್ದಾರೆ. ಮಂಗಳೂರಿನ ತುಳು ಕುಟುಂಬದಲ್ಲಿ ಜನಸಿದ ಇವರು `ಟೆಲಿ ಅಂತ್ಯಾಕ್ಷರಿ' ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಸಿನಿಪಯಣ ಆರಂಭಿಸಿದರು.ಈ ಟಿವಿ ಕನ್ನಡ ವಾಹಿನಿಯ `ಡಿಮಾಂಡೆಪ್ಪೋ ಡಿಮಾಂಡು' ಕಾರ್ಯಕ್ರಮದ ಮೂಲಕ ಮನೆಮಾತಾದ ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದರು.ನಂತರ `ಬೆಂಕಿಪಟ್ಣ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು.

ಇವರು 2011 ರಲ್ಲಿ ತೆರೆಕಂಡ `ಮುರಳಿ ಮೀಟ್ಸ್ ಮೀರಾ' ಚಿತ್ರದ ಡಬ್ಬಿಂಗ್ ಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ 2015 ರಲ್ಲಿ ಜೀ ಕನ್ನಡದ ಪಾಪುಲರ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ. ಜೀ ಕನ್ನಡದ `ಸರಿಗಮಪ' ರಿಯಾಲಿಟಿ ಶೋ ಕಾರ್ಯಕ್ರಮದ ಹಲವು ಸೀಸನ್ ಗಳನ್ನು ಯಶಸ್ವಿ ನಿರೂಪಣೆ ಮಾಡಿದ್ದಾರೆ.  

ಇದನ್ನೂ ಓದಿ-ಮತ್ತೆ ರಾಜಕೀಯಕ್ಕೆ ಧುಮುಕಿದ ಹಿರಿಯ ನಟ ಅನಂತ್‌ನಾಗ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News