Sai Pallavi: ನಾನು ಪಿರಿಯಡ್ಸ್‌ ಅದಾಗ್ಲೆ ಹೆಚ್ಚು ಡಾನ್ಸ್‌ ಮಾಡಿದ್ದು..! ಸಾಯಿ ಪಲ್ಲವಿ ಹೇಳಿಕೆ ವೈರಲ್‌

Sai Pallavi : ನೃತ್ಯದ ಮೂಲಕವೇ ಗುರುತಿಸಿಕೊಂಡಿದ್ದ ಸಾಯಿ ಪಲ್ಲವಿ ಪ್ರೇಮಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದೀಗ ಅವರು ಶೂಟಿಂಗ್‌ ಸಮಯದಲ್ಲಾದ ಸಂಗತಿ ಕುರಿತು ಮುಕ್ತವಾಗಿ ಮಾತನಾಡಿದ್ದು, ಅವರ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Mar 15, 2024, 02:04 PM IST
    • ಸಾಯಿ ಪಲ್ಲವಿ ನಟಿಯಾಗುವ ಮೊದಲು ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದರು.
    • ನಟನೆ ಸೌಂದರ್ಯದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ.
    • ಪಲ್ಲವಿ ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
 Sai Pallavi: ನಾನು ಪಿರಿಯಡ್ಸ್‌ ಅದಾಗ್ಲೆ ಹೆಚ್ಚು ಡಾನ್ಸ್‌ ಮಾಡಿದ್ದು..! ಸಾಯಿ ಪಲ್ಲವಿ ಹೇಳಿಕೆ ವೈರಲ್‌ title=
Sai pallavi

Sai Pallavi on periods : ಬಹುಭಾಷಾ ನಟಿ ಸಾಯಿ ಪಲ್ಲವಿ ಬಗ್ಗೆ ಹೆಚ್ಚಾಗಿ ಪರಿಚಯಿಸುವ ಅಗತ್ಯವಿಲ್ಲ. ತಮ್ಮ ನಟನೆ ಸೌಂದರ್ಯದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಒಂದೂ ಸಿನಿಮಾ ಮಾಡದ ನಟಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಸಧ್ಯ ಪಲ್ಲವಿ ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಪ್ಯಾನ್ಸ್‌ ಶಾಕ್‌ ಆಗಿದ್ದಾರೆ.

ಹೌದು.. ಸಾಯಿ ಪಲ್ಲವಿ ನಟಿಯಾಗುವ ಮೊದಲು ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದರು. ಅವರ ನೃತ್ಯಕ್ಕೆ ಸಾಕಷ್ಟು ಜನ ಫ್ಯಾನ್ಸ್‌ ಫಾಲೋಯಿಂಗ್‌ ಇದೆ. ಡಾನ್ಸ್‌ ರಿಯಾಲಿಟಿ ಶೋ ವಿನ್ನರ್ ಕೂಡಾ ಹೌದು. ನೃತ್ಯದ ಮೂಲಕವೇ ಗುರುತಿಸಿಕೊಂಡಿದ್ದ ಸಾಯಿ ಪಲ್ಲವಿ ಪ್ರೇಮಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 

ಇದನ್ನೂ ಓದಿ: ತಾಜಾ ಸುದ್ದಿಯ ಲಿರಿಕಲ್ ವೀಡಿಯೋ ಮೂಲಕ ನಿಗಿನಿಗಿಸಿತು ಗಂಟುಮೂಟೆ ತಂಡದ `ಕೆಂಡ!

ಮಲರ್‌ ಎಂಬ ಟೀಚರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪಲ್ಲವಿಗೆ ಸಿನಿ ಪ್ರೇಕ್ಷಕ ಫಿದಾ ಆಗಿದ್ದರು. ಇನ್ನು ನಟಿ ಇತ್ತೀಚಿಗಷ್ಟೇ ತಮ್ಮ ಮುಟ್ಟಿನ ಕುರಿತು ಮಾತನಾಡುತ್ತ, ಮುಟ್ಟಿನ ವೇಳೆಯಲ್ಲಿಯೂ ತಾವು ಹಲವು ಸಿನಿಮಾದ ಸಾಂಗ್‌ಗಳಿಗೆ ಡಾನ್ಸ್‌ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. 

ಆದರೆ ಶ್ಯಾಮ್ ಸಿಂಗ್ ರಾಯ್ ಸಿನಿಮಾದ ಹಾಡೊಂದನ್ನು ಬಿಟ್ಟು, ಬಹುತೇಕ ಎಲ್ಲ ಸಿನಿಮಾಗಳ ಸಾಂಗ್ ಶೂಟಿಂಗ್ ಸಮಯದಲ್ಲಿ ಪರಿಯಡ್ಸ್‌ ಆಗಿತ್ತು. ಅದರ ನಡುವೆಯೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗಿ ಸಾಯಿ ಪಲ್ಲವಿ ತಿಳಿಸಿದ್ದಾರೆ. ಇದನ್ನು ಕೇಳಿ ಅವರ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ರಮ್ಯಾ ಕೃಷ್ಣನ್‌ ಫ್ಯಾಮಿಲಿಯಲ್ಲಿ ಅವರೊಬ್ಬರೆ ಬ್ಯೂಟಿ ಕ್ವೀನ್‌ ಅಲ್ಲ.. ಸಹೋದರಿಯೂ ಅತಿಲೋಕ ಸುಂದರಿ!

ಸದ್ಯ ನಟಿ ಬಾಲಿವುಡ್​ನ ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ನಟ ರಣಬೀರ್‌ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪಲ್ಲವಿ ಸೀತೆಯಾಗಿ ಅಭಿನಯಿಸಲಿದ್ದಾರೆ. ಅಲ್ಲದೆ, ರಾಕಿಂಗ್‌ ಸ್ಟಾರ್‌ ಯಶ್‌ ರಾವಣ ಪಾತ್ರವನನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News