ಸರ್ಕಾರ ಬೀಳಿಸಲು ಆಗಲ್ಲ, ಹೆಚ್ಚು ಕಡಿಮೆ ಆದ್ರೆ ಬಿಜೆಪಿ, ದಳನೇ ಇರಲ್ಲ: ಶಾಸಕ ಪುಟ್ಟರಂಗಶೆಟ್ಟಿ

ರಾತ್ರಿ ಕಂಡ ಬಾವಿಗೆ ಯಾರೂ ಸಹ ಹಗಲಲ್ಲಿ ಬೀಳಲ್ಲ, ಬಿಜೆಪಿ ಕುತಂತ್ರ ಈಗಾಗಲೇ ಜಗಜ್ಜಾಹೀರಾಗಿದೆ, ಹೆಚ್ಚು ಕಡಿಮೆ ಆದರೆ ಬಿಜೆಪಿನೂ ಬಿದ್ದೋಗತ್ತೆ, ದಳನೂ ಇರಲ್ಲಾ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ನುಡಿದರು. 

Written by - Yashaswini V | Last Updated : Jul 25, 2023, 04:56 PM IST
ಸರ್ಕಾರ ಬೀಳಿಸಲು ಆಗಲ್ಲ, ಹೆಚ್ಚು ಕಡಿಮೆ ಆದ್ರೆ ಬಿಜೆಪಿ, ದಳನೇ ಇರಲ್ಲ: ಶಾಸಕ  ಪುಟ್ಟರಂಗಶೆಟ್ಟಿ title=

ಚಾಮರಾಜನಗರ: ಆಪರೇಷನ್ ಕಮಲದ ಬಗ್ಗೆ ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ  ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ನನಗೆ ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲಾ, ಆದರೆ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಚಾಮರಾಜನಗರದಲ್ಲಿ ಇಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ,   ರಾತ್ರಿ ಕಂಡ ಬಾವಿಗೆ ಯಾರೂ ಸಹ ಹಗಲಲ್ಲಿ ಬೀಳಲ್ಲ, ಬಿಜೆಪಿ ಕುತಂತ್ರ ಈಗಾಗಲೇ ಜಗಜ್ಜಾಹೀರಾಗಿದೆ, ಹೆಚ್ಚು ಕಡಿಮೆ ಆದರೆ ಬಿಜೆಪಿನೂ ಬಿದ್ದೋಗತ್ತೆ, ದಳನೂ ಇರಲ್ಲಾ ಎಂದು ನುಡಿದರು. 

ಇದನ್ನೂ ಓದಿ- ಬಿಜೆಪಿ ನಾಯಕರು ಮನೆಯಲ್ಲಿ ಕಂಬಳಿ ಹೊದ್ದು ಮಲಗುವುದು ಒಳಿತು: ಕಾಂಗ್ರೆಸ್ ವ್ಯಂಗ್ಯ

ಇದೇ ಸಂದರ್ಭದಲ್ಲಿ ಮುಂಗಾರು ಮಳೆ ಕೈಗೊಟ್ಟಿರುವ ಬಗ್ಗೆಯೂ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕಡಿಮೆ ಆಗಿದೆ. ಹಲವು ಭಾಗಗಳಲ್ಲಿ ಕೊಂಚ ತಡವಾಗಿ ಮುಂಗಾರು ಆರಂಭವಾಗಿದೆ. ಆದಾಗ್ಯೂ, ಈಗ ಬೀಳುತ್ತಿರುವ ಮಳೆಯಿಂದಲೂ ಬೆಳೆ ಕೈ ಸೇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಇದನ್ನೂ ಓದಿ- ರಾಜ್ಯದಲ್ಲಿ ಶ್ಯಾಡೋ ಸಿಎಂ ಯತೀಂದ್ರರ ವರ್ಗಾವಣೆ ದಂಧೆ ಮಿತಿ ಮೀರುತ್ತಿದೆ: ಬಿಜೆಪಿ ಆಕ್ರೋಶ

ಇದೇ ವೇಳೆ, ಮೈಸೂರು ಹಾಗೂ ಚಾಮರಾಜನಗರಗಳಲ್ಲಿ ಸಾಮಾನ್ಯಕ್ಕಿಂತ 20% ಮಳೆ ಕಡಿಮೆಯಾಗಿದ್ದು ಈ ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕೆಂದು ಕಂದಾಯ ಸಚಿವ ಕೃಷ್ಣಬೈರೇಗೌಡಗೆ ಮನವಿ ಮಾಡಿರುವುದಾಗಿಯೂ ಮಾಹಿತಿ ನೀಡಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News