108 ಆಂಬ್ಯೂಲೆನ್ಸ್ ಕಿರಿಕ್‌ಗೆ ಇನ್ಮುಂದೆ ಬೀಳುತ್ತೆ ಬ್ರೇಕ್ : ಆರೋಗ್ಯ ಸಚಿವರ ದಿಟ್ಟ ಹೆಜ್ಜೆ

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಆರೋಗ್ಯ ಕವಚ 108 ಅನುಷ್ಠಾನಕ್ಕಾಗಿ ತಾಂತ್ರಿಕ ಸಮಿತಿ ರಚನೆಗೆ ಮಾಡಲಾಗಿದೆ. 108 ಆರೋಗ್ಯ ಕವಚ ಹಾಗೂ 104  ಆರೋಗ್ಯ ಸಹಾಯವಾಣಿ ಯೋಜನೆಗಳ ಉನ್ನತ್ತೀಕರಣ ಹಾಗು ಮಾರ್ಗದರ್ಶನಕ್ಕೆ ಈ ಸಮಿತಿ ರಚಿಸಲಾಗಿದೆ.

Written by - Krishna N K | Last Updated : Jul 22, 2023, 06:01 PM IST
  • ರಾಜ್ಯದಲ್ಲಿನ ಆರೋಗ್ಯ ಸೇವೆ ಸುಧಾರಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದಿಟ್ಟ ಹೆಜ್ಜೆ.
  • ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
  • 108 ಆಂಬ್ಯೂಲೆನ್ಸ್ ಕಿರಿಕ್‌ಗೆ ಬ್ರೇಕ್ ಹಾಕಲು ಹೊಸ ಯೋಜನೆ ರೂಪಿಸಿದೆ.
108 ಆಂಬ್ಯೂಲೆನ್ಸ್ ಕಿರಿಕ್‌ಗೆ ಇನ್ಮುಂದೆ ಬೀಳುತ್ತೆ ಬ್ರೇಕ್ : ಆರೋಗ್ಯ ಸಚಿವರ ದಿಟ್ಟ ಹೆಜ್ಜೆ title=

ಬೆಂಗಳೂರು : ರಾಜ್ಯದಲ್ಲಿನ ಆರೋಗ್ಯ ಸೇವೆ ಸುಧಾರಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ  ಮುಂದಾಗಿದ್ದು, 108 ಆಂಬ್ಯೂಲೆನ್ಸ್ ಕಿರಿಕ್‌ಗೆ ಬ್ರೇಕ್ ಹಾಕಲು ಹೊಸ ಯೋಜನೆ ರೂಪಿಸಿದೆ.

ರಾಜ್ಯದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಮತ್ತು 108 ಆಂಬ್ಯೂಲೆನ್ಸ್ ಕಿರಿಕ್‌ಗೆ ಬ್ರೇಕ್ ಹಾಕಲು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಆರೋಗ್ಯ ಕವಚ 108 ಅನುಷ್ಠಾನಕ್ಕಾಗಿ ತಾಂತ್ರಿಕ ಸಮಿತಿ ರಚನೆಗೆ ಮಾಡಲಾಗಿದೆ. 108 ಆರೋಗ್ಯ ಕವಚ ಹಾಗೂ 104  ಆರೋಗ್ಯ ಸಹಾಯವಾಣಿ ಯೋಜನೆಗಳ ಉನ್ನತ್ತೀಕರಣ ಹಾಗು ಮಾರ್ಗದರ್ಶನಕ್ಕೆ ಈ ಸಮಿತಿ ರಚಿಸಲಾಗಿದೆ.

ಇದನ್ನೂ ಓದಿ: ದುರ್ಯೋಧನ ಪಾರ್ಟ್ ಹಾಕಿದ್ದ ಸಿದ್ದರಾಮಯ್ಯ ಗಂಡನ ಜೇಬಿನಿಂದ ಹಣ ತೆಗೆದು ಹೆಂಡತಿಗೆ ಕೊಡ್ತಿದ್ದಾರೆ: ಎನ್.ಮಹೇಶ್

ಡಾ ಜಿ ಗುರುರಾಜ್, ನಿಮ್ಹಾನ್ಸ್ ಪ್ರಭಾರ ನಿರ್ದೇಶಕರು ಹಾಗೂ ಐಐಐಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದೆ. ಆರೋಗ್ಯ ಸೇವೆಗಳ ಟಂಡರ್ ನ್ಯೂನತೆ ಲೋಪದೋಷ ಅಧ್ಯಯನಕ್ಕೆ ಸರ್ಕಾರ ಮುಂದಾಗಿದ್ದು, ಟೆಂಡರ್ ನ್ಯೂನತೆ ಲೋಪದೋಷ ಅಧ್ಯಯನ ಹಾಗೂ ಸಲಹೆ ನೀಡಲು ತಜ್ಞರ ಸಲಹಾ ಸಮಿತಿ ರಚಿಸಲಾಗಿದೆ.

ಇನ್ನು ಆರೋಗ್ಯ ಇಲಾಖೆಯ ಮೇಜರ್ ಸರ್ಜರಿಗೆ ಮುಂದಾಗಿರುವ ಸರ್ಕಾರ ಹಳೆಯ ಸರ್ಕಾರದ GVK ಟೆಂಡರ್ ಗೆ ಕೊಕ್ ಕೊಟ್ಟಿದೆ. GVK ಸಂಸ್ಥೆಯ ವಿರುದ್ಧ ಸಾಲು ಸಾಲು ಆರೋಪಗಳು ಹಾಗೂ ದೂರು ಬಂದ ಹಿನ್ನಲೆ ಜಿವಿಕೆ ಟೆಂಡರ್ ಕೈಬಿಡಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ಆರೋಗ್ಯ ಕವಚ ಅಡಿಯಲ್ಲಿನ 108 ಆಂಬ್ಯೂಲೆನ್ಸ್ ಸೇವೆಗೆ ಟೆಂಡರ್ ಕರೆಯಲಾಗಿತ್ತು, ಈ ಟೆಂಡರ್ ನಲ್ಲಿಯೂ ಜಿವಿಕೆ ತರೆ ಹಿಂದಿನಿಂದ ಭಾಗವಹಿಸಿತ್ತು. ಆದ್ರೆ ಈಗ ಟೆಂಡರ್ ಪ್ರಕ್ರಿಯನ್ನು ಸರ್ಕಾರ ಕೈ ಬಿಟ್ಟಿದೆ. 

ಇದನ್ನೂ ಓದಿ: ಜನರ ತಲೆ ಮೇಲೆ ಫ್ಲವರ್ ಪಾಟ್ ಇಟ್ಟ ಕಾಂಗ್ರೆಸ್..ಹಾಲಿನ ಬೆಲೆ ಏರಿಕೆಗೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಅಲ್ಲದೆ, ಟೆಂಡರ್ ಪ್ರಕ್ರಿಯೇ ಖರೀದಿಯಲ್ಲಿನ ವಿಧಾನ, ಟೆಂಡರ್ ಪ್ಲೋಟೀಂಗ್ ನಲ್ಲಿನ ನ್ಯೂನತೆ, ಆಕ್ಷಪಣೆಗಳು, ತಾಂತ್ರಿಕ ದೋಷ, ಪರಿಶೀಲಿಸಿ ಉತ್ತಮ ಸೇವೆ ನೀಡಲು ಸಮಿತಿ ರಚನೆ ಮಾಡಲಾಗಿದೆ. ಉತ್ತಮ ಆರೋಗ್ಯ ಸೇವೆಗೆ ಯಾವ ರೀತಿಯ ಸೌಲಭ್ಯ ? ಏನೆಲ್ಲ ತಂತ್ರಜ್ಞಾನ  ಇರಬೇಕು ..?  ಯಾವೆಲ್ಲ ಮಾರ್ಗಸೂಚಿ ಸೌಲಭ್ಯ ಅಳವಡಿಸಿಕೊಂಡಿರಬೇಕು ಈ ಎಲ್ಲ ಮಾನದಂಡಗಳ ಆದಾರದ ಮೇಲೆ ಸಲಹೆ ಹಾಗೂ ವರದಿ ನೀಡಲು ತಜ್ಞರ ಸಲಹಾ ಸಮಿತಿ ರಚಿಸಲಾಗಿದೆ. 

ತಾಂತ್ರಿಕ ಸಮಿತಿಯಲ್ಲಿ ಯಾರೆಲ್ಲ ತಜ್ಞರಿದ್ದಾರೆ..? : ಐಐಐಟಿ ನಿರ್ದೇಶಕರು, ನಿಮ್ಹಾನ್ಸ್ ನಿರ್ದೇಶಕರು, ವಿಟಿಯು ಮಾಜಿ ಕುಲಪತಿಗಳು, ಕಾರ್ಮಿಕ ಇಲಾಖೆಯ ಆಯುಕ್ತರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ( IISC ) ತಜ್ಞರನ್ನ ಈ ಸಮಿತಿಯೊಳಗೊಂಡಿದೆ. ಟೆಂಡರ್ ಹಾಗೂ ಸೇವಾದರ ಆಯ್ಕೆ ಸಂಬಂಧ ಸಲಹೆ ಮಾರ್ಗದರ್ಶನವನ್ನ ನೀಡಲು ಈ ಸಮಿತಿ ರಚನೆಯಾಗಿದೆ. ಈ ಸಮಿತಿ  ಟೆಂಡರ್ ಪ್ರಕ್ರಿಯೇ ಖರೀದಿಯಲ್ಲಿನ ವಿಧಾನ, ಟೆಂಡರ್ ಪ್ಲೋಟೀಂಗ್ ನಲ್ಲಿನ ನ್ಯೂನತೆ ಆಕ್ಷಪಣೆಗಳು, ತಾಂತ್ರಿಕ ದೋಷ, ಪರಿಶೀಲಿಸಿ ಸೇವೆ ನೀಡಲು ಮುಂದಿನ ಒಂದು ತಿಂಗಳೊಳಗೆ ಈ ಸಮಿತಿ ವರದಿ ನೀಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News